MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2026: ಫೈನಲ್‌ನಲ್ಲಿ ಬದಲಾಗುತ್ತಾ ಆರ್‌ಸಿಬಿ ಆಡುವ ಹನ್ನೊಂದರ ಬಳಗ? ಇಲ್ಲಿದೆ ನೋಡಿ ಬಲಿಷ್ಠ ಬೆಂಗಳೂರು ತಂಡ

IPL 2026: ಫೈನಲ್‌ನಲ್ಲಿ ಬದಲಾಗುತ್ತಾ ಆರ್‌ಸಿಬಿ ಆಡುವ ಹನ್ನೊಂದರ ಬಳಗ? ಇಲ್ಲಿದೆ ನೋಡಿ ಬಲಿಷ್ಠ ಬೆಂಗಳೂರು ತಂಡ

ಅಹಮದಾಬಾದ್: ರಜತ್ ಪಾಟೀದಾರ್ ನೇತೃತ್ವದ RCB ತಂಡವು ಸತತ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ಇಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ನೋಡೋಣ. 

2 Min read
Author : Naveen Kodase
Published : May 31 2026, 12:25 PM IST
Share this Photo Gallery
  • FB
  • TW
  • Linkdin
  • Whatsapp
16
ಎರಡನೇ ಐಪಿಎಲ್ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣುಆರ್
Image Credit : ANI

ಎರಡನೇ ಐಪಿಎಲ್ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣುಆರ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ತಾವೇಕೆ ಚಾಂಪಿಯನ್ ತಂಡ ಎನ್ನುವುದನ್ನು ನೆನಪಿಸುವಂತಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದ್ದ ಆರ್‌ಸಿಬಿ ತಂಡವು, ಆ ನಂತರ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಇದೀಗ ಇದೀಗ ಸತತ ಎರಡನೇ ಟ್ರೋಫಿ ಮೇಲೆ ಬೆಂಗಳೂರು ತಂಡವು ಕಣ್ಣಿಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆರ್‌ಸಿಬಿ ಸಂಭಾವ್ಯ ತಂಡ
Image Credit : Social media

ಆರ್‌ಸಿಬಿ ಸಂಭಾವ್ಯ ತಂಡ

ಸತತ ಎರಡನೇ ಟ್ರೋಫಿ ಗೆಲ್ಲಬೇಕಿದ್ದರೇ, ಆರ್‌ಸಿಬಿ ತಂಡವು ತಂಡದಲ್ಲಿ ಕೊಂಚ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್‌ಸಿಬಿ ತಂಡವು ಸದ್ಯ ಗೆಲುವಿನ ಲಯದಲ್ಲಿದ್ದು, ಹೆಚ್ಚಿನ ಬದಲಾವಣೆಗಳಿಗೆ ಕೈಹಾಕು ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Related Articles

Related image1
IPL 2026 Final: ಆರ್‌ಸಿಬಿಗೆ ಈ ಸಲವೂ ಸಿಗುತ್ತಾ ಕಪ್‌? ತವರಲ್ಲಿ ಸೇಡಿಗೆ ರೆಡಿಯಾದ ಗುಜರಾತ್ ಟೈಟಾನ್ಸ್‌!
Related image2
IPL 2026 Final: ಫಿಲ್ ಸಾಲ್ಟ್ RCB ತಂಡದೊಳಗೆ ಬಂದ್ರೆ ಹೊರಗೆ ಉಳಿಯೋರು ಯಾರು?
36
ಫಿಲ್ ಸಾಲ್ಟ್‌-ವಿರಾಟ್ ಕೊಹ್ಲಿ ಆರಂಭಿಕ ಜೋಡಿ
Image Credit : Getty

ಫಿಲ್ ಸಾಲ್ಟ್‌-ವಿರಾಟ್ ಕೊಹ್ಲಿ ಆರಂಭಿಕ ಜೋಡಿ

ಆರ್‌ಸಿಬಿ ತಂಡದ ಆರಂಭಿಕ ಬ್ಯಾಟರ್‌ಗಳಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸೋದು ಬಹುತೇಕ ಖಚಿತ ಎನಿಸಿದೆ. ಕಳೆದೊಂದು ತಿಂಗಳಿನಿಂದ ಸಾಲ್ಟ್ ಮೈದಾನದಲ್ಲಿ ಹೊರಗುಳಿದಿದ್ದರೂ, ಆತ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಸಾಲ್ಟ್ ಹೊಂದಿದ್ದಾರೆ. ಹೀಗಾಗಿ ಸಾಲ್ಟ್ ಆರಂಭಿಕರಾಗಿ ಕಾಣಿಸಿಕೊಂಡರೆ, ವೆಂಕಟೇಶ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆಗಬೇಕಾಗುತ್ತದೆ.

46
ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠ:
Image Credit : ANI

ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠ:

ಸದ್ಯ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕ ಸಾಕಷ್ಟು ಬಲಿಷ್ಠವಾಗಿದೆ. ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಹಾಗೂ ವೆಂಕಟೇಶ್ ಅಯ್ಯರ್ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಬಲ ತಂದು ಕೊಡಲಿದ್ದಾರೆ. ಇನ್ನು ಆಲ್ರೌಂಡರ್ ಕೃನಾಲ್ ಪಾಂಡ್ಯ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ.

56
ರೊಮ್ಯಾರಿಯೋ ಶೆಫರ್ಡ್/ಜೇಕಬ್ ಡಫಿ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್!
Image Credit : ANI

ರೊಮ್ಯಾರಿಯೋ ಶೆಫರ್ಡ್/ಜೇಕಬ್ ಡಫಿ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್!

ಆರ್‌ಸಿಬಿ ಒಂದು ವೇಳೆ ಮೊದಲು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿದರೇ, ಜೇಕಬ್ ಡಫಿ ಅಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿದರೇ, ಪರಿಸ್ಥಿತಿ ನೋಡಿಕೊಂಡು ರೊಮ್ಯಾರಿಯೋ ಶೆಫರ್ಡ್ ಇಲ್ಲವೇ ಜೇಕಬ್ ಡಫಿ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವಸ ಸಾಧ್ಯತೆಯಿದೆ.

66
ವೇಗದ ಬೌಲರ್‌ಗಳ ಮೇಲಿದೆ ಆರ್‌ಸಿಬಿ ವಿಶ್ವಾಸ
Image Credit : X@IPL

ವೇಗದ ಬೌಲರ್‌ಗಳ ಮೇಲಿದೆ ಆರ್‌ಸಿಬಿ ವಿಶ್ವಾಸ

ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡದ ದಿಟ್ಟ ಪ್ರದರ್ಶನಕ್ಕೆ ಕಾರಣ ತಂಡದ ಬೌಲಿಂಗ್ ವಿಭಾಗ. ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಜೋಶ್ ಹೇಜಲ್‌ವುಡ್, ರಸಿಕ್ ಧರ್ ಸಲಂ ಕೂಡಾ ಮಾರಕ ದಾಳಿ ಸಂಘಟಿಸುತ್ತಿದ್ದಾರೆ. ಸ್ಪಿನ್ನರ್ ಕೃನಾಲ್ ಪಾಂಡ್ಯ ತಾವೇನೂ ಕಮ್ಮಿಯಿಲ್ಲ ಎಂದು ಬೌನ್ಸರ್ ಎಸೆಯುತ್ತಿದ್ದಾರೆ. ಇನ್ನು ಸುಯಾಶ್ ಶರ್ಮಾ ಕೂಡಾ ಲಯ ಕಂಡುಕೊಂಡರೇ, ಐಪಿಎಲ್ ಟ್ರೋಫಿ ಕಟ್ಟಿಟ್ಟ ಬುತ್ತಿ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಗುಜರಾತ್ ಟೈಟನ್ಸ್

Latest Videos
Recommended Stories
Recommended image1
IPL 2026 Final: ಫಿಲ್ ಸಾಲ್ಟ್ RCB ತಂಡದೊಳಗೆ ಬಂದ್ರೆ ಹೊರಗೆ ಉಳಿಯೋರು ಯಾರು?
Recommended image2
ಐಪಿಎಲ್ ಫೈನಲ್ ಚಾಂಪಿಯನ್ಸ್ ಯಾರು? ವಿರೇಂದ್ರ ಸೆಹ್ವಾಗ್ ಆಯ್ಕೆ ಮಾಡಿದ ತಂಡ ಇದೇ!
Recommended image3
Vaibhav Sooryavanshi: 'ಈ ಹುಡುಗ ಸ್ಪೆಷಲ್..' ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಬಗ್ಗೆ ಸಚಿನ್ ಹೇಳಿದ ಆ ಮಾತು ವೈರಲ್!
Related Stories
Recommended image1
IPL 2026 Final: ಆರ್‌ಸಿಬಿಗೆ ಈ ಸಲವೂ ಸಿಗುತ್ತಾ ಕಪ್‌? ತವರಲ್ಲಿ ಸೇಡಿಗೆ ರೆಡಿಯಾದ ಗುಜರಾತ್ ಟೈಟಾನ್ಸ್‌!
Recommended image2
IPL 2026 Final: ಫಿಲ್ ಸಾಲ್ಟ್ RCB ತಂಡದೊಳಗೆ ಬಂದ್ರೆ ಹೊರಗೆ ಉಳಿಯೋರು ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved