ಐಪಿಎಲ್ ಮೆಗಾ ಹರಾಜಿಗೆ ಡೇಟ್ ಫಿಕ್ಸ್; ಮತ್ತೊಮ್ಮೆ ಭಾರತದಾಚೆ ಐಪಿಎಲ್ ಆಟಗಾರರ ಹರಾಜು!
ಬಹುನಿರೀಕ್ಷಿತ ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ಡೇಟ್ ಫಿಕ್ಸ್ ಆಗಿದೆ ಎಂದು ವರದಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ರಿಯಾದ್: ಬಹುನಿರೀಕ್ಷಿತ 2025ರ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಇದೀಗ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೆ ಇದೀಗ ದಿನಾಂಕ ನಿಗದಿಯಾಗಿದ್ದು, ಮುಂಬರುವ ನವೆಂಬರ್ 24 ಹಾಗೂ 25ರಂದು ಆಟಗಾರರ ಹರಾಜು ನಡೆಯಲಿದೆ ಎಂದು ವರದಿಯಾಗಿದೆ. ಕಳೆದ ಬಾರಿ ಐಪಿಎಲ್ ಆಟಗಾರರ ಹರಾಜಿಗೆ ದುಬೈ ವೇದಿಕೆಯಾಗಿತ್ತು, ಇದೀಗ ಮುಂಬರುವ ಐಪಿಎಲ್ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್ ನಗರ ಆತಿಥ್ಯ ವಹಿಸಲಿದೆ ಎನ್ನಲಾಗುತ್ತಿದೆ.
ಐಪಿಎಲ್ ಮೆಗಾ ಹರಾಜು ನಡೆಯುವ ಸಂದರ್ಭದಲ್ಲಿಯೇ, ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನವೆಂಬರ್ 22ರಿಂದ 26ರ ವರೆಗೆ ಪರ್ತ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಟೂರ್ನಿಯ ನೇರ ಪ್ರಸಾರದ ಹಕ್ಕನ್ನು ಡಿಸ್ನಿ ಸ್ಟಾರ್ ಹೊಂದಿದೆ. ಇನ್ನು ಐಪಿಎಲ್‌ಗೆ ಸಂಬಂಧಿಸಿದ ನೇರ ಪ್ರಸಾರದ ಹಕ್ಕನ್ನು ಡಿಸ್ನಿ ಸ್ಟಾರ್ ಹೊಂದಿದೆ. ಹೀಗಾಗಿ ಎರಡು ಕಾರ್ಯಕ್ರಮಗಳ ನಡುವೆ ತಿಕ್ಕಾಟ ನಡೆಯುವ ಭೀತಿ ವ್ಯಕ್ತವಾಗಿತ್ತು.
ಆರ್‌ಸಿಬಿಯಲ್ಲಿ ಕನ್ನಡಿಗರಿಗೆ ಚಾನ್ಸ್; ಫ್ರಾಂಚೈಸಿ ಮೇಲೆ ಕರ್ನಾಟಕ ಸರ್ಕಾರದಿಂದಲೇ ಒತ್ತಡ?
ಆದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಸಮಯಕ್ಕೂ, ಐಪಿಎಲ್ ಆಟಗಾರರ ಹರಾಜಿನ ಸಮಯಕ್ಕೂ ಸಾಕಷ್ಟು ವ್ಯತ್ಯಾಸವಿರುವುದರಿಂದ ಈ ದಿನಾಂಕವನ್ನು ಬಿಸಿಸಿಐ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ಬಿಸಿಸಿಐ ರಿಯಾದ್‌ನಲ್ಲಿ ಆಯೋಜಿಸುವ ತೀರ್ಮಾನಕ್ಕೆ ಬರುವ ಮುನ್ನ ದುಬೈ, ಸಿಂಗಾಪೂರ ಹಾಗೂ ಲಂಡನ್‌ನಲ್ಲಿ ಐಪಿಎಲ್ ಮೆಗಾ ಹರಾಜು ಆಯೋಜಿಸುವ ಬಗ್ಗೆ ಬಿಸಿಸಿಐ ಸಮಾಲೋಚನೆ ನಡೆಸಿತ್ತು ಎಂದು ವರದಿಯಾಗಿದೆ.
ಆ ಮೂರು ಗಂಟೆಗಳು ನಮ್ಮ ಸಾಮರ್ಥ್ಯವನ್ನು ನಿರ್ಧರಿಸಲ್ಲ: ರೋಹಿತ್ ಶರ್ಮಾ
ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಗೆ ರೀಟೈನ್ ರೂಲ್ಸ್ ಘೋಷಿಸಿದ್ದು, ಗರಿಷ್ಠ 6 ರೀಟೈನ್ ಅಥವಾ 6 ಆರ್‌ಟಿಎಂ ಬಳಸಲು ಅವಕಾಶ ನೀಡಿದೆ. ಎಲ್ಲಾ ಫ್ರಾಂಚೈಸಿಗಳಿಗೆ ಅಕ್ಟೋಬರ್ 31, ಸಂಜೆ 5 ಗಂಟೆಯೊಳಗಾಗಿ ತಮ್ಮ ರೀಟೈನ್ ಆಟಗಾರರ ಹೆಸರು ಘೋಷಿಸಲು ಗಡುವು ನೀಡಿದೆ. ಯಾವುದೇ ತಂಡ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ, ಅದರಲ್ಲಿ ಅಂ.ರಾ. ಕ್ರಿಕೆಟ್ ಆಡದ ಭಾರತೀಯ ಆಟಗಾರ (ಅನ್‌ಕ್ಯಾಪ್ಡ್) ಒಬ್ಬ ಇರಲೇಬೇಕು ಎನ್ನುವ ನಿಯಮ ಪರಿಚಯಿಸಲಾಗಿದೆ. ಒಂದು ವೇಳೆ ಯಾವುದಾದರೂ ತಂಡ 6 ಆಟಗಾರರನ್ನು ಉಳಿಸಿಕೊಂಡರೆ, ಆ ತಂಡ ಕೇವಲ 41 ಕೋಟಿ ರು. ಉಳಿಸಿಕೊಂಡು ಹರಾಜಿಗೆ ಕಾಲಿಡಬೇಕಾಗುತ್ತದೆ.