'ನನಗೂ ಬುದ್ದಿಯಿದೆ': ನಿವೃತ್ತಿ ವದಂತಿ ಬೆನ್ನಲ್ಲೇ ಖಡಕ್ ಸಂದೇಶ ರವಾನಿಸಿದ ರೋಹಿತ್ ಶರ್ಮಾ!
ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಫಾರ್ಮ್‌ನ ಕೊರತೆ ಮತ್ತು ತಂಡದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ತಮ್ಮ ನಿವೃತ್ತಿ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ರೋಹಿತ್ ಖಡಕ್ ಉತ್ತರ ನೀಡಿದ್ದಾರೆ.
ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯವು ಟೀಂ ಇಂಡಿಯಾ ಪಾಳಯದಲ್ಲಿ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿದೆ. ಸಿಡ್ನಿ ಟೆಸ್ಟ್ ಪಂದ್ಯ ಆರಂಭಕ್ಕೆ ಕೆಲ ಗಂಟೆಗಳ ಹಿಂದೆ ರೋಹಿತ್ ಶರ್ಮಾ ಕೊನೆಯ ಟೆಸ್ಟ್‌ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದ ನಾಯಕರಾಗಿ ಜಸ್ಪ್ರೀತ್ ಬುಮ್ರಾ ನೇಮಕವಾಗಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಲಿದ್ದಾರೆ ಎನ್ನುವಂತಹ ಗಾಳಿ ಸುದ್ದಿಗಳು ಹರಿದಾಡಿದ್ದವು. ಈ ಕುರಿತಂತೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೊನೆಗೂ ಮೌನ ಮುರಿದಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನಾಡಿ ಕೇವಲ 6.2ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 10 ರನ್ ಈ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ. ಆಸೀಸ್ ನೆಲದಲ್ಲಿ ಈ ಬಾರಿ ರೋಹಿತ್ ಶರ್ಮಾ ರನ್ ಗಳಿಸಲು ಅಕ್ಷರಶಃ ಪರದಾಡಿದ್ದಾರೆ. ಹೀಗಿರುವಾಗಲೇ ಎರಡನೇ ದಿನದಾಟದ ವೇಳೆಯಲ್ಲಿ ರೋಹಿತ್ ಶರ್ಮಾ, ತಾವು ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದ ಮಧ್ಯೆ ಬುಮ್ರಾಗೆ ಪೆಟ್ಟು! ಆಸ್ಪತ್ರೆಗೆ ದೌಡಾಯಿಸಿದ ವೇಗಿ, ಕೊಹ್ಲಿ ಹೆಗಲೇರಿದ ನಾಯಕ ಪಟ್ಟ
ಬ್ರಾಡ್‌ಕಾಸ್ಟರ್ ಕೆಲವು ವರದಿಗಳು ನಿಮಗೆ ರೆಸ್ಟ್ ನೀಡಲಾಗಿದೆ? ಕೈಬಿಡಲಾಗಿದೆ? ಅಥವಾ ನೀವೇ ತಂಡದಿಂದ ಹೊರಗುಳಿದಿದ್ದಾರ ಎನ್ನಲಾಗುತ್ತಿದೆ. ಇದರಲ್ಲಿ ಯಾವುದು ನಿಜ ಎಂದು ರೋಹಿತ್ ಶರ್ಮಾ ಅವರನ್ನು ಕೇಳುತ್ತಾರೆ.
ಆಗ ರೋಹಿತ್ ಶರ್ಮಾ ಇವು ಯಾವು ಕೂಡಾ ನಿಜವಲ್ಲ. ನಾನೇ ಕೋಚ್ ಹಾಗೂ ಸೆಲೆಕ್ಟರ್ಸ್ ಬಳಿ ನನ್ನ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ಹೀಗಾಗಿ ಈ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾಗಿ ಹಿಟ್‌ಮ್ಯಾನ್ ಹೇಳಿದ್ದಾರೆ.
ಟೆಸ್ಟ್ ಟೀಮ್‌ನಿಂದಲೇ ಕ್ಯಾಪ್ಟನ್‌ಗೆ ಕೊಕ್: ಸರಣಿ ಮಧ್ಯವೇ ತಂಡದಿಂದ ಹೊರಬಿದ್ದ ಮೊದಲ ನಾಯಕ ರೋಹಿತ್
'ನಾನು ಕೋಚ್ ಹಾಗೂ ಸೆಲೆಕ್ಟರ್ಸ್ ಬಳಿ, 'ಸದ್ಯ ನಾನೀಗ ಫಾರ್ಮ್‌ನಲ್ಲಿಲ್ಲ. ಇದು ನಮ್ಮ ತಂಡದ ಪಾಲಿಗೆ ಮಹತ್ವದ ಮ್ಯಾಚ್. ಹೀಗಾಗಿ ಒಳ್ಳೆಯ ಫಾರ್ಮ್‌ನಲ್ಲಿರುವವರು ತಂಡದಲ್ಲಿ ಇರಬೇಕು. ಮುಂದಿನ ಭವಿಷ್ಯದ ಬಗ್ಗೆ ಹೆಚ್ಚು ಆಲೋಚಿಸಲು ಹೋಗಿಲ್ಲ. ಸದ್ಯ ಈಗ ತಂಡಕ್ಕೆ ಏನು ಅಗತ್ಯವಿದೆಯೋ ಅದಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
'ನಾನು ಕ್ರಿಕೆಟ್ ಅಡಬೇಕೋ ಬೇಡವೋ, ನಿವೃತ್ತಿಯಾಗಬೇಕು ಎನ್ನುವುದನ್ನು ಬೇರೆ ಯಾರೂ ತೀರ್ಮಾನಿಸಲು ಸಾಧ್ಯವಿಲ್ಲ. ನಾನು ಸೆನ್ಸಿಬಲ್ ವ್ಯಕ್ತಿಯಾಗಿದ್ದೇನೆ. ವಿವೇಚನಾಶೀಲ ವ್ಯಕ್ತಿ ಅದೇ ರೀತಿ ಎರಡು ಮಕ್ಕಳ ತಂದೆ ಕೂಡಾ ಹೌದು, ನನ್ನ ಬಳಿಯೂ ಸ್ವಲ್ಪ ಬುದ್ದಿ ಇದೆ. ನನ್ನ ನಿವೃತ್ತಿಯ ತೀರ್ಮಾನವನ್ನು ಸಮಯ ಬಂದಾಗ ನಾನೇ ತೆಗೆದುಕೊಳ್ಳುತ್ತೇನೆ' ಎಂದು ರೋಹಿತ್ ಶರ್ಮಾ ಟೀಕಾಕಾರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.