ಚಿನ್ನಸ್ವಾಮಿಯಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ; ಜಯಸೂರ್ಯ ದಾಖಲೆ ಪುಡಿ ಪುಡಿ!
ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ನೆಚ್ಚಿನ ಮೈದಾನ, ಅದರಲ್ಲೂ ಆಸ್ಟ್ರೇಲಿಯಾ ವಿರುದ್ದ ಈ ಮೈದಾನದಲ್ಲಿ ರೋಹಿತ್ ಶರ್ಮಾ ಪ್ರತಿ ಭಾರಿ ಅಬ್ಬರಿಸಿದ್ದಾರೆ. ಇದೀಗ ರೋಹಿತ್ ಸೆಂಚುರಿ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. ರೋಹಿತ್ ಸೆಂಚುರಿ ವಿವರ ಇಲ್ಲಿದೆ.
ಬೆಂಗಳೂರು(ಜ.19): ಬಲಿಷ್ಠ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶತಕದ ಓಟ ಮುಂದುವರಿಸಿದ್ದರೆ. ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ 8ನೇ ಶತಕ ಪೂರೈಸಿದ್ದಾರೆ. ಈ ಮೂಲಕ ಆಸೀಸ್ ವಿರುದ್ಧ ಗರಿಷ್ಠ ಶತಕ ಸಿಡಿಸಿದ ಭಾರತದ 3ನೇ ಏಕದಿನ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸೋ ಮೂಲಕ, ಒಂದು ತಂಡದ ವಿರುದ್ಧ ಗರಿಷ್ಠ ಶತಕ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಏಕದಿನದಲ್ಲಿ 9ಸಾವರಿ ರನ್ ಪೂರೈಸಿದ ರೋಹಿತ್ ಶರ್ಮಾ
ಒಂದು ತಂಡದ ವಿರುದ್ಧ ಗರಿಷ್ಠ ಶತಕ(ಏಕದಿನ)
9 ಶತಕ, ಸಚಿನ್ ತೆಂಡುಲ್ಕರ್ vs AUS
9 ಶತಕ, ವಿರಾಟ್ ಕೊಹ್ಲಿ vs WI
8 ಶತಕ, ಸಚಿನ್ ತೆಂಡುಲ್ಕರ್ vs SL
8 ಶತಕ, ವಿರಾಟ್ ಕೊಹ್ಲಿ vs SL
8 ಶತಕ, ವಿರಾಟ್ ಕೊಹ್ಲಿ vs AUS
8 ಶತಕ, ರೋಹಿತ್ ಶರ್ಮಾ vs AUS *
ಇದನ್ನೂ ಓದಿ: ನಾಯಕನಾಗಿ ಧೋನಿ, ಪಾಂಟಿಂಗ್ ಹಿಂದಿಕ್ಕಿ ದಾಖಲೆ ಬರೆದ ಕೊಹ್ಲಿ!
ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮಾ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ ದಾಖಲೆ ಮುರಿದಿದ್ದಾರೆ. ಜಯಸೂರ್ಯ ಏಕದಿನ ಕ್ರಿಕೆಟ್‌ನಲ್ಲಿ 28 ಶತಕ ಸಿಡಿಸಿದ್ದಾರೆ. ರೋಹಿತ್ ಇದೀಗ 29 ಶತಕ ದಾಖಲೆ ಬರೆದಿದ್ದಾರೆ.
ಏಕದಿನದಲ್ಲಿ ಗರಿಷ್ಠ ಶತಕ
49, ಸಚಿನ್ ತೆಂಡುಲ್ಕರ್(ಭಾರತ)
43, ವಿರಾಟ್ ಕೊಹ್ಲಿ(ಭಾರತ)
30, ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ)
29, ರೋಹಿತ್ ಶರ್ಮಾ(ಭಾರತ)
28, ಸನತ್ ಜಯಸೂರ್ಯ(ಶ್ರೀಲಂಕಾ)
27, ಹಶೀಮ್ ಆಮ್ಲಾ(ಸೌತ್ ಆಫ್ರಿಕಾ)