ಟೀಂ ಇಂಡಿಯಾ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಮತ್ತೊಮ್ಮೆ ಬೆಂಬಲಿಸಿದ್ದಾರೆ. ಜೊತೆಗೆ ಪಂತ್ ಭಾರತದ ಭವಿಷ್ಯದ ವಿಕೆಟ್ ಕೀಪರ್ ಎನ್ನುವುದನ್ನು ಒತ್ತಿ ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಡಿ.24]: ಅನುಭವಿ ಕೋಚ್‌ ಬಳಿ ತರಬೇತಿ ಸಿಕ್ಕಲ್ಲಿ ರಿಷಭ್ ಪಂತ್‌ ಉತ್ತಮ ವಿಕೆಟ್‌ ಕೀಪರ್‌ ಆಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅವರಲ್ಲಿ ವಿಕೆಟ್‌ ಕೀಪರ್‌ಗೆ ಬೇಕಾದ ಎಲ್ಲಾ ಪ್ರತಿಭೆ ಇದೆ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌ ಹೇಳಿದ್ದಾರೆ. 

L ಶಿವ​ರಾ​ಮ​ಕೃಷ್ಣ BCCI ನೂತನ ಆಯ್ಕೆಗಾರ?

ಭಾರತದ ಅತ್ಯಂತ ಯಶಸ್ವಿ ವಿಕೆಟ್‌ ಕೀಪರ್‌’ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ಕಿರಣ್‌ ಮೋರೆ ಗರಡಿಯಲ್ಲಿ ಪಳಗಿರುವ ಪಂತ್‌ ಈಗಾಗಲೇ ಸ್ವಲ್ಪ ಅನುಭವ ಹೊಂದಿದ್ದಾರೆ. ಅವರಿಗೆ ಇನ್ನಷ್ಟು ಉತ್ತಮ ತರಬೇತಿ ಅಗತ್ಯವಿದೆ ಎಂದಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟವನ್ನೇ ಪ್ರದರ್ಶಿಸಿದ ಪಂತ್‌ ವಿಕೆಟ್‌ ಕೀಪಿಂಗ್‌ನಲ್ಲಿ ಕೊಂಚ ಎಡವಿದ್ದರು. ಇದಕ್ಕೆ ಅಭಿಮಾನಿ ವಲಯದಿಂದ ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಂ.ಎಸ್‌.ಕೆ. ಪ್ರಸಾದ್‌ ಅವರು ಪಂತ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಅಲ್ಲದೆ, ಅವರ ವಿಕೆಟ್‌ ಕೀಪಿಂಗ್‌ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅನುಭವಿ ಕೋಚ್‌ಗಳಿಂದಲೇ ರಿಷಭ್‌ ಪಂತ್‌ ಅವರಿಗೆ ತರಬೇತಿ ಕೊಡಿಸಲಾಗುವುದು ಎಂದಿದ್ದಾರೆ.

ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

21(22) ವರ್ಷದ ರಿಷಭ್ ಪಂತ್ ಅನಗತ್ಯವಾದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ನಾನು 21 ವರ್ಷದವನಿದ್ದಾಗ ನನಗೆ ಯಾವ ಒತ್ತಡವೂ ಇರಲಿಲ್ಲ. ಆಗ ಸುಮ್ಮನೆ ಕೂರುತ್ತಿದ್ದೆ, ಇಲ್ಲವೇ ಸರ್ ವಿವಿನ್ ರಿಚರ್ಡ್ಸ್ ಬೂಟ್ ಕ್ಲೀನ್ ಸ್ವಚ್ಚ ಮಾಡುತ್ತಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಜ್ಜಾಗುತ್ತಿದ್ದೆ ಎಂದು ವಿಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ. 

ಈ ಹಿಂದೆ ತಿರುವನಂತಪುರಂನಲ್ಲಿ ಪಂತ್ ವಿಕೆಟ್ ಕೀಪಿಂಗ್ ಮಾಡುವ ಸಂದರ್ಭದಲ್ಲಿ ಕ್ಯಾಚ್ ಬಿಟ್ಟಾಗ, ಪ್ರೇಕ್ಷಕರು ಧೋನಿ, ಧೋನಿ ಎಂದು ಕೂಗಿದ್ದರು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದರು.