Asianet Suvarna News Asianet Suvarna News

ರಿಷಭ್‌ ಪಂತ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ಪಂತ್ ಟೀಂ ಇಂಡಿಯಾಗೆ ಮರಳುವ ಬಗ್ಗೆ ಗಂಗೂಲಿ ಹೇಳಿದ್ದೇನು..?

ರಿಷಭ್ ಪಂತ್ ಭಾರತಕ್ಕೆ ಮತ್ತೆ ಆಡಲು 2 ವರ್ಷಗಳವರೆಗೆ ಬೇಕಾಗಬಹುದು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ನಿರ್ದೇಶಕ ಸೌರವ್‌ ಗಂಗೂಲಿ ಅವರು ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

rishabh pant might take up to 2 years to return for India sourav ganguly ash
Author
First Published Feb 28, 2023, 2:39 PM IST

ನವ​ದೆ​ಹ​ಲಿ (ಫೆಬ್ರವರಿ 28, 2023): ಟೀಂ ಇಂಡಿಯಾದ ಸ್ಟಾರ್‌ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ರಿಷಭ್‌ ಪಂತ್ 2 ತಿಂಗಳ ಹಿಂದೆ ಭೀಕರ ಅಪಘಾತಕ್ಕೊಳಗಾಗಿದ್ರು. ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಅವರು ವಿಶ್ರಾಂತಿಯಲ್ಲಿದ್ದಾರೆ. 2 ತಿಂಗಳಿನಿಂದ ಅವರನ್ನು ಈಗಾಗಲೇ ಅಭಿಮಾನಿಗಳು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಅವರು ಮತ್ತೆ ಟೀಂ ಇಂಡಿಯಾಗೆ ಮರಳೋದ್ಯಾವಾಗ..? ಮುಂಬರುವ ಐಪಿಎಲ್‌ನಲ್ಲಿ ಆಡ್ತಾರಾ ಎಂದು ಹಲವರು ಆಶಿಸುತ್ತಿರಬಹುದು. ಆದರೆ, ಅದು ಸಾಧ್ಯವಿಲ್ಲದ ಮಾತು. ಭಾರತೀಯ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ, ಹಾಲಿ ಭಾರತೀಯ ಕ್ರಿಕೆಟಿಗ ಹಾಗೂ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಭವಿಷ್ಯದ ಬಗ್ಗೆ ಹೇಳಿರುವುದು ಹೀಗೆ..

ರಿಷಭ್ ಪಂತ್ ಭಾರತಕ್ಕೆ ಮತ್ತೆ ಆಡಲು 2 ವರ್ಷಗಳವರೆಗೆ ಬೇಕಾಗಬಹುದು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ನಿರ್ದೇಶಕ ಸೌರವ್‌ ಗಂಗೂಲಿ ಅವರು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಬ್ ಪಂತ್ ಜಾಗವನ್ನು ತುಂಬುವುದು ಕಠಿಣ ಎಂದು ಸೌರವ್‌ ಗಂಗೂಲಿ ಹೇಳಿದ್ದು, ಮತ್ತು ತಂಡವು ಅವರ ಬದಲಿ ಆಟಗಾರನನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದೂ ಹೇಳಿದ್ದಾರೆ. ಡಿಸೆಂಬರ್ 2022 ರಲ್ಲಿ ರಿಷಭ್‌ ಪಂತ್ ಅವರಿಗಾದ ಭೀಕರ ಅಪಘಾತದ ನಂತರ ಅವರ ಬಳಿ ಒಂದೆರಡು ಬಾರಿ ಮಾತನಾಡಿರುವುದಾಗಿಯೂ ಮಾಜಿ ಎಡಗೈ ಆಟಗಾರ ಸೌರವ್‌ ಗಂಗೂಲಿ ಹೇಳಿದರು.

ಇದನ್ನು ಓದಿ: IPL ಟೂರ್ನಿಯಿಂದ ಹೊರಬಿದ್ದರೂ ರಿಷಭ್ ಪಂತ್‌ಗೆ ಸಿಗಲಿದೆ 16 ಕೋಟಿ ರುಪಾಯಿ..! ಐಪಿಎಲ್ ರೂಲ್ಸ್ ಏನು?

ನಾನು ರಿಷಭ್‌ ಪಂತ್ ಜತೆಗೆ ಒಂದೆರಡು ಬಾರಿ ಮಾತನಾಡಿದೆ. ನಿಸ್ಸಂಶಯವಾಗಿ ಅವರು ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳ ಮೂಲಕ ಕಠಿಣ ಅವಧಿಯನ್ನು ಎದುರಿಸುತ್ತಿದ್ದಾರೆ. ಮತ್ತು ಈ ಹಿನ್ನೆಲೆ ನಾನು ಅವರಿಗೆ ಶುಭ ಹಾರೈಸುತ್ತೇನೆ. ಒಂದು ವರ್ಷದ ಸಮಯದಲ್ಲಿ ಅಥವಾ ಒಂದೆರಡು ವರ್ಷಗಳ ನಂತರ, ಅವರು ಮತ್ತೆ ಭಾರತ ತಂಡದ ಪರ ಆಡಲು ಬರುತ್ತಾರೆ ಎಂದು ಸೌರವ್‌ ಗಂಗೂಲಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ರಿಷಭ್‌ ಪಂತ್ ಅವರ ಬದಲಿ ಆಟಗಾರ ಯಾರೆಂಬುದನ್ನು ಇನ್ನೂ ಡೆಹಲಿ ಕ್ಯಾಪಿಟಲ್ಸ್‌ ತಂಡ ಘೋಷಿಸಿಲ್ಲ. ಹಾಗೂ ಯುವ ಆಟಗಾರ ಅಭಿಷೇಕ್ ಪೊರೆಲ್ ಮತ್ತು ದೇಶೀಯ ಅನುಭವಿ ಶೆಲ್ಡನ್ ಜಾಕ್ಸನ್ ನಡುವೆ ಯಾರು ಉತ್ತಮರು ಎಂಬುದರ ಕುರಿತು ಸೌರವ್‌ ಗಂಗೂಲಿ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ನಮಗೆ ಲೆಕ್ಕಾಚಾರ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕು. ಮುಂದಿನ ಶಿಬಿರವು ಐಪಿಎಲ್‌ಗಿಂತ ಮೊದಲು ಪ್ರಾರಂಭವಾಗುತ್ತದೆ ಎಂದು ಸೌರವ್‌ ಗಂಗೂಲಿ ಹೇಳಿದರು.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ 19,400 ವಾಹನ ಅಪಘಾತ: ರಿಷಭ್‌ ಪಂತ್‌ ಅಪಘಾತದ ಸುದ್ದಿ ಬೆನ್ನಲ್ಲೇ ವರದಿ

ಮುಖ್ಯವಾಗಿ, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕನ್ನು ಹುಡುಕಲು ಸಹ ಇನ್ನೂ ಪ್ರಯತ್ನಗಳು ನಡೆಯುತ್ತಿದ್ದು, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಅನುಭವದ ಕಾರಣದಿಂದಾಗಿ ಅವರಿಗೆ ಕ್ಯಾಪ್ಟನ್‌ ಸ್ಥಾನಮಾನ ನೀಡುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ. ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್‌, ಕೋಲ್ಕತ್ತಾದಲ್ಲಿ ಮೂರು ದಿನಗಳ ಶಿಬಿರವನ್ನು ನಡೆಸಿದ್ದು, ಅಲ್ಲಿ ಪೃಥ್ವಿ ಶಾ, ಇಶಾಂತ್ ಶರ್ಮಾ, ಚೇತನ್ ಸಕರಿಯಾ, ಮನೀಶ್ ಪಾಂಡೆ ಇತರ ದೇಶೀಯ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಊರ್ವಶಿಗೆ ಕೀಟಲೆ ಮಾಡಲು ಯಾರಾದರೂ ಬೇಕು: ರಿಷಭ್‌ ಪಂತ್‌ ಪರ ಬ್ಯಾಟ್‌ ಬೀಸಿದ ಶುಭ್‌ಮನ್‌ ಗಿಲ್‌

Follow Us:
Download App:
  • android
  • ios