ಪಾಂಡ್ಯ-ರೋಹಿತ್ ನಡುವೆ ಸೇಡಿಗೆ ಸೇಡು: ಜಿದ್ದಾಜಿದ್ದಿಗೆ ಬಿದ್ದಿದ್ದಾರಾ ಇಬ್ಬರು ಪ್ಲೇಯರ್ಸ್..?
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಒಂದು ಬಿಗ್ ವಾರ್ ಸ್ಟಾರ್ಟ್ ಆಗಿದೆ. ಅದ್ಯಾಕೋ ಸ್ಟಾಪ್ ಆಗುವಂತೆ ಕಾಣ್ತಿಲ್ಲ. ದಿನೇ ದಿನೆ ಈ ಇಬ್ಬರ ನಡುವೆ ಕಂದಕ ಜಾಸ್ತಿ ಆಗ್ತಲೇ ಇದೆ. ರೋಹಿತ್ ಕ್ಯಾಪ್ಟನ್ಸಿಯಲ್ಲೇ ಐಪಿಎಲ್‌ಗೆ ಎಂಟ್ರಿಕೊಟ್ಟಿದ್ದ ಪಾಂಡ್ಯ, ಈಗ ರೋಹಿತ್‌ಗೆ ಟಕ್ಕರ್ ಕೊಡುವಷ್ಟು ಮಟ್ಟಿಗೆ ಬೆಳೆದಿದ್ದಾರೆ.
ಬೆಂಗಳೂರು(ಜ.09) ಸೇಡಿಗೆ ಸೇಡು, ಪ್ರತಿಕಾರಕ್ಕೆ ಪ್ರತಿಕಾರ ಅಂದ್ರೆ ಇದೇ ಇರ್ಬೇಕು. ಇಬ್ಬರು ಜಿದ್ದಿಗೆ ಬಿದ್ದಿದ್ದಾರೆ. ಸೇಡಿಗೆ ಸೇಡು ತೀರಿಸಿಕೊಂಡಿದ್ದಾರೆ. ಆದ್ರೀಗ ಸೋತವನು ಏನ್ ಮಾಡ್ತಾನೆ ಅನ್ನೋದೇ ಕುತೂಹಲ ಕೆರಳಿಸಿದೆ. ಇದು ಇಬ್ಬರು ಮುಂಬೈ ಇಂಡಿಯನ್ಸ್ ಆಟಗಾರರ ಸ್ಟೋರಿ.
ರೋಹಿತ್-ಹಾರ್ದಿಕ್ ನಡುವೆ ಹಗ್ಗಾಜಗ್ಗಾಟ
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಒಂದು ಬಿಗ್ ವಾರ್ ಸ್ಟಾರ್ಟ್ ಆಗಿದೆ. ಅದ್ಯಾಕೋ ಸ್ಟಾಪ್ ಆಗುವಂತೆ ಕಾಣ್ತಿಲ್ಲ. ದಿನೇ ದಿನೆ ಈ ಇಬ್ಬರ ನಡುವೆ ಕಂದಕ ಜಾಸ್ತಿ ಆಗ್ತಲೇ ಇದೆ. ರೋಹಿತ್ ಕ್ಯಾಪ್ಟನ್ಸಿಯಲ್ಲೇ ಐಪಿಎಲ್‌ಗೆ ಎಂಟ್ರಿಕೊಟ್ಟಿದ್ದ ಪಾಂಡ್ಯ, ಈಗ ರೋಹಿತ್‌ಗೆ ಟಕ್ಕರ್ ಕೊಡುವಷ್ಟು ಮಟ್ಟಿಗೆ ಬೆಳೆದಿದ್ದಾರೆ. ಅದಕ್ಕೆ ಹಿಟ್ ಮ್ಯಾನ್ ಸುಮ್ಮನೆ ಕೂರ್ತಾರಾ..? ನೋ ಚಾನ್ಸ್..? ಈಗ ರೋಹಿತ್ ಕೊಟ್ಟಿರೋ ಟಕ್ಕರ್ಗೆ ಸುಧಾರಿಸಿಕೊಳ್ಳಲು ಹಾರ್ದಿಕ್‌ಗೆ ಸುಮಾರು ವರ್ಷಗಳೇ ಬೇಕಾಗಬಹುದು.
ಪಾಂಡ್ಯನಿಂದ ಟಿ20 ನಾಯಕತ್ವ ಕಿತ್ತುಕೊಂಡ ರೋಹಿತ್..!
ಹೈದ್ರಾಬಾದ್‌ನ ಡೆಕ್ಕನ್ ಚಾರ್ಜರ್ಸ್ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ ರೋಹಿತ್ ಶರ್ಮಾ, 2011ರಲ್ಲಿ ಮುಂಬೈ ಇಂಡಿಯನ್ಸ್ ಸೇರಿಕೊಂಡ್ರು. 2013ರಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಸಹ ಆದ್ರು. ನಾಯಕನಾದ ಮೊದಲ ವರ್ಷವೇ ಮುಂಬೈ ತಂಡವನ್ನ ಚಾಂಪಿಯನ್ ಮಾಡಿದ್ದರು. ರೋಹಿತ್ ನಾಯಕತ್ವದಲ್ಲೇ ಮುಂಬೈ ಇಂಡಿಯನ್ಸ್ ದಾಖಲೆಯ 5 ಐಪಿಎಲ್ ಟ್ರೋಫಿ ಗೆದ್ದಿದೆ. ಆದ್ರೀಗ ಅವರನ್ನ ಏಕಾಏಕಿ ಕ್ಯಾಪ್ಟನ್ಸಿಯಿಂದ ಕಿಕೌಟ್ ಮಾಡಿ ಹಾರ್ದಿಕ್ ಪಾಂಡ್ಯನನ್ನ ಕ್ಯಾಪ್ಟನ್ ಮಾಡಲಾಗಿದೆ.
ಟಿ20 ವಿಶ್ವಕಪ್ ರೇಸ್‌ನಲ್ಲಿ ಉಳಿಯಲು ಅಬ್ಬರಿಸಲೇಬೇಕು..! ಈ ಇಬ್ಬರಲ್ಲಿ ಯಾರಿಗೆ ಬೆಸ್ಟ್ ಚಾನ್ಸ್?
ಕಂಡೀಷನ್ ಹಾಕಿಯೇ ಪಾಂಡ್ಯ, ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ಗೆ ಟ್ರೇಡ್ ಆಗಿದ್ದು. ಅದರಂತೆ ಟ್ರೇಡ್ ಆದ್ಮೇಲೆ ಏಕಾಏಕಿ ರೋಹಿತ್‌ಗೂ ಮಾಹಿತಿ ನೀಡದೆಯೇ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವ ಪಟ್ಟ ಕಟ್ಟಿದೆ ಫ್ರಾಂಚೈಸಿ. ಇದರಿಂದ ಫ್ಯಾನ್ಸ್ ಬೇಸರಗೊಂಡಿದ್ದಾರೆ. ರೋಹಿತ್ ಅಂತೂ ಈ ಶಾಕ್ನಿಂದ ಇನ್ನೂ ಹೊರಬಂದಿಲ್ಲ.
2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತ್ಮೇಲೆ ರೋಹಿತ್ ಶರ್ಮಾ ಟಿ20 ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಅವರು ಬಹುತೇಕ ಟಿ20ಯಿಂದ ದೂರ ಉಳಿಯಲು ನಿರ್ಧರಿಸಿದ್ದರು. ಆದ್ರೆ ಯಾವಾಗ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯನ್ನ ಪಾಂಡ್ಯ ಕಸಿದುಕೊಂಡರೋ ಅದೇ ಸಿಟ್ಟಿನಲ್ಲಿ ಭಾರತ ಪರ ಮತ್ತೆ ಟಿ20 ಆಡಲು ನಿರ್ಧರಿಸಿದ್ರು. ಅದರಂತೆ ಅಫ್ಘನ್ ಸಿರೀಸ್ಗೆ ರಿಟರ್ನ್ ಆದ್ರು. ಅದು ನಾಯಕನಾಗಿ. ಅಲ್ಲಿಗೆ ಪಾಂಡ್ಯ ಬಳಿಯಿದ್ದ ಭಾರತ ಟಿ20 ನಾಯಕತ್ವವನ್ನು ರೋಹಿತ್ ಶರ್ಮಾ ವಾಪಾಸ್ ಕಸಿದುಕೊಂಡ್ರು. ಹಾರ್ದಿಕ್‌ಗೆ ಮುಟ್ಟಿಕೊಳ್ಳುವ ಹಾಗೆ ಶಾಕ್ ಕೊಟ್ರು.
ಕುಸ್ತಿ ಫೆಡರೇಷನ್ ಕೂಟ ಆಯೋಜಿಸಿದ್ರೆ ಮಾನ್ಯತೆ ಇಲ್ಲ: ಕ್ರೀಡಾ ಸಚಿವಾಲಯ
ಪಾಂಡ್ಯ ನಾಯಕತ್ವದಲ್ಲಿ ರೋಹಿತ್, ರೋಹಿತ್ ನಾಯಕತ್ವದಲ್ಲಿ ಪಾಂಡ್ಯ..!
ಟಿ20 ವಿಶ್ವಕಪ್‌ಗೂ ನಾನೇ ನಾಯಕ ಎಂದು ಬೀಗುತ್ತಿದ್ದ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ಆಗಿದೆ. ಈಗ ಅವರು ರೋಹಿತ್ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಆಡಬೇಕಿದೆ. ಅದು ಫಿಟ್ ಆದ್ರೆ ಮಾತ್ರ. ಇನ್ನು ರೋಹಿತ್ ಶರ್ಮಾ ಸಹ ಅಷ್ಟೇ. ಹಾರ್ದಿಕ್ ಕ್ಯಾಪ್ಟನ್ಸಿಯಲ್ಲಿ ಐಪಿಎಲ್ ಆಡ್ಬೇಕು. ಅಲ್ಲಿಗೆ ಸೇಡಿಗೆ ಸೇಡು. ಪ್ರತಿಕಾರಕ್ಕೆ ಪ್ರತಿಕಾರ ತೀರಿಸಿಕೊಂಡಂತಾಗಿದೆ. ರೋಹಿತ್ ಶರ್ಮಾ ವಿಶ್ವಕಪ್ ಆಡಿ ಟಿ20 ಕ್ರಿಕೆಟ್‌ಗೆ ವಿದಾಯ ಹೇಳ್ತಾರೆ. ಆದ್ರೆ ಟಿ20 ವಿಶ್ವಕಪ್ನಲ್ಲಿ ನಾಯಕನಾಗೋ ಪಾಂಡ್ಯ ಕನಸು ನುಚ್ಚುನೂರಾಯ್ತು. ಭವಿಷ್ಯದಲ್ಲೂ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಕ್ಯಾಪ್ಟನ್ ಆಗೋದು ಅನುಮಾನವಾಗಿದೆ.
- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್