ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಯಿಂದ ಆರ್‌ಸಿಬಿ ಕೆಕೆಆರ್ ನಡುವಿನ ಪಂದ್ಯ ರದ್ದಾಗಿದೆ. ಇದರ ಪರಿಮಾಮ ಆರ್‌ಸಿಬಿ ಪ್ಲೇ ಆಫ್ ಹಾದಿ ಸುಗಮಗೊಂಡಿದ್ದರೆ, ಇತ್ತ ಕೆಕೆಆರ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.

ಬೆಂಗಳೂರು(ಮೇ.17) ಸತತವಾಗಿ ಸುರಿದ ಮಳೆಯಿಂದ ಬೆಂಗೂರಿನ ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ಆಯೋಜಿಸಿದ್ದ ಆರ್‌ಸಿಬಿ -ಕೆಕೆಆರ್ ನಡುವಿನ ಪಂದ್ಯ ರದ್ದಾಗಿದೆ. ಅಭಿಮಾನಿಗಳು ವಿರಾಟ್ ಕೊಹ್ಲಿಗೆ ವಿಶೇಷ ಟ್ರಿಬ್ಯೂಟ್ ಸಲ್ಲಿಸಲು ವೈಟ್ ಜರ್ಸಿಯಲ್ಲಿ ಆಗಮಿಸಿದ್ದರು. ಪುನರ್ ಆರಂಭಗೊಂಡ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ಇದಾಗಿತ್ತು. ಆದರೆ ಮಳೆ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತ್ತು. ಪಂದ್ಯ ರದ್ದುಗೊಂಡ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕ ಸಂಪಾದಿಸಿದೆ. ಆರ್‌ಸಿಬಿ 17 ಅಂಕ ಸಂಪಾದಿಸಿ ಇದೀಗ ಪ್ಲೇ ಆಫ್ ಸ್ಹಾದಿ ಸುಗಮಗೊಂಡಿದೆ. ಇತ್ತ ಕೆಕೆಆರ್ ತಂಡ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.

ಆರ್‌ಸಿಬಿ ಪ್ಲೇ ಆಫ್ ಸ್ಥಾನ
ಮಳೆಯಿಂದ ಪಂದ್ಯ ರದ್ದಾಗಿರುವ ಕಾರಣ ಒಂದು ಅಂಕ ಆರ್‌ಸಿಬಿ ಸಂಪಾದಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ. ನಾಳೆ ನಡೆಯಲಿರುವ ಪ್ರತ್ಯೇಕ ಎರಡು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡರೆ ಆರ್‌ಸಿಬಿ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.ಇನ್ನುಳಿದ 2 ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದರೆ ಯಾವುದೇ ಅಡ್ಡಿ ಆತಂಕವಿಲ್ಲದೆ ಟಾಪ್ 2 ತಂಡವಾಗಿ ಪ್ಲೇ ಆಫ್ ಸ್ಥಾನ ಪಡೆಯಲಿದೆ. ಆದರೆ ಕೆಕೆಆರ್ ಕೊನೆಯ ಅವಕಾಶದಲ್ಲಿ ಪ್ಲೇ ಆಪ್ ಆಸೆ ಜೀವಂತವಾಗಿರಿಸಲು ಮುಂದಾಗಿತ್ತು. ಆದರೆ ಮಳೆಯಿಂದ ಪಂದ್ಯ ರದ್ದಾಗುವ ಮೂಲಕ ಪ್ಲೇ ಆಪ್ ರೇಸ್‌ನಿಂದ ಹೊರಬಿದ್ದಿದೆ. ಸದ್ಯ ಯಾವುದೇ ತಂಡ ಅಧಿಕೃತವಾಗಿ ಪ್ಲೇ ಆಫ್ ಸ್ಥಾನಕ್ಕೇರಿಲ್ಲ.

ಕೊನೆಯವರೆಗೂ ಕಾದ ಫ್ಯಾನ್ಸ್
ಆರ್‌ಸಿಬಿ ಅಭಿಮಾನಿಗಳಿಗೆ ಮಹತ್ವದ ಪಂದ್ಯವಾಗಿತ್ತು. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ಸ್ಪೆಷಲ್ ಟ್ರಿಬ್ಯೂಟ್ ನೀಡಲು ಮುಂದಾಗಿತ್ತು. ವೈಟ್ ಜರ್ಸಿ ತೊಟ್ಟು ಕ್ರೀಡಾಂಗಣಕ್ಕೆ ಹಾಜರಾಗಿದ್ದರು. ಆದರೆ ಮಳೆರಾಯ ಅನುವು ಮಾಡಿಕೊಡಲಿಲ್ಲ.ಬೆಂಗಳೂರಿನಲ್ಲಿ ಸುರಿದ ಸತತ ಮಳೆಯಿಂದ 10.30ರ ವೇಳೆಗೆ ಪಂದ್ಯ ರದ್ದು ಎಂದು ಘೋಷಿಸಲಾಯಿತು. ಆದರೆ ಆರ್‌ಸಿಬಿ ಅಭಿಮಾನಿಗಳು ಮಾತ್ರ ಕ್ರೀಡಾಂಗಣ ಬಿಟ್ಟು ಕದಲಿರಲಿಲ್ಲ. ಕೊನೆಯ 5 ಓವರ್ ಪಂದ್ಯಕ್ಕೆ ಕಾದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ಐಪಿಎಲ್ ಅಂಕಪಟ್ಟಿ
ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 12 ಪಂದ್ಯಗಳಿಂದ 17 ಅಂಕ ಸಂಪಾದಿಸಿದೆ. ಇತ್ತ 2ನೇ ಸ್ಥಾನದಲ್ಲಿರುವ ಗುಜರಾತ್ 11 ಪಂದ್ಯಗಳಿಂದ 16 ಅಂಕ ಸಂಪಾದಿಸಿದೆ. ಪಂಜಾಬ್ ಕಿಂಗ್ಸ್ 11 ಪಂದ್ಯಗಳಿಂದ 15 ಅಂಕ ಗಳಿಸುವ ಮೂಲಕ 3ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 12 ಪಂದ್ಯದಲ್ಲಿ 14 ಅಂಕ ಸಂಪಾದಿಸಿದೆ. 

ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ನಾಲ್ಕನೇ ತಂಡ ಕೆಕೆಆರ್
ಐಪಿಎಲ್ 2025ರ ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ನಾಲ್ಕನೇ ತಂಡ ಕೆಕೆಆರ್ ಅನ್ನೋ ಕುಖ್ಯಾತಿಗೆ ಗುರಿಯಾದಿದೆ.ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದಿತ್ತು.