2024ರ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಬಲಿಷ್ಠ ಟಿ20 ತಂಡ ಕಟ್ಟಲು ಪ್ಲಾನ್ಬಿಸಿಸಿಐ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಕೈಗೊಳ್ಳುವ ಸಾಧ್ಯತೆ 6-7 ಹಿರಿಯ ಆಟಗಾರರಿಗೆ ಇನ್ನು ಮುಂದೆ ತಂಡದಲ್ಲಿ ಸ್ಥಾನ ನೀಡದಿರಲು ನಿರ್ಧಾರ?

ನವದೆಹಲಿ(ಡಿ.29): ಮುಂಬರುವ 2024ರ ಟಿ20 ವಿಶ್ವಕಪ್‌ ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಕೈಗೊಳ್ಳುವ ಸಾಧ್ಯತೆ ಇದ್ದು, 6-7 ಹಿರಿಯ ಆಟಗಾರರಿಗೆ ಇನ್ನು ಮುಂದೆ ತಂಡದಲ್ಲಿ ಸ್ಥಾನ ನೀಡದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ. 

ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ, ಭುವನೇಶ್ವರ್‌ ಕುಮಾರ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್‌ ಹಾಗೂ ರವಿಚಂದ್ರನ್ ಅಶ್ವಿನ್‌ಗೆ ಇನ್ನು ಮುಂದೆ ತಮಗೆ ಟಿ20 ತಂಡದಲ್ಲಿ ಸ್ಥಾನ ನೀಡುವುದಿಲ್ಲ ಎಂದು ತಿಳಿಸಿದೆ ಎನ್ನಲಾಗಿದೆ. ಜೊತೆಗೆ ಕೆ.ಎಲ್‌.ರಾಹುಲ್‌ರನ್ನೂ ಹೊರಗಿಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ಇನ್ನೂ ಕೆಲ ಅವಕಾಶಗಳನ್ನು ನೀಡಲು ಬಿಸಿಸಿಐ ಚಿಂತಿಸುತ್ತಿದ್ದು, ಅವರ ಆಟ ಸುಧಾರಿಸದಿದ್ದರೇ, ಟಿ20 ತಂಡದಿಂದ ಪಂತ್‌ಗೂ ಗೇಟ್‌ಪಾಸ್ ನೀಡುವ ಬಗ್ಗೆ ಬಿಸಿಸಿಐ ಚರ್ಚೆ ನಡೆಸಿದೆ ಎಂದು ಹೇಳಲಾಗಿದೆ

ಐಸಿಸಿ ಉದಯೋನ್ಮುಖ ಆಟಗಾರರ ಪ್ರಶಸ್ತಿ ರೇಸ್‌ನಲ್ಲಿ ಅಶ್‌ರ್‍ದೀಪ್‌

ದುಬೈ: ಭಾರತದ ಯುವ ವೇಗಿ ಅಶ್‌ರ್‍ದೀಪ್‌ ಸಿಂಗ್‌ ಐಸಿಸಿ ವರ್ಷದ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 6 ತಿಂಗಳೊಳಗೆ ಅಶ್‌ರ್‍ದೀಪ್‌ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದು, ದ.ಆಫ್ರಿಕಾದ ಮಾರ್ಕೊ ಯಾನ್ಸನ್‌, ನ್ಯೂಜಿಲೆಂಡ್‌ನ ಫಿನ್‌ ಆ್ಯಲೆನ್‌ ಹಾಗೂ ಅಷ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್‌ ಜೊತೆ ಪೈಪೋಟಿ ನಡೆಸಲಿದ್ದಾರೆ. 

2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ಸಿದ್ದ: ಅನುರಾಗ್ ಠಾಕೂರ್

ಇನ್ನು ಮಹಿಳೆಯರ ವಿಭಾಗದಲ್ಲಿ ಭಾರತದ ವೇಗಿ ರೇಣುಕಾ ಸಿಂಗ್‌, ಬ್ಯಾಟರ್‌ ಯಸ್ತಿಕಾ ಬಾಟಿಯಾ ನಾಮನಿರ್ದೇಶನಗೊಂಡಿದ್ದು, ಆಸ್ಪ್ರೇಲಿಯಾದ ಡಾರ್ಸಿ ಬ್ರೌನ್‌, ಇಂಗ್ಲೆಂಡ್‌ನ ಅಲೈಸ್‌ ಕ್ಯಾಪ್ಸಿ ಕೂಡ ರೇಸ್‌ನಲ್ಲಿದ್ದಾರೆ. ಜನವರಿಯಲ್ಲಿ ವೋಟಿಂಗ್‌ ಆರಂಭವಾಗಲಿದೆ.

ಟೆಸ್ಟ್‌ ರ‍್ಯಾಂಕಿಂಗ್‌‌: ಶ್ರೇಯಸ್‌ @16

ದುಬೈ: ಬುಧವಾರ ಪ್ರಕಟಗೊಂಡ ಐಸಿಸಿ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ಭಾರತದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ವೃತ್ತಿಬದುಕಿನ ಶ್ರೇಷ್ಠ 16ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅಯ್ಯರ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌‌ನಲ್ಲಿ 10 ಸ್ಥಾನ ಜಿಗಿತ ಕಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್‌, ಒಂದು ಸ್ಥಾನ ಏರಿಕೆ ಕಂಡು ಬೂಮ್ರಾ ಜೊತೆ ಜಂಟಿ 4ನೇ ಸ್ಥಾನ ಹಂಚಿಕೊಂಡಿದ್ದಾರೆ.

ಐಪಿಎಲ್‌: ಮುಂಬೈಗೆ ರಾಜ್ಯದ ಅರುಣ್‌ ಸಹಾಯಕ ಕೋಚ್‌

ಮುಂಬೈ: ಐಪಿಎಲ್‌ನ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಕರ್ನಾಟಕದ ಮಾಜಿ ಆಟಗಾರ, ಅನುಭವಿ ತರಬೇತುದಾರ ಜೆ.ಅರುಣ್‌ ಕುಮಾರ್‌ ಸಹಾಯಕ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 1993ರಿಂದ 2008ರ ವರೆಗೆ 16 ವರ್ಷಗಳ ಕಾಲ ಕರ್ನಾಟಕ ಪರ 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅರುಣ್‌, ಬಳಿಕ ಕರ್ನಾಟಕದ ಕೋಚ್‌ ಅಗಿ ಕಾರ‍್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ರಾಜ್ಯ ತಂಡ 2013-14, 2014-15ರ ಆವೃತ್ತಿಯಲ್ಲಿ ಸತತವಾಗಿ ರಣಜಿ, ಇರಾನಿ ಕಪ್‌ ಹಾಗೂ ವಿಜಯ್‌ ಹಜಾರೆ ಪ್ರಶಸ್ತಿ ಜಯಿಸಿತ್ತು. ಪಂಜಾಬ್‌ ಕಿಂಗ್‌್ಸನ ಬ್ಯಾಟಿಂಗ್‌ ಕೋಚ್‌ ಆಗಿದ್ದ ಅವರು, 2020ರಲ್ಲಿ ಅಮೆರಿಕ ರಾಷ್ಟ್ರೀಯ ಕ್ರಿಕೆಟ್‌ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು.