Asianet Suvarna News Asianet Suvarna News

Indian Cricketಗೆ ಸಾಕಷ್ಟು ಪ್ರತಿಭೆಗಳನ್ನು ನೀಡಿದ್ದ ಖ್ಯಾತ ಕ್ರಿಕೆಟ್‌ ಕೋಚ್ ತಾರಕ್‌ ಸಿನ್ಹಾ‌ ನಿಧನ!

*ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ್ದ ದಿಗ್ಗಜ 
*ತಾರಕ್‌ ಸಿನ್ಹಾ ಬಳಿ ತರಬೇತಿ ಪಡೆದಿದ್ದ ಶ್ರೇಷ್ಟ ಕ್ರಿಕೆಟಿಗರು  
*ಕ್ರಿಕೆಟಿಗರಿಗೆ ಶಿಕ್ಷಣ ಕಡೆಯೂ ಗಮನ ಕೊಡುವಂತೆ ಆಗ್ರಹಸಿದ್ದ ಕೋಚ್

Renowned coach Tarak Sinha dies aged 71 of lung cancer in Delhi
Author
Bengaluru, First Published Nov 7, 2021, 8:35 AM IST
  • Facebook
  • Twitter
  • Whatsapp

ನವದೆಹಲಿ (ನ.7 ): ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ್ದ ದಿಗ್ಗಜ ತರಬೇತುದಾರ ತಾರಕ್‌ ಸಿನ್ಹಾ (Tarak Sinha) ಶನಿವಾರ ನಿಧನರಾದರು. 71 ವರ್ಷದ ಸಿನ್ಹಾ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿನ್ಹಾ ದೆಹಲಿಯ ಸೊನೆಟ್‌ ಕ್ಲಬ್‌ನ (Delhi's f Sonnet Cricket Club) ಆಧಾರಸ್ತಂಭವಾಗಿದ್ದರು. ಆಶಿಶ್‌ ನೆಹ್ರಾ (Ashish Nehra), ಶಿಖರ್‌ ಧವನ್ (Shikhar Dhawan), ರಿಷಬ್‌ ಪಂತ್‌ (Rishab Pant), ಆಕಾಶ್‌ ಚೋಪ್ರಾ (Akash Chopra), ಮನೋಜ್‌ ಪ್ರಭಾಕರ್‌, ಸುರೀಂದರ್‌ ಖನ್ನಾ, ಅಜಯ್‌ ಶರ್ಮಾ. ಅತುಲ್‌ ವಾಸನ್‌ ಅವರಂತಹ ನೂರಾರು ಶ್ರೇಷ್ಟ ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟಿಗರು ತಾರಕ್‌ ಸಿನ್ಹಾ ಅವರ ಬಳಿ ತರಬೇತಿ ಪಡೆದಿದ್ದರು. ಸಿನ್ಹಾ ಅವರಿಗೆ 2018 ರಲ್ಲಿ ಜೀವಮಾನದ  ಸಾಧನೆಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು.

ಭಾರತ ಕ್ರಿಕೆಟ್‌ಗೆ ದಿಗ್ಗಹರನ್ನು ನೀಡಿದ್ದ ಸಿನ್ಹಾ!

"ಸಾನೆಟ್ ಕ್ಲಬ್‌ನ ಸಂಸ್ಥಾಪಕ ಶ್ರೀ ತಾರಕ್ ಸಿನ್ಹಾ  ಅವರು ಎರಡು ತಿಂಗಳ ಕಾಲ ಶ್ವಾಸಕೋಶದ ಕ್ಯಾನ್ಸರ್‌ನೊಂದಿಗೆ ಹೋರಾಡಿದ ನಂತರ ಶನಿವಾರ (ನ. 6) ಮುಂಜಾನೆ 3 ಗಂಟೆಗೆ ನಮ್ಮನ್ನು ಅಗಲಿದ್ದಾರೆ ಎಂಬ ಈ ದುರಂತದ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳಬೇಕಾಗಿದೆ" ಎಂದು ಸಾನೆಟ್ ಕ್ರಿಕೆಟ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.

ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ..? ಜಡೇಜಾ ಉತ್ತರಕ್ಕೆ ಪತ್ರಕರ್ತ ಕಕ್ಕಾಬಿಕ್ಕಿ!

"ಅವರು ಭಾರತ ಮತ್ತು ದೆಹಲಿ (Delhi) ಕ್ರಿಕೆಟ್‌ಗೆ ಹಲವಾರು ರತ್ನಗಳನ್ನು ನೀಡಿದ್ದು ಸಾನೆಟ್ ಕ್ರಿಕೆಟ್ ಕ್ಲಬ್‌ನ ಆತ್ಮವಾಗಿದ್ದಾರೆ. ಈ  ಸಮಯದಲ್ಲಿ ಅವರ ಜತೆಗಿದ್ದ ಪ್ರತಿಯೊಬ್ಬರಿಗೂ ಮತ್ತು ಅವರ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಅವರನ್ನು ಬದುಕಿಸಲು ದಣಿವರಿಯಿಲ್ಲದೆ ಕೆಲಸ ಮಾಡಿದ ಜೈಪುರ ಮತ್ತು ದೆಹಲಿಯ ವೈದ್ಯರು ಮಾಡಿದ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ" ಎಂದು ಕ್ಲಬ್‌ ತಿಳಿಸಿದೆ.

ಕ್ರಿಕೆಟಿಗರಿಗೆ ಶಿಕ್ಷಣ ಕಡೆಯೂ ಗಮನ ಕೊಡುವಂತೆ ಆಗ್ರಹಸಿದ್ದ ಕೋಚ್

"ತಮ್ಮ 70 ನೇ ವಯಸ್ಸಿನಲ್ಲಿಯೂ ಅವರು ಮೈದಾನಕ್ಕೆ ಬಂದು ಯುವ ಕ್ರಿಕೆಟಿಗರನ್ನು ಹುಡುಕಲು ಉತ್ಸಾಹಭರಿತರಾಗಿದ್ದರು .ಅವರು ತಮ್ಮ ಕೊನೆಯ ಉಸಿರಿನವರೆಗೂ ಉತ್ತಮ ಉತ್ಸಾಹದಲ್ಲಿದ್ದರು, ಅವರು ಮತ್ತೆ ತಮ್ಮ ಕಾಲುಗಳ ಮೇಲೆ ಎದ್ದೇಳಬಹುದೆಂದು ನಂಬಿದ್ದರು. ಸಾನೆಟ್ ಕ್ಲಬ್‌ನಲ್ಲಿ ನಮಗೆಲ್ಲರಿಗೂ ಇಂದು ದು:ಖದ ದಿನವಾಗಿದೆ.  ಕ್ರಿಕೆಟ್ ಆಟಗಾರರಿಗೂ ಮತ್ತು ಮುಖ್ಯವಾಗಿ ಅವರನ್ನು ಗುರುವಾಗಿ ಪರಿಗಣಿಸಿದ್ದ ವಿದ್ಯಾರ್ಥಿಗಳಿಗೆ ಇದು ತಾಳಲಾರದ ನೋವಾಗಿದೆ" ಎಂದು ಕ್ಲಬ್‌ ತಿಳಿಸಿದೆ.

Team India ಏಕದಿನ ನಾಯಕತ್ವಕ್ಕೂ ವಿರಾಟ್‌ ಕೊಹ್ಲಿ ಗುಡ್‌ಬೈ?

ಸಿನ್ಹಾ ಅವರನ್ನು ಮಹಿಳಾ ರಾಷ್ಟ್ರೀಯ ತಂಡದ (Women's National Team) ಕೋಚ್ ಆಗಿ ನೇಮಿಸುವ ಮೂಲಕ ಬಿಸಿಸಿಐ (BCCI)  ಅವರ ಪರಿಣತಿಯನ್ನು ಬಳಸಿಕೊಂಡಿತ್ತು. ಜೂಲನ್ ಗೋಸ್ವಾಮಿ, ಮಿಥಾಲಿ ರಾಜ್ ಅವರು ಇದ್ದ ಅತ್ಯಂತ ಕಿರಿಯ ಆಟಗಾರರ ಗುಂಪಿನೊಂದಿಗೆ ಸಿನ್ಹಾ ಕೆಲಸ ಮಾಡಿದ್ದರು. ಅವರ ಕೋಚಿಂಗ್‌ನ ಇನ್ನೊಂದು ಬಹು ಮುಖ್ಯ ಅಂಶವೆಂದರೆ, ಯಾವುದೇ ವಿದ್ಯಾರ್ಥಿಯು ತನ್ನ ಶಿಕ್ಷಣವನ್ನು (Education) ನಿರ್ಲಕ್ಷಿಸಲು ಅವರು ಎಂದಿಗೂ ಬಿಡುತ್ತಿರಲಿಲ್ಲ. ಆಟಗಾರರು ಯಾವಾಗಲೂ ಪ್ಲಾನ್ ಬಿ ಹೊಂದಿರಬೇಕೆಂದು ಸಿನ್ಹಾ ಬಯಸುತ್ತಿದ್ದರು.

ತಾರಕ್‌ ಸಿನ್ಹಾ ಅವರ ಅಗಲಿಕೆಯ ಬಗ್ಗೆ ಸಾಕಷ್ಟು ಕ್ರಿಕೆಟ್‌ ದಿಗ್ಗಜರು ಟ್ವೀಟ್‌ (Tweet) ಮಾಡಿದ್ದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಟೀಂ ಇಂಡಿಯಾ (Team India) ಬ್ಯಾಟ್ಸಮನ್ ರಿಷಬ್‌ ಪಂತ್‌ ಸಿನ್ಹಾ ಅವರನ್ನು ಮಗನಂತೆ ನೋಡಿಕೊಂಡಿದ್ದರು ಎಂದು ಹೇಳಿದ್ದಾರೆ. ಜತೆಗೆ  ನಾನು ಮೈದಾನಕ್ಕಿಳಿಯುವಾಗ ಅವರು ನನ್ನ ಜತೆಯೆ ಇರಲಿದ್ದಾರೆ ಎಂದ ರಿಷಬ್‌ ಹೇಳಿದ್ದಾರೆ.

 

 

 

 

Follow Us:
Download App:
  • android
  • ios