ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಭಾರತ ೧೮೫ ರನ್‌ಗಳಿಗೆ ಆಲೌಟ್. ಆಸೀಸ್ 181 ರನ್‌ಗೆ ಸರ್ವಪತನ, ಭಾರತಕ್ಕೆ 4 ರನ್ ಮುನ್ನಡೆ. ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದಾಗಿ ಆಸ್ಪತ್ರೆಗೆ, ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ. ಕೊಹ್ಲಿ ನಾಯಕತ್ವ ವಹಿಸುವರು.

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದ ಭಾರತ, 2 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಆಗಿದೆ. ಈ ಮಧ್ಯೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಮತ್ತು 5ನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಿನ್ನೆ ಆರಂಭವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 185 ರನ್‌ಗಳಿಗೆ ಆಲೌಟ್ ಆಯಿತು. ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ.ಎಲ್.ರಾಹುಲ್ ಮುಂತಾದ ಪ್ರಮುಖ ಆಟಗಾರರು ವಿಫಲರಾದರು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೊದಲ ದಿನದ ಆಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿತ್ತು. ಇಂದು 2ನೇ ದಿನದಾಟ ಆರಂಭದಿಂದಲೇ ಆಸ್ಟ್ರೇಲಿಯಾದ ಆಟಗಾರರು ಸತತವಾಗಿ ವಿಕೆಟ್ ಕಳೆದುಕೊಂಡರು. 

ಜಸ್ಪ್ರೀತ್ ಬುಮ್ರಾಗೆ ಗಾಯ

ಎರಡನೇ ದಿನದಾಟದ ಆರಂಭದಲ್ಲಿ ಮಾರ್ನಸ್ ಲಬುಶೇನ್ ಬುಮ್ರಾ ಎಸೆತದಲ್ಲಿ 2 ರನ್‌ಗೆ ಕ್ಯಾಚ್ ಔಟ್ ಆದರು. ಟ್ರಾವಿಸ್ ಹೆಡ್ (4 ರನ್), ಸ್ಯಾಮ್ ಕಾನ್‌ಸ್ಟಾಸ್‌ (23 ರನ್), ಸ್ಟೀವ್ ಸ್ಮಿತ್ (33 ರನ್) ಸತತವಾಗಿ ಔಟ್ ಆದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 181 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 4 ರನ್‌ಗಳ ಅಲ್ಪ ಮುನ್ನಡೆ ಗಳಿಸಿದೆ. ಈ ಮಧ್ಯೆ, ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಇದ್ದಕ್ಕಿದ್ದಂತೆ ಮೈದಾನ ಬಿಟ್ಟು ಆಸ್ಪತ್ರೆಗೆ ತೆರಳಿದ್ದು ಆಘಾತ ಮೂಡಿಸಿದೆ.

ವಿಜಯ್ ಹಜಾರೆ ಟ್ರೋಫಿ: ಅಪರೂಪದ ವಿಶ್ವದಾಖಲೆ ಬರೆದ ಕನ್ನಡಿಗ ಕರುಣ್ ನಾಯರ್!

ಊಟದ ವಿರಾಮದ ನಂತರ ಬಂದ ಬುಮ್ರಾ ಕೇವಲ ಒಂದು ಓವರ್ ಮಾತ್ರ ಬೌಲಿಂಗ್‌ ಮಾಡಿದರು. ನಂತರ ಅವರು ಅಂಪೈರ್‌ಗಳಿಗೆ ತಿಳಿಸಿ ಮೈದಾನದಿಂದ ಹೊರನಡೆದರು. ಬೆನ್ನಿನ ಗಾಯದಿಂದಾಗಿ ಅವರು ಮೈದಾನದಿಂದ ಹೊರನಡೆದಿದ್ದಾರೆ. ತಂಡದ ವೈದ್ಯಕೀಯ ಸಿಬ್ಬಂದಿಯ ಸಹಾಯದಿಂದ ಅವರು ಮೈದಾನದಿಂದ ಹೊರಟು ಆಸ್ಪತ್ರೆಗೆ ತೆರಳಿದರು.

ಕೊನೆಯ ಇನ್ನಿಂಗ್ಸ್ ಆಡ್ತಾರಾ?

ಅಲ್ಲಿ ಅವರಿಗೆ ಸ್ಕ್ಯಾನ್ ಮಾಡಲಾಗುತ್ತಿದೆ. ಗಾಯದ ತೀವ್ರತೆ ಎಷ್ಟಿದೆ ಎಂಬುದು ಆಗಲೇ ತಿಳಿಯುತ್ತದೆ. ಬಹುಶಃ ಈ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಮತ್ತೆ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಬುಮ್ರಾ ಬದಲಿಗೆ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಟೆಸ್ಟ್‌ ಟೀಮ್‌ನಿಂದಲೇ ಕ್ಯಾಪ್ಟನ್‌ಗೆ ಕೊಕ್‌: ಸರಣಿ ಮಧ್ಯವೇ ತಂಡದಿಂದ ಹೊರಬಿದ್ದ ಮೊದಲ ನಾಯಕ ರೋಹಿತ್

ಕೊಹ್ಲಿ ಹಂಗಾಮಿ ನಾಯಕ: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಹಂಗಾಮಿಯಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಳ್ಳುತ್ತಾರಾ ಅಥವಾ ವಿರಾಟ್ ಕೊಹ್ಲಿಯೇ ಭಾರತ ತಂಡವನ್ನು ಮುನ್ನಡೆಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.