Asianet Suvarna News Asianet Suvarna News

ಆರ್‌ಸಿಬಿಯಲ್ಲಿ ಕನ್ನಡಿಗರಿಗೆ ಚಾನ್ಸ್‌; ಫ್ರಾಂಚೈಸಿ ಮೇಲೆ ಕರ್ನಾಟಕ ಸರ್ಕಾರದಿಂದಲೇ ಒತ್ತಡ?

ಕರ್ನಾಟಕ ಸರ್ಕಾರವು RCB ಫ್ರಾಂಚೈಸಿ ಮೇಲೆ ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದೆ ಎಂದು ವರದಿಯಾಗಿದೆ. ಐಪಿಎಲ್ ಹರಾಜಿನಲ್ಲಿ ಕರ್ನಾಟಕದ ಆಟಗಾರರನ್ನು ಆಯ್ಕೆ ಮಾಡಲು ಒತ್ತಾಯಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

Karnataka government Pressuring RCB to include Karnataka players this cycle san
Author
First Published Oct 21, 2024, 3:21 PM IST | Last Updated Oct 21, 2024, 3:21 PM IST

ಬೆಂಗಳೂರು (ಅ.21): ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ವಿನಯ್‌ ಕುಮಾರ್‌, ಮನೀಷ್‌ ಪಾಂಡೆ, ಕೆಎಲ್‌ ರಾಹುಲ್‌, ದೇವದತ್‌ ಪಡಿಕ್ಕಲ್‌.. ಆರ್‌ಸಿಬಿಯಲ್ಲಿ ಆಡಿದ ಕನ್ನಡಿಗರು ಎಂದಾಗ ತಕ್ಷಣಕ್ಕೆ ನೆನಪಾಗುವ ಕೆಲವು ಹೆಸರುಗಳಿವು. ಆರ್‌ಸಿಬಿಯಲ್ಲಿ ಕರ್ನಾಟಕ ಮೂಲದ, ಕನ್ನಡ ಮೂಲದ ಪ್ಲೇಯರ್‌ಗಳ ಸಂಖ್ಯೆ ಬಹಳ ಕಡಿಮೆ. ಬೇರೆ ಬೇರೆ ಫ್ರಾಂಚೈಸಿಗಳು ವಿದೇಶದ ಹಾಗೂ ದೇಶದ ಸ್ಟಾರ್‌ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದು ಮಾತ್ರವಲ್ಲದೆ, ಸ್ಥಳೀಯ ಆಟಗಾರರಿಗೂ ಫ್ರಾಂಚೈಸಿಯಲ್ಲಿ ಧಾರಾಳ ಅವಕಾಶಗಳನ್ನು ನೀಡಿದ್ದವು ಆದರೆ, ಆರ್‌ಸಿಬಿ ಮಾತ್ರ ಕಳೆದ ಕೆಲವು ಐಪಿಲ್‌ ಹರಾಜಿನಲ್ಲಿ ನೆಪಮಾತ್ರಕ್ಕೆ ಕರ್ನಾಟಕ ಪ್ಲೇಯರ್‌ಗಳಿಗೆ ಅವಕಾಶ ನೀಡುತ್ತಿತ್ತು. ಆರ್‌ಸಿಬಿಯಲ್ಲಿ ಕನ್ನಡಿಗರಿಗೆ, ಕರ್ನಾಟಕದ ಆಟಗಾರರಿಗೆ ಅವಕಾಶ ಕಡಿಮೆ ಆಗುತ್ತಿದೆ ಎನ್ನುವ ಮಾತುಗಳು ಸಾಕಷ್ಟು ವರ್ಷಗಳಿಂದಲೇ ಕೇಳಿ ಬರುತ್ತಿದೆ. ಈಗ ಈ ವಿಚಾರದಲ್ಲಿ ಸರ್ಕಾರವೇ ಮಧ್ಯಪ್ರವೇಶ ಮಾಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಆರ್‌ಸಿಬಿಯಲ್ಲಿ ಕನ್ನಡಿಗರಿಗೆ ಅವಕಾಶ ಕೊಡಿ ಎಂದು ಫ್ರಾಂಚೈಸಿ ಮೇಲೆ ಕರ್ನಾಟಕ ಸರ್ಕಾರವೇ ಒತ್ತಡ ಹಾಕುತ್ತಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

'RCB IPL retentions: New cycle, same question - Virat Kohli and who?' ಎನ್ನುವ ಶೀರ್ಷಿಕೆಯಲ್ಲಿ ವರದಿ ಮಾಡಿರುವ ಪತ್ರಿಕೆ,'ಕಳೆದ ಹಲವಾರು ವರ್ಷಗಳಿಂದ RCB ಸ್ಥಳೀಯ ಬೆಂಗಳೂರಿನ ಆಟಗಾರರ ಬಗ್ಗೆ ಬಹಳ ಕಡಿಮೆ ಗಮನವನ್ನು ನೀಡಿದೆ ಮತ್ತು ಐಪಿಎಲ್ ಫ್ರಾಂಚೈಸಿಗಾಗಿ ಸ್ಥಿರವಾಗಿ ಯಾರೂ ಆಟವಾಡಿಲ್ಲ.

ತಂಡಕ್ಕಾಗಿ ಗಣನೀಯ ಕ್ರಿಕೆಟ್ ಆಡಿದ ಕೆಲವೇ ಕೆಲವು ಹೆಸರುಗಳಿವೆ. ದೇವದತ್ ಪಡಿಕ್ಕಲ್ ಅವರು ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಸ್ಥಿರವಾಗಿ ಅವಕಾಶ ಪಡೆದ ಕೊನೆಯವರು. ವೇಗಿ ವೈಶಾಕ್ ವಿಜಯ್ ಕುಮಾರ್ ತಂಡದಲ್ಲಿದ್ದಾರೆ ಆದರೆ ಎರಡು ಋತುಗಳಲ್ಲಿ ಕೇವಲ 11 ಪಂದ್ಯಗಳನ್ನು ಆಡಿದ್ದಾರೆ.

ಈ ವರ್ಷದ ಹರಾಜಿನಲ್ಲಿ ಸ್ಥಳೀಯ ಆಟಗಾರರಿಗೆ ಪ್ರಾದಾನ್ಯತೆ ನೀಡುವಂತೆ ಫ್ರಾಂಚೈಸಿಯ ಮೇಲೆ ಸಾಕಷ್ಟು ಸರ್ಕಾರದ ಒತ್ತಡವಿದೆ ಎಂದು ತಿಳಿದುಬಂದಿದೆ ಮತ್ತು ಅವರು ಮೆಗಾ ಹರಾಜಿನ ಸಮಯದಲ್ಲಿ ಕರ್ನಾಟಕದ ಆಟಗಾರರತ್ತ ನೋಡಿದರೆ ಆಶ್ಚರ್ಯವೇನಿಲ್ಲ' ಎಂದು ಬರೆದಿದೆ. ಇದರ ಬೆನ್ನಲ್ಲಯೇ ಆರ್‌ಸಿಬಿಯಲ್ಲಿ ಆಟಗಾರರ ಆಯ್ಕೆ ವಿಚಾರದಲ್ಲೂ ಕರ್ನಾಟಕ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ವ್ಯಕ್ತಿಯೊಬ್ಬರು, 'ಈ ಬಾರಿಯ ಹರಾಜಿನಲ್ಲಿ ಕರ್ನಾಟಕದ ಆಟಗಾರರನ್ನು ಸೇರಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರ RCB ಮೇಲೆ ಒತ್ತಡ ಹೇರುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ. ಕೊನೆಗೂ ಕನ್ನಡ ರಾಜಕಾರಣವನ್ನು ಸರ್ಕಾರ ಬುದ್ಧಿವಂತಿಕೆಯಿಂದ ಬಳಸುತ್ತಿದೆ. ಆದರೆ ವಿರಾಟ್ ಕೊಹ್ಲಿಗೆ ವಿನಾಯಿತಿ ಸಿಗುತ್ತದೆಯೇ ಅಥವಾ ಭಾಷಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೇ ಎನ್ನುವುದೇ ನನಗೆ ಅಚ್ಚರಿಯ ವಿಚಾರ' ಎಂದು ಟ್ವೀಟ್‌ ಮಾಡಿದ್ದಾರೆ.

'ಬಾಡಿಗೆ ಮನೆಯೇ ಬೆಸ್ಟ್‌..' ಎಂದಿದ್ದ ನಿಖಿಲ್‌ ಕಾಮತ್‌ ಯು-ಟರ್ನ್‌, ಸ್ವಂತ ಮನೆ ಖರೀದಿ ಮಾಡಿದ ಜೀರೋದಾ ಮಾಲೀಕ

ಆದರೆ, ಆರ್‌ಸಿಬಿ ಫ್ರಾಂಚೈಸಿ ಮೇಲೆ ಒತ್ತಡ ಹಾಕಿದ್ದು ಯಾರು, ಏನು?, ಯಾರ ಬಳಿ ಇದರ ಬಗ್ಗೆ ಚರ್ಚೆಯಾಗಿದೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹಾಗೇನಾದರೂ ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಹೆಚ್ಚಿನ ಕರ್ನಾಟಕ ಆಟಗಾರರನ್ನು ಖರೀದಿ ಮಾಡಿದರೆ, ಅದರಲ್ಲಿ ಸರ್ಕಾರದ ಕೈವಾಡ ಇರುತ್ತದೆ ಎನ್ನುವ ಸಣ್ಣ ಮಾಹಿತಿ ಇದಾಗಿದೆ.

ಬಿಗ್‌ ಬಾಸ್‌ಗೆ ಶಿಶಿರ್‌ ಶಕುನಿ, ರಂಜಿತ್‌ ಅಮಾಯಕ, ಭವ್ಯಾ ಖಾಲಿ ದೋಸೆ ಎಂದ ಜಗದೀಶ್‌!

 

Latest Videos
Follow Us:
Download App:
  • android
  • ios