ಐಪಿಎಲ್ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕೆಲವರು ಭವಿಷ್ಯ ನುಡಿದರೆ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮೂರು ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದರೆ ಮ್ಯಾನ್ ಆಪ್ ದಿ ಮ್ಯಾಚ್ ಯಾರು ಅನ್ನೋದು ಹೇಳಿದ್ದಾರೆ. 

ಅಹಮ್ಮದಾಬಾದ್ (ಮೇ.31) ಐಪಿಎಲ್ ಫೈನಲ್ ಪಂದ್ಯದ ಕುತೂಹಲ ತೀವ್ರಗೊಳ್ಳುತ್ತಿದೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಹೋರಾಟ ನಡೆಸಲಿದೆ. ಗುಜರಾತ್ ತಂಡಕ್ಕೆ ತವರಿನ ಕ್ರೀಡಾಂಗಣ. ಆದರೆ ಇದೇ ಕ್ರೀಡಾಂಗಣದಲ್ಲಿ 2025ರಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಹಲವು ಮಾಜಿ ಕ್ರಿಕೆಟಿಗರು ಇಂದಿನ ಫೈನಲ್ ಪಂದ್ಯದ ಭವಿಷ್ಯ ನುಡಿದಿದ್ದಾರೆ. ಇದೀಗ ಆರ್‌ಸಿಬಿ ಮಾಜಿ ಆಟಗಾರ, ಸೌತ್ ಆಫ್ರಿಕನ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಬಿ ಡಿವಿಲಿಯರ್ಸ್ ಹೇಳಿದ ಫೈನಲ್ ಪಂದ್ಯದ ಮೂರು ಭವಿಷ್ಯ

ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2026 ಫೈನಲ್ ಪಂದ್ಯದಲ್ಲಿನ ಮೂರು ಭವಿಷ್ಯವನ್ನು ಎಬಿ ಡಿವಿಲಿಯರ್ಸ್ ನುಡಿದಿದ್ದಾರೆ.

  • 1 ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಆರ್‌ಸಿಬಿಗೆ ಗೆಲುವು ತಂದುಕೊಡಲಿದ್ದಾರೆ
  • 2 ರಜತ್ ಪಾಟೀದಾರ್‌ ಮ್ಯಾನ್ ಆಫ್ ದಿ ಮ್ಯಾಚ್ ಸಾಧನೆ ಮಾಡಲಿದ್ದಾರೆ
  • 3 ರಶೀದ್ ಖಾನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ

ಮೂರು ಭವಿಷ್ಯವನ್ನು ಎಬಿ ಡಿವಿಲಿಯರ್ಸ್ ನೀಡಿದ್ದಾರೆ. ಆರ್‌ಸಿಬಿ ಗೆಲುವು ಹಾಗೂ ನಾಯಕ ರಜತ್ ಪಾಟೀದಾರ್‌ಗೆ ಮ್ಯಾನ್ ಆಫ್ ದಿ ಮ್ಯಾಚ್ ಎಂದು ಎಬಿ ಭವಿಷ್ಯ ನುಡಿದಿದ್ದಾರೆ. ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ ಉತ್ತಮ ಪ್ರದರ್ಶನದ ಭವಿಷ್ಯ ಹೇಳಿದ್ದಾರೆ.

ಹಲವು ದಿಗ್ಗಜ ಕ್ರಿಕೆಟಿಗರು ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಹಾಗು ಗುಜರಾತ್ ಟೈಟಾನ್ಸ್‌ಗೆ ಹಲವು ಸಲಹೆ ನೀಡಿದ್ದಾರೆ. ಇದೇ ವೇಳೆ ಆರ್‌ಸಿಬಿ ಆರಂಭಿಕ ವೆಂಕಟೇಶ್ ಅಯ್ಯರ್ ಇಂದು ಸಂಪೂರ್ಣ ವಿಫಲರಾಗುತ್ತಾರೆ ಎಂದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ದೇವದತ್ ಪಡಿಕ್ಕಲ್ ಆಟ ಇವತ್ತು ಮಹತ್ವದ್ದಾಗಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಎರಡೂ ತಂಡಕ್ಕೆ ಉತ್ತಮ ಅವಕಾಶವಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಇದೇ ವೇಳೆ ಇರ್ಫಾನ್ ಪಠಾಣ್, ಆರ್‌ಸಿಬಿ ತಂಡಕ್ಕೆ ಕೆಲ ಸಲಹೆ ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ಬೌಲರ್ಸ್ ಹೆಚ್ಚು ಬೌನ್ಸರ್ ಎಸೆಯಲಿದ್ದಾರೆ. ಹೀಗಾಗಿ ಆರ್‌ಸಿಬಿ ಅನಗತ್ಯ ರಿಸ್ಕ್ ತೆಗೆದುಕೊಳ್ಳದೇ ಆಡಬೇಕು ಎಂದಿದ್ದಾರೆ. ಇತ್ತ ಗುಜರಾತ್ ಆರಂಭಿಕರಿಗೆ ಶಾರ್ಟ್ ಬಾಲ್ ಹಾಕಬಾರದು ಎಂದು ಸಲಹೆ ನೀಡಿದ್ದಾರೆ. ಸಾಯಿ ಸುದರ್ಶನ್‌ಗೆ ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಬೇಕು. ಅಹಮ್ಮದಾಬಾದ್ ಕಂಡೀಷನ್‌‍ಗೆ ಅನುಗುಣವಾಗಿ ಬಾಲ್ ಸ್ವಿಂಗ್ ಮಾಡಿದರೆ ಗುಜರಾತ್ ಬ್ಯಾಟರ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂದಿದ್ದಾರೆ.