ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!
ಟೀಂ ಇಂಡಿಯಾ ಕ್ರಿಕೆಟಿಗನಿಗೆ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅಜೇಯ 400 ರನ್ ದಾಖಲೆ ಮುರಿಯಲು ಸಾಧ್ಯ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹೇಳಿದ್ದಾರೆ. ವಾರ್ನರ್ ಸೂಚಿಸಿದ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ
ಅಡಿಲೇಡ್(ಡಿ.02): ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್ನಲ್ಲಿ ಡೇವಿಡ್ ವಾರ್ನರ್ 335 ರನ್ ಗಳಿಸಿದ್ದು, ಬ್ರಿಯಾನ್ ಲಾರಾ ಅಜೇಯ 400 ರನ್ ದಾಖಲೆ ಮುರಿಯುವ ಅವಕಾಶ ತಪ್ಪಿಸಿಕೊಂಡಿದ್ದರು. ಆಸ್ಟ್ರೇಲಿಯಾ ಇನಿಂಗ್ಸ್ ಡಿಕ್ಲೇರ್ ಮಾಡದಿದ್ದರೆ ವಾರ್ನರ್, ವಿಂಡೀಸ್ ದಿಗ್ಗಜನ ದಾಖಲೆ ಮುರಿಯುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಲಾರಾ ದಾಖಲೆ ಮುರಿಯುವ ಕುರಿತು ವಾರ್ನರ್ ಹೇಳಿಕೆ ಟೀಂ ಇಂಡಿಯಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಂಬಿ ಬಂದ ಸ್ನೇಹಿತನನ್ನು ನಡು ದಾರಿಯಲ್ಲಿ ಬಿಟ್ಟ ರೋಹಿತ್!.
ಲಾರಾ ದಾಖಲೆ ಮುರಿಯಬಲ್ಲ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ವಾರ್ನರ್, ಭಾರತದ ‘ರೋಹಿತ್ ಶರ್ಮಾ ಈ ದಾಖಲೆ ಮುರಿಯುವ ಸಾಧ್ಯತೆಯಿದೆ. ಒಂದಲ್ಲ ಒಂದು ದಿನ ಖಂಡಿತವಾಗಿ ರೋಹಿತ್ ಇದನ್ನು ಮುರಿಯುತ್ತಾರೆ. ರೋಹಿತ್ ಶರ್ಮಾಗೆ ಇಂತಹ ದೊಡ್ಡ ಇನಿಂಗ್ಸ್ ಕಟ್ಟುವ ಸಾಮರ್ಥ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಮತ್ತೆ ನೋಡಬೇಕೆನಿಸುವ ರೋಹಿತ್ ಹಿಡಿದ ಅದ್ಭುತ ಕ್ಯಾಚ್..!
ನಾವು ದೊಡ್ಡ ಬೌಂಡರಿ ಗೆರೆ ಹೊಂದಿದ್ದೇವೆ. ಚೆಂಡನ್ನು ಬೌಂಡರಿ ಗೆರೆ ದಾಟಿಸುವುದು ಕೆಲವೊಮ್ಮೆ ಬಹಳ ಕಷ್ಟವಾಗುತ್ತದೆ. ಒಮ್ಮೆ ಆಯಾಸವಾದರೆ ಚೆಂಡನ್ನು ಬೌಂಡರಿಗೆ ಹೊಡೆಯುವುದು ಕಷ್ಟವಾಗುತ್ತದೆ’ ಎಂದರು. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ 4 ಇನ್ನಿಂಗ್ಸ್ಗಳಲ್ಲಿ ರೋಹಿತ್ ಒಂದು ದ್ವಿಶತಕ ಸಹಿತ 529 ರನ್ ಕಲೆಹಾಕಿದ್ದರು.