* ಇಂಗ್ಲೆಂಡ್ ಎದುರು ಟಿ20 ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ* ಇಂಗ್ಲೆಂಡ್‌ನಲ್ಲಿ ಟ್ರೋಫಿ ಗೆಲುವಿನ ಜೊತೆ ಮಹೇಂದ್ರ ಬಾಹುಬಲಿಯ ದರ್ಶನ* ಟೀಂ ಇಂಡಿಯಾ ಯುವ ಆಟಗಾರರಿಗೆ ಪಾಠ ಮಾಡಿದ ಧೋನಿ
ಬರ್ಮಿಂಗ್‌ಹ್ಯಾಮ್(ಜು.11): ದಿ ಗ್ರೇಟ್ ಕ್ಯಾಪ್ಟನ್ ಎಂ.ಎಸ್ ಧೋನಿ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ರು. ಇದಾದ ಬಳಿಕ ಐಪಿಎಲ್ನಲ್ಲಷ್ಟೇ ಮಹೇಂದ್ರ ಬಾಹುಬಲಿಯ ದರ್ಶನ ಸಿಗ್ತಿತ್ತು. ಕ್ಯಾಶ್ ರಿಚ್ ಲೀಗ್ನಿಂದ ಬಿಡುವಿದ್ದಾಗಲೆಲ್ಲಾ ಫ್ಯಾಮಿಲಿ ಜೊತೆ ಸಮಯ ಕಳಿತಿದ್ರು. ಅದನ್ನ ಬಿಟ್ರೆ ಚಾಂಪಿಯನ್ ಕ್ಯಾಪ್ಟನ್ ಸುದ್ದಿಯಾಗಿದ್ದೇ ಕಮ್ಮಿ. ಈಗ ಈ ಚಾಣಾಕ್ಷ ಕ್ರಿಕೆಟಿಗ ಟೀಂ ಇಂಡಿಯಾ ಪ್ಲೇಯರ್ಸ್ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಯಂಗ್ ಕ್ರಿಕೆಟರ್ಸ್ಗೆ ಪಾಠ ಮಾಡಿದ ಮಾಸ್ಟರ್:
ಒಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (Team India) 2ನೇ ಟಿ20ಯಲ್ಲಿ ಇಂಗ್ಲೆಂಡ್ ತಂಡವನ್ನ ಮಣಿಸಿ ಸರಣಿ ಗೆದ್ದ ಖುಷಿಯಲ್ಲಿತ್ತು. ಈ ಸಂಭ್ರಮವನ್ನ ಲೆಜೆಂಡರಿ ಕ್ಯಾಪ್ಟನ್ ಧೋನಿ ಡಬಲ್ ಮಾಡಿದ್ರು. ಪಂದ್ಯ ಮುಗಿದ ಬಳಿಕ ಮಹಿ ಟೀಂ ಇಂಡಿಯಾ ಆಟಗಾರರ ಡ್ರೆಸ್ಸಿಂಗ್ ರೂಮ್ಗೆ ಎಂಟ್ರಿ ಕೊಟ್ಟು ಕೆಲಕಾಲ ಸಂವಾದ ನಡೆಸಿದ್ರು. ಪಂದ್ಯ ಮುಕ್ತಾಯದ ಬಳಿಕ ರೋಹಿತ್ ಬಾಯ್ಸ್ ಜೊತೆ ಕಾಣಿಸಿಕೊಂಡ ಮಾಸ್ಟರ್ ಮಹಿ ಯಂಗ್ಸ್ಟರ್ಸ್ಗೆ ಪಾಠ ಮಾಡಿದ್ರು. ಬಿಸಿಸಿಐ (BCCI) ಹಂಚಿಕೊಂಡಿರುವ ಫೋಟೋಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಹಾಗೂ ಸ್ಪಿನ್ನರ್ ಚಹಲ್ ಧೋನಿ ಅವರ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಆಲಿಸುತ್ತಿರುವುದು ಕಂಡುಬಂದಿದೆ.
ಬ್ರಿಟನ್ ಪ್ರವಾಸ ಧೋನಿ ಫುಲ್ ಬ್ಯುಸಿ :
ಹೌದು, ಸದ್ಯ ಮಹಿ ಬ್ರಿಟನ್ ಪ್ರವಾಸದಲ್ಲಿದ್ದಾರೆ. ಈ ವಾರದ ಆರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಇಂಗ್ಲೆಂಡ್ಗೆ ತೆರಳಿದ್ರು. ಈ ಜೋಡಿ ಜುಲೈ 4 ರಂದು ತಮ್ಮ 12ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಸಂಭ್ರಮಿಸಿತು. ಜುಲೈ 7ರಂದು ಎಮ್ಎಸ್ಡಿ 41ನೇ ಹುಟ್ಟುಹಬ್ಬವನ್ನು ಇಲ್ಲೇ ಆಚರಿಸಿಕೊಂಡಿದ್ದಲ್ಲದೆ, ವಿಂಬಲ್ಡನ್ ಪಂದ್ಯ ಕೂಡ ವೀಕ್ಷಿಸಿದ್ರು.
ವಿಂಬಲ್ಡನ್‌ನಲ್ಲಿ ಟೆನಿಸ್ ಪಂದ್ಯ ವೀಕ್ಷಿಸಿ ಬರ್ತ್‌ಡೇ ಸಂಭ್ರಮ ಆಚರಿಸಿದ ಎಂಎಸ್‌ಡಿ!
ಪಂತ್ ಫೋಟೋ ಇರುವ ಮುಖವಾಡ ಧರಿಸಿದ ಧೋನಿ!
ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ 2ನೇ ಟಿ20 ವೇಳೆ ಎಜ್‌ಬಾಸ್ಟನ್ ಕ್ರೀಡಾಂಗಣದ ಬಳಿ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರ ಫೋಟೋ ಇರುವ ಮುಖವಾಡವನ್ನು ಧರಿಸಿ ತಮ್ಮ ಆಪ್ತರೊಂದಿಗೆ ಫೋಟೋಗೆ ಪೋಸ್ ನೀಡಿದ್ದು, ಆ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ ಪಂದ್ಯದ ಮುಕ್ತಾಯಗೊಂಡ ಬಳಿಕ ಧೋನಿ ಭಾರತ ತಂಡದ ಡ್ರೆಸ್ಸಿಂಗ್ ಕೋಣೆಗೆ ತೆರಳಿ ಆಟಗಾರರ ಜೊತೆ ಸಮಾಲೋಚನೆ ನಡೆಸಿದ ಫೋಟೋಗಳು ಸಹ ವೈರಲ್ ಆಗಿವೆ.
