* ಟಿ20ಯಲ್ಲಿ ರೋಹಿತ್​​ ಕ್ಯಾಪ್ಟನ್ಸಿಗಿಲ್ಲ ಯಾರು ಸರಿಸಾಟಿ..! * ಕೇವಲ 8 ತಿಂಗಳ ಅವಧಿಯಲ್ಲಿ ಹಲವಯ ದಾಖಲೆಗಳನ್ನು ಧೂಳೀಪಟ ಮಾಡಿದ ಹಿಟ್‌ಮ್ಯಾನ್* ಡಿಸೆಂಬರ್​​​ 8, 2021 ರಂದು ಟೀಂ ಇಂಡಿಯಾ ನಾಯಕರಾಗಿ ನೇಮಕವಾಗಿದ್ದ ರೋಹಿತ್ 

ಮುಂಬೈ(ಜು.11): ಅರೆಕಾಲಿಕ ನಾಯಕ ಎನಿಸಿಕೊಂಡಿದ್ದ ರೋಹಿತ್ ಶರ್ಮಾಗೆ ಡಿಸೆಂಬರ್​​​ 8, 2021 ರಂದು ಭಾರತ ಕ್ರಿಕೆಟ್ ತಂಡದ ಫುಲ್​​​ಟೈಮ್​ ಕ್ಯಾಪ್ಟನ್​ ಆಗಿ ಬಡ್ತಿ ಸಿಕ್ತು. ಕಿಂಗ್​ ಕೊಹ್ಲಿ ಬಳಿಕ ಮುಂಬೈಕರ್​​ ಟೀಂ​ ಇಂಡಿಯಾ ಚುಕ್ಕಾಣಿ ಹಿಡಿದ್ರು. ಇವರ ಕ್ಯಾಪ್ಟನ್ಸಿ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಮೂಡಿದ್ವು. ಆ ನಿರೀಕ್ಷೆ ಎಲ್ಲೂ ಹುಸಿಯಾಗದಂತೆ ರೋಹಿತ್​​ ಶರ್ಮಾ ಭಾರತ ತಂಡವನ್ನ ಮುನ್ನಡೆಸಿ ಭೇಸ್ ಅನ್ನಿಸಿಕೊಂಡಿದ್ದಾರೆ. ನಾಯಕರಾದ 8 ತಿಂಗಳಲ್ಲೇ ಹಲವು ದಾಖಳೆಗಳ ಒಡೆಯನಾಗಿ ಹೊರಹೊಮ್ಮಿದ್ದು, ಭಾರತ ತಂಡದ ಕ್ಯಾಪ್ಟನ್ಸಿ ಸೇಫ್​​​ ಪರ್ಸನ್​​​ ಕೈಯಲ್ಲಿದೆ ಅನ್ನೋ ಆಶಾಭಾವ ಮೂಡಿಸಿದ್ದಾರೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಬಲಾಢ್ಯ ತಂಡಗಳಿಗೆ ಸೋಲುಣಿಸುವಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಯಶಸ್ವಿಯಾಗಿದೆ. 

ನಾಯಕನಾಗಿ ಸತತ 4 ಟಿ20 ಸಿರೀಸ್​ ಗೆದ್ದ ರೋಹಿತ್​ : 

ಹೌದು, ರೋಹಿತ್​ ಶರ್ಮಾ ಕ್ಯಾಪ್ಟನ್ ಆದ ಬಳಿಕ ಟೀಂ​ ಇಂಡಿಯಾ (Indian Cricket Team) ಒಂದೂ ಟಿ20 ಸರಣಿಯನ್ನೂ ಸೋತಿಲ್ಲ. ಪ್ರಸಕ್ತ ಇಂಗ್ಲೆಂಡ್ ಟಿ20 ಸರಣಿ ಸೇರಿ ಸತತ 4 ಸಿರೀಸ್​​​​ಗಳನ್ನ ಗೆಲ್ಲಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್​​​, ವೆಸ್ಟ್​​ಇಂಡೀಸ್​​​​​​​​​​​​​​​​ ಹಾಗೂ ಲಂಕಾ ವಿರುದ್ಧ ಕ್ಲೀನ್​ಸ್ವೀಪ್​ ಸಾಧಿಸಿದ್ರೆ, ಆಂಗ್ಲರ ವಿರುದ್ಧವೂ ಸಿರೀಸ್​ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬರೀ ಟಿ20 ಸರಣಿ ಮಾತ್ರವಲ್ಲ. ಇವರ ಕ್ಯಾಪ್ಟನ್ಸಿಯಲ್ಲಿ ವೆಸ್ಟ್​​​ಇಂಡೀಸ್​​​​​​​​ ವಿರುದ್ಧ ಏಕದಿನ ಹಾಗೂ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿಯಲ್ಲೂ ಭಾರತದ ಗೆಲುವಿನ ನಗಾರಿ ಬಾರಿಸಿದೆ. ಅಲ್ಲಿಗೆ ರೋಹಿತ್​ ಶರ್ಮಾ ಎಲ್ಲಾ ಮಾದರಿಯಲ್ಲಿ 6 ಸರಣಿಗಳನ್ನ ಮುನ್ನಡೆಸಿದ್ದು, ಎಲ್ಲದರಲ್ಲೂ ಗೆದ್ದಂತಾಗಿದೆ.

ಧೋನಿ, ಕೊಹ್ಲಿಯನ್ನೇ ಹಿಂದಿಕ್ಕಿದ ಹಿಟ್​ಮ್ಯಾನ್: 

ಯೆಸ್​​​​, ಗೆಲುವಿನ ಸರಾಸರಿಯಲ್ಲಿ ರೋಹಿತ್​​ ದಿ ಗ್ರೇಟ್​​​ ಧೋನಿ ಹಾಗೂ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ. ಅರೆಕಾಲಿಕ ಹಾಗೂ ಫುಲ್​ಟೈಮ್​​​ ನಾಯಕನಾಗಿ ಒಟ್ಟು 30 ಪಂದ್ಯಗಳನ್ನ ಲೀಡ್ ಮಾಡಿದ್ದು, 26 ರಲ್ಲಿ ಗೆದ್ದಿದ್ದಾರೆ. ಬರೀ 4 ರಲ್ಲಷ್ಟೇ ಭಾರತ ಸೋತಿದೆ. ಗೆಲುವಿನ ಸರಾಸರಿಯಲ್ಲಿ ರೋಹಿತ್ ಶೇಕಡಾ 86.66ರಷ್ಟು ಸರಾಸರಿ ಹೊಂದಿದ್ದಾರೆ. ಮಾಜಿ ಕ್ಯಾಪ್ಟನ್​​ ಕೊಹ್ಲಿ ಶೇಕಡಾ 64.58 ಹಾಗೂ ಎಂ.ಎಸ್ ಧೋನಿ 59.28ರ ಸರಾಸರಿ ಹೊಂದಿದ್ದಾರೆ.

Ind vs Eng: ಟೀಂ​​ ಇಂಡಿಯಾ ಪ್ಲೇಯರ್ಸ್​ಗೆ ಡಬಲ್ ಧಮಾಕ..!

ಎಲ್ಲಾ ಮಾದರಿಯಲ್ಲಿ ಸತತ 19 ಗೆಲುವು: 

ಇನ್ನು ರೋಹಿತ್ ಶರ್ಮಾ ಎಲ್ಲಾ ಮಾದರಿಯಲ್ಲಿ ಒಟ್ಟು 19 ಪಂದ್ಯಗಳನ್ನ ಜಯಿಸಿ ಕೊಟ್ಟಿದ್ದಾರೆ. ಆದರೆ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವಲ್ಲಿ ವಿಫಲವಾಗಿದ್ದಾರೆ. 2003ರಲ್ಲಿ ರಿಕಿ ಪಾಂಟಿಂಗ್​​ ಆಸ್ಟ್ರೇಲಿಯಾ ತಂಡವನ್ನು ಸತತ 20 ಪಂದ್ಯಗಳಲ್ಲಿ ನಾಯಕನಾಗಿ ಗೆಲ್ಲಿಸಿದ್ರು. ಆ ದಾಖಲೆ ಸರಿಗಟ್ಟಲು ಹಿಟ್‌ಮ್ಯಾನ್ ಕೊನೆಯ ಕ್ಷಣದಲ್ಲಿ ವಿಫಲವಾದರು.