Asianet Suvarna News Asianet Suvarna News

ಕೊಹ್ಲಿಯ ಒಂದೇ ಮಾತಿನಿಂದ ಬದಲಾಯ್ತು ಆಟ..! ಟೀಕೆ- ಟ್ರೋಲ್‌ಗಳನ್ನ ಮೆಟ್ಟಿನಿಂತ ಯಂಗ್ ಕ್ರಿಕೆಟರ್!

ವಿರಾಟ್ ಕೊಹ್ಲಿ..! ಕ್ರಿಕೆಟ್ ದುನಿಯಾದಲ್ಲಿ, ಅದರಲ್ಲೂ ಭಾರತೀಯ ಕ್ರಿಕೆಟ್ನಲ್ಲಿ ಕೊಹ್ಲಿ ಬರೀ ಹೆಸರಲ್ಲ. ಅದೊಂದು ಬ್ರ್ಯಾಂಡ್..! ಯುವ ಕ್ರಿಕೆಟಿಗರ ಪಾಲಿಗಂತೂ ಕೊಹ್ಲಿ ಬಿಗ್ ಇನ್ಸಿಪಿರೇಷನ್. ಕೊಹ್ಲಿ ಇಂದು ಗ್ರೇಟೆಸ್ಟ್ ಬ್ಯಾಟರ್ ಆಗಿರೋದಕ್ಕೆ ಆಟದ ಮೇಲಿನ ಅವರ ಡೆಡಿಕೇಷನ್, ಹಾರ್ಡ್‌ವರ್ಕ್, ಕಮಿಟ್ಮೆಂಟ್, ನೆವರ್ ಗಿವ್ಅಪ್ ಆ್ಯಟಿಟ್ಯುಡೇ ಕಾರಣ. ಇದೇ ಕಾರಣಕ್ಕೆ ಯಂಗ್ ಕ್ರಿಕೆಟರ್ಸ್ ಕೊಹ್ಲಿಯನ್ನ ಫಾಲೋ ಮಾಡ್ತಾರೆ. ನಾವು ಕೊಹ್ಲಿಯಂತೆ ಆಗ್ಬೇಕು ಅಂತ ಕನಸು ಕಾಣ್ತಾರೆ. 

Riyan Parag reveals Virat Kohli get the reality check advice to him in tough days kvn
Author
First Published Jan 10, 2024, 12:30 PM IST

ಬೆಂಗಳೂರು(ಜ) ಭಾರತದ ಈ ಆಟಗಾರನಷ್ಟು ಟ್ರೋಲ್ಗೊಳಗಾದ ಆಟಗಾರ ಮತ್ತೊಬ್ಬರಿಲ್ಲ. ಆದ್ರೆ, ಇದೇ ಆಟಗಾರ ತನ್ನ ಆಟದ ಮೂಲಕ ಅಬ್ಬರಿಸ್ತಿದ್ದಾನೆ. ಆ ಮೂಲಕ ಎಲ್ಲಾ ಟೀಕೆಗಳಿಗೂ ತಿರುಗೇಟು ನೀಡಿದ್ದಾನೆ. ಇನ್ನು ಈ ಯಂಗ್‌ಸ್ಟರ್ ಸಕ್ಸಸ್‌ಗೆ ಟೀಂ ಇಂಡಿಯಾದ ಈ ಸ್ಟಾರ್ ಕಾರಣವಾಗಿದ್ದಾರೆ. ಯಾರು ಆ ಯಂಗ್‌ಸ್ಟರ್ ಅಂತೀರಾ..? ಈ ಸ್ಟೋರಿ ನೋಡಿ...! 

ದೇಶೀಯ ಕ್ರಿಕೆಟ್ನಲ್ಲಿ ರಿಯಾನ್ ಪರಾಗ್ ಅಬ್ಬರ..!

ವಿರಾಟ್ ಕೊಹ್ಲಿ..! ಕ್ರಿಕೆಟ್ ದುನಿಯಾದಲ್ಲಿ, ಅದರಲ್ಲೂ ಭಾರತೀಯ ಕ್ರಿಕೆಟ್ನಲ್ಲಿ ಕೊಹ್ಲಿ ಬರೀ ಹೆಸರಲ್ಲ. ಅದೊಂದು ಬ್ರ್ಯಾಂಡ್..! ಯುವ ಕ್ರಿಕೆಟಿಗರ ಪಾಲಿಗಂತೂ ಕೊಹ್ಲಿ ಬಿಗ್ ಇನ್ಸಿಪಿರೇಷನ್. ಕೊಹ್ಲಿ ಇಂದು ಗ್ರೇಟೆಸ್ಟ್ ಬ್ಯಾಟರ್ ಆಗಿರೋದಕ್ಕೆ ಆಟದ ಮೇಲಿನ ಅವರ ಡೆಡಿಕೇಷನ್, ಹಾರ್ಡ್‌ವರ್ಕ್, ಕಮಿಟ್ಮೆಂಟ್, ನೆವರ್ ಗಿವ್ಅಪ್ ಆ್ಯಟಿಟ್ಯುಡೇ ಕಾರಣ. ಇದೇ ಕಾರಣಕ್ಕೆ ಯಂಗ್ ಕ್ರಿಕೆಟರ್ಸ್ ಕೊಹ್ಲಿಯನ್ನ ಫಾಲೋ ಮಾಡ್ತಾರೆ. ನಾವು ಕೊಹ್ಲಿಯಂತೆ ಆಗ್ಬೇಕು ಅಂತ ಕನಸು ಕಾಣ್ತಾರೆ. 

ಕೇಪ್‌ಟೌನ್ ಪಿಚ್‌ ಬಗ್ಗೆ ಐಸಿಸಿ ಅತೃಪ್ತಿ; ಒಂದು ಡಿಮೆರಿಟ್‌ ಅಂಕ..!

ಇನ್ನು ಕೊಹ್ಲಿಯು ತಮ್ಮ ಜೂನಿಯರ್ಗಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ಗೈಡ್ ಮಾಡ್ತಾರೆ. ವೈಫಲ್ಯದಿಂದ ಮೇಲೆದ್ದು ಬರೋದು ಹೇಗೆ ಅಂತ ಸಲಹೆ ನೀಡ್ತಾರೆ. ಕೊಹ್ಲಿಯ ಸಲಹೆಯಿಂದಲೇ ಈ ಯಂಗ್‌ಸ್ಟರ್, ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾನೆ. ಆ ಮೂಲಕ ತನ್ನ ವಿರುದ್ಧದ ಟೀಕೆಗಳಿಗೆ ಆಟದ ಮೂಲಕವೇ ಉತ್ತರಿಸಿದ್ದಾನೆ. ಅದು ಬೇರ್ಯಾರು ಅಲ್ಲ ರಿಯಾನ್ ಪರಾಗ್..!

ಯೆಸ್, ರಿಯಾನ್ ಪರಾಗ್‌ನಷ್ಟು ಟ್ರೋಲ್‌ಗೊಳಗಾದ ಭಾರತದ ಯುವ ಕ್ರಿಕೆಟರ್ ಮತ್ತೊಬ್ಬರಿಲ್ಲ. ಅದಕ್ಕೆ ಕಾರಣ, IPLನಲ್ಲಿನ ಫ್ಲಾಪ್ ಶೋ. ಈ ಬಾರಿಯ IPLನಲ್ಲೂ ಪರಾಗ್ ವೈಫಲ್ಯ ಅನುಭವಿಸಿದ್ರು. ಆದ್ರೆ, ದೇಶಿ ಕ್ರಿಕೆಟ್ನಲ್ಲಿ ಪರಾಗ್ ಅಬ್ಬರಿಸ್ತಿದ್ದಾರೆ. ಅಸ್ಸಾಂ ತಂಡದ ನಾಯಕರಾಗಿರೋ ಪರಾಗ್, ಛತ್ತೀಸ್‌ಗಡ್ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 8ರನ್ ಔಟಾದ ಪರಾಗ್, ಎರಡನೇ ಇನ್ನಿಂಗ್ಸ್ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್ಗಿಳಿದು ಜಸ್ಟ್ 87 ಎಸೆತಗಳಲ್ಲಿ 11 ಬೌಂಡರಿ, 12 ಭರ್ಜರಿ ಸಿಕ್ಸರ್ಗಳ ಸಹಿತ 155 ರನ್ ಸಿಡಿಸಿದ್ದಾರೆ.  

ಪಾಂಡ್ಯ-ರೋಹಿತ್ ನಡುವೆ ಸೇಡಿಗೆ ಸೇಡು: ಜಿದ್ದಾಜಿದ್ದಿಗೆ ಬಿದ್ದಿದ್ದಾರಾ ಇಬ್ಬರು ಪ್ಲೇಯರ್ಸ್..?

ಇನ್ನು ಕಳೆದ ವರ್ಷ ನಡೆದ ದೇವ್‌ಧರ್ ಟ್ರೋಫಿಯಲ್ಲಿ ಪರಾಗ್ ಅದ್ಭುತ ಬ್ಯಾಟಿಂಗ್ ಮೂಲಕ ಅಬ್ಬರಿಸಿ, ತನ್ನ ಸಾಮರ್ಥ್ಯ ಪ್ರೂವ್ ಮಾಡಿದ್ರು. 5 ಇನ್ನಿಂಗ್ಸ್‌ಗಳಿಂದ 2 ಶತಕ ಮತ್ತು 1 ಅರ್ಧಶತಕ ಸಹಿತ 354 ರನ್ ಸಿಡಿಸಿದ್ರು. ಟೂರ್ನಿಯಲ್ಲಿ ಅತಿಹೆಚ್ಚು 23 ಸಿಕ್ಸರ್ ಬಾರಿಸಿದ್ರು. 

ಪರಾಗ್‌ರ ಸಕ್ಸಸ್‌ಗೆ ವಿರಾಟ್ ಸಲಹೆಗಳೇ ಕಾರಣ..! 

ಕೊಹ್ಲಿಯ ಹಾರ್ಡ್‌ಕೋರ್ ಫ್ಯಾನ್ ಆಗಿರೋ ಪರಾಗ್, 2023ರ IPLನಲ್ಲಿ ಫೇಲ್ ಆದಾಗ, ಕೊಹ್ಲಿ ಬಳಿ ಸಲಹೆ ಕೇಳಿದ್ರು. ಈ ವೇಳೆ ಕೊಹ್ಲಿ, ಒಂದು ಟೂರ್ನಿಯ ವೈಫಲ್ಯದಿಂದ ನಿನ್ನ ಸಾಮರ್ಥ್ಯವನ್ನ ಅಳೆಯಲು ಸಾಧ್ಯವಿಲ್ಲ. ಸತತ ಪರಿಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತೆ  ಅಂತ ಹೇಳಿದ್ರು. ಕೊಹ್ಲಿಯ ಈ ಸ್ಫೂರ್ತಿದಾಯಕ ಮಾತುಗಳೇ ಪರಾಗ್ ಸಕ್ಸಸ್‌ಗೆ ಕಾರಣ. 

ಪರಾಗ್ ಅಷ್ಟೇ ಅಲ್ಲ, ಪಂಜಾಬ್ ಪುತ್ತರ್ ಶುಭ್‌ಮನ್ ಗಿಲ್‌ಗೂ ಕೊಹ್ಲಿಯೇ ರೋಲ್ ಮಾಡೆಲ್. ಇದನ್ನ ಗಿಲ್ ಹಲವು ಬಾರಿ ಹೇಳಿದ್ದಾರೆ. ಅದೇನೆ ಇರಲಿ, ಕೊಹ್ಲಿ ಸ್ಫೂರ್ತಿಯಿಂದ ಭಾರತೀಯ ಕ್ರಿಕೆಟ್‌ಗೆ ಮತ್ತಷ್ಟು ಯಂಗ್ ಟ್ಯಾಲೆಂಟೆಡ್ ಕ್ರಿಕೆಟರ್ಸ್ ಬರಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಅನ್ನೋದೆ ನಮ್ಮ ಆಶಯ. 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios