Asianet Suvarna News Asianet Suvarna News

ಇಂಗ್ಲೆಂಡ್ ಬೌಲರ್‌ಗಳನ್ನು ಚೆಂಡಾಡಿದ ಸಚಿನ್ ತೆಂಡುಲ್ಕರ್; ಟಿ20 ವಿಶ್ವಕಪ್‌ಗೆ ಬ್ಯಾಕ್‌ಅಪ್‌ ಓಪನ್ನರ್ ಎಂದ ನೆಟ್ಟಿಗರು..!

* ರೋಡ್ ಸೇಫ್ಟಿ ವರ್ಲ್ಡ್‌ ಸೀರಿಸ್‌ನಲ್ಲಿ ಸಚಿನ್ ತೆಂಡುಲ್ಕರ್ ಅಬ್ಬರ
* ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಮಾಸ್ಟರ್ ಬ್ಲಾಸ್ಟರ್
* ಇಂಗ್ಲೆಂಡ್ ಲೆಜೆಂಡ್ಸ್ ಎದುರು ಇಂಡಿಯಾ ಲೆಜೆಂಡ್ಸ್‌ ಜಯಭೇರಿ

Road Safety World Series Cricket Fans in awe as Sachin Tendulkar demolishes England Legends bowlers kvn
Author
First Published Sep 23, 2022, 11:46 AM IST

ಕಾನ್ಪುರ(ಸೆ.23): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಸುಮಾರು 9 ವರ್ಷಗಳಾಗುತ್ತಾ ಬಂದಿದೆ. ಆದರೆ ಅವರಿಗೆ ಕ್ರಿಕೆಟ್‌ನಲ್ಲಿ ಹೆಚ್ಚು ಹೆಚ್ಚು ರನ್ ಬಾರಿಸುವ ದಾಹ ಇನ್ನೂ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಸದ್ಯ ರೋಡ್ ಸೇಫ್ಟಿ ವರ್ಲ್ಡ್‌ ಸೀರಿಸ್‌ನಲ್ಲಿ ಪಾಲ್ಗೊಂಡಿರುವ ಸಚಿನ್ ತೆಂಡುಲ್ಕರ್, ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಸಚಿನ್ ಬ್ಯಾಟಿಂಗ್ ಪ್ರದರ್ಶನ ಕಂಡು, ಭಾರತ ತಂಡಕ್ಕೆ ಬ್ಯಾಕ್ ಅಪ್ ಓಪನ್ನರ್ ಆಗಿ ಸಚಿನ್ ತೆಂಡುಲ್ಕರ್ ಸಿಕ್ಕಿದ್ದಾರೆ ಎಂದು ಕೊಂಡಾಡಿದ್ದಾರೆ.

ಹೌದು, ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್‌ ಸೀರಿಸ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬ್ಯಾಟ್‌ ಅಕ್ಷರಶಃ ಘರ್ಜಿಸುತ್ತಿದೆ. 49 ವರ್ಷದ ಸಚಿನ್ ತೆಂಡುಲ್ಕರ್, ಇಂಗ್ಲೆಂಡ್ ಲೆಜೆಂಡ್ಸ್‌ ವಿರುದ್ದ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇಂಡಿಯನ್ ಲೆಜೆಂಡ್ಸ್‌ ತಂಡಕ್ಕೆ ಭರ್ಜರಿ ಗೆಲುವಿನ ಸಿಹಿ ಉಣಬಡಿಸಿದ್ದಾರೆ. ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಡಿಯಾ ಲೆಜೆಂಡ್ಸ್‌ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಬೌಂಡರಿಯೊಂದಿಗೆ ರನ್ ಖಾತೆ ತೆರೆದ ತೆಂಡುಲ್ಕರ್, ಮೂರನೇ ಓವರ್ ಬೌಲಿಂಗ್ ಮಾಡಿದ ಕ್ರಿಸ್ ಟ್ರೆಮ್ಲೆಟ್ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ತಮ್ಮ ಹಳೆಯ ಆಟವನ್ನು ನೆನಪಿಸಿದರು.

ಇಂಗ್ಲೆಂಡ್‌ ಆಲ್ರೌಂಡರ್ ಜತೆ ಹಾರ್ದಿಕ್ ಪಾಂಡ್ಯ ಹೋಲಿಕೆ ಸಾಧ್ಯವೇ ಇಲ್ಲವೆಂದ ಪಾಕ್ ಮಾಜಿ ಕ್ರಿಕೆಟಿಗ..!

ಇಂಡಿಯಾ ಲೆಜೆಂಡ್ಸ್‌ ತಂಡವು ಕೇವಲ 6.2 ಓವರ್‌ಗಳಲ್ಲಿ 67 ರನ್‌ಗಳನ್ನು ಕಲೆಹಾಕುವ ಮೂಲಕ ಸ್ಪೋಟಕ ಆರಂಭವನ್ನು ತೆಂಡುಲ್ಕರ್ ಒದಗಿಸಿಕೊಟ್ಟರು. ತೆಂಡುಲ್ಕರ್ ಕೇವಲ 20 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ ತಮ್ಮ ಹೊಳಪು ಕಳೆದುಕೊಳ್ಳದ ತೆಂಡುಲ್ಕರ್ ಬ್ಯಾಟಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದಿತ್ಯ ಭಟ್ಟಾಚಾರ್ಯ ಎನ್ನುವ ನೆಟ್ಟಿಗರೊಬ್ಬರು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಚಿನ್ ತೆಂಡುಲ್ಕರ್ ಅವರನ್ನು ಬ್ಯಾಕ್ ಅಪ್ ಓಪನ್ನರ್ ಆಗಿ ಆಯ್ಕೆ ಮಾಡಿಕೊಳ್ಳಲಿ ಎನ್ನುವ ಸಲಹೆ ನೀಡಿದ್ದಾರೆ.

ಇಂಗ್ಲೆಂಡ್ ಲೆಜೆಂಡ್ಸ್‌ ಎದುರು ಇಂಡಿಯಾ ಲೆಜೆಂಡ್ಸ್‌ಗೆ ಭರ್ಜರಿ ಜಯ

ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್ ಹಾಗೂ ರಾಜೇಶ್ ಪೊವಾರ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಇಂಡಿಯಾ ಲೆಜೆಂಡ್ಸ್ ತಂಡವು ಇಂಗ್ಲೆಂಡ್ ಲೆಜೆಂಡ್ಸ್‌ ಎದುರು 40 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಪಂದ್ಯದ ಇನಿಂಗ್ಸ್‌ಗಳನ್ನು 15 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ಮೊದಲು ಬ್ಯಾಟ್ ಮಾಡಿದ ಇಂಡಿಯಾ ಲೆಜೆಂಡ್ಸ್‌ ತಂಡಕ್ಕೆ ಸಚಿನ್ ತೆಂಡುಲ್ಕರ್(40), ಯುವರಾಜ್ ಸಿಂಗ್(ಅಜೇಯ 31 ರನ್ 15 ಎಸೆತ)ನೆರವಿನಿಂದ 5 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತ್ತು. ಇನ್ನು ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ಲೆಜೆಂಡ್ಸ್‌ ತಂಡವು 6 ವಿಕೆಟ್ ಕಳೆದುಕೊಂಡು ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಯಿತು.

Follow Us:
Download App:
  • android
  • ios