ಇತಿಹಾಸ ಬರೆದ ಆರ್‌ಸಿಬಿ ತಾರೆ ಶ್ರೇಯಾಂಕ ಪಾಟೀಲ್ಮಹಿಳಾ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌(ಸಿಪಿಎಲ್‌)ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟರ್‌ ಶ್ರೇಯಾಂಕ20 ವರ್ಷದ ಶ್ರೇಯಾಂಕ ಅವರನ್ನು ಗಯಾನ ಅಮೆಜಾನ್‌ ವಾರಿಯರ್ಸ್‌ ತಂಡಕ್ಕೆ ಸೇರಿಸಿಕೊಂಡಿದೆ

ಬೆಂಗಳೂರು(ಜು.01): ಕರ್ನಾಟಕದ ತಾರಾ ಆಲ್ರೌಂಡರ್‌ ಶ್ರೇಯಾಂಕ ಪಾಟೀಲ್‌ ಮಹಿಳಾ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌(ಸಿಪಿಎಲ್‌)ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಕ್ರವಾರ 20 ವರ್ಷದ ಶ್ರೇಯಾಂಕ ಅವರನ್ನು ಗಯಾನ ಅಮೆಜಾನ್‌ ವಾರಿಯರ್ಸ್‌ ತಂಡಕ್ಕೆ ಸೇರಿಸಿಕೊಂಡಿದೆ. 

ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಪರ ಮಿಂಚಿ ಎಲ್ಲರ ಗಮನ ಸೆಳೆದಿದ್ದ ಶ್ರೇಯಾಂಕ ಇತ್ತೀಚೆಗೆ ಉದಯೋನ್ಮುಖ ಮಹಿಳೆಯರ ಏಷ್ಯಾಕಪ್‌ನಲ್ಲಿ ಭಾರತ ‘ಎ’ ತಂಡದ ಪರ ಅಭೂತಪೂರ್ವ ಪ್ರದರ್ಶನ ತೋರಿದ್ದರು. ಉದಯೋನ್ಮುಖ ಏಷ್ಯಾಕಪ್​ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ 'ಎ' ತಂಡದ ವಿರುದ್ದ ಕನ್ನಡತಿ ಶ್ರೇಯಾಂಕ ಪಾಟೀಲ್ ಮಾರಕ ಬೌಲಿಂಗ್ 13 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು.

ಉದಯೋನ್ಮುಖ ಏಷ್ಯಾಕಪ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸಿದ ಶ್ರೇಯಾಂಕ ಪಾಟೀಲ್ ಎರಡು ಪಂದ್ಯಗಳಿಂದ 9 ವಿಕೆಟ್ ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ಕೇವಲ 2 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. 

ರಾಜ್ಯದ ಕ್ರಿಕೆಟಿಗ ಕರುಣ್ ನಾಯರ್ ವಿದರ್ಭಕ್ಕೆ ವಲಸೆ?

ಬೆಂಗಳೂರು: ಕರ್ನಾಟಕದ ತಾರಾ ಕ್ರಿಕೆಟಿಗರಲ್ಲಿ ಒಬ್ಬರಾದ ಕರುಣ್‌ ನಾಯರ್‌ 2023-24ರ ದೇಸಿ ಕ್ರಿಕೆಟ್‌ ಋತುವಿನಲ್ಲಿ ವಿದರ್ಭ ತಂಡದ ಪರ ಆಡಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.ಈ ಕುರಿತು ಕರುಣ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಅಲ್ಲದೇ ಅವರು ಈ ವರೆಗೂ ನಿರಾಕ್ಷೇಪಣ ಪತ್ರವನ್ನೂ ಕೇಳಿಲ್ಲ ಎಂದು ಕೆಎಸ್‌ಸಿಎ ಮೂಲಗಳು ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿವೆ.

Ashes 2023: ಇಂಗ್ಲೆಂಡ್ ಎದುರು ಬೃಹತ್ ಮುನ್ನಡೆಯತ್ತ ಆಸ್ಟ್ರೇಲಿಯಾ

ಲಯದ ಸಮಸ್ಯಯ ಕಾರಣ ಕರುಣ್‌ರನ್ನು ಕಳೆದ ಋತುವಿನಲ್ಲಿ ಕರ್ನಾಟಕ ತಂಡದಿಂದ ಹೊರಗಿಡಲಾಗಿತ್ತು. ಮತ್ತೊಂದು ಅವಕಾಶ ನೀಡುವಂತೆ ಕರುಣ್ ಟ್ವೀಟ್ ಸಹ ಮಾಡಿದ್ದರು. ಐಪಿಎಲ್ ಹರಾಜಿನಲ್ಲಿ ಕರುಣ್‌ ಬಿಕರಿಯಾಗದೆ ಉಳಿದಿದ್ದರು. ಕೆ.ಎಲ್‌.ರಾಹುಲ್‌ ಗಾಯಗೊಂಡು ಹೊರಬಿದ್ದ ಬಳಿಕ ಲಖನೌ ತಂಡ ಕರುಣ್‌ರನ್ನು ತಂಡಕ್ಕೆ ಸೇರಿಸಿಕೊಂಡಿತ್ತಾದರೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ನೆದರ್‌ಲೆಂಡ್ಸ್‌ ವಿರುದ್ಧ ಲಂಕಾಕ್ಕೆ ರೋಚಕ ಜಯ

ಬುಲವಾಯೋ: ಐಸಿಸಿ ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿಯ ಸೂಪರ್‌-6 ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಶ್ರೀಲಂಕಾ 21 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿ 96 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಲಂಕಾ, ಧನಂಜಯ ಡಿ ಸಿಲ್ವಾ(93), ಮಹೀಶ್‌ ಥೀಕ್ಷಣ(28) ಅವರ ಹೋರಾಟದಿಂದ 47.4 ಓವರಲ್ಲಿ 213 ರನ್‌ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್‌, 88 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಜಯದತ್ತ ಮುನ್ನುಗುತ್ತಿತ್ತು. ಆದರೆ ದಿಢೀರ್‌ ಕುಸಿತ ಕಂಡ ನೆದರ್‌ಲೆಂಡ್ಸ್‌ 40 ಓವರಲ್ಲಿ 192 ರನ್‌ಗೆ ಆಲೌಟ್‌ ಆಯಿತು. ಶನಿವಾರ ವೆಸ್ಟ್‌ಇಂಡೀಸ್‌ ಹಾಗೂ ಸ್ಕಾಟ್ಲೆಂಡ್‌ ಸೆಣಸಲಿವೆ.