ಐಪಿಎಲ್ ಪ್ಲೇ ಆಫ್‌ಗೇರಲು ವಿಫಲವಾದ ಆರ್‌ಸಿಬಿಸೋಲಿನ ಬೆನ್ನಲ್ಲೇ ತಂಡದ ಬೆನ್ನಿಗೆ ನಿಂತ ಫ್ಯಾನ್ಸ್‌ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಟ್ರೆಂಡಿಂಗ್
ಬೆಂಗಳೂರು(ಮೇ.22): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ಎದುರು 6 ವಿಕೆಟ್ ಆಘಾತಕಾರಿ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಆರ್‌ಸಿಬಿ ತಂಡದ ಪ್ಲೇ ಆಫ್ ಮಾತ್ರವಲ್ಲದೇ ಕಪ್ ಗೆಲ್ಲುವ ಕನಸು ಕೂಡಾ ಭಗ್ನವಾಗಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯಿತು. ಆದರೆ ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇದರ ಹೊರತಾಗಿಯೂ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಆರ್‌ಸಿಬಿ ತಂಡವು 5 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲೇ ವೃದ್ದಿಮಾನ್ ಸಾಹ ಅವರ ವಿಕೆಟ್ ಕಳೆದುಕೊಂಡಿತಾದರೂ. ಇದಾದ ಬಳಿಕ ವಿಜಯ್ ಶಂಕರ್ ಬಾರಿಸಿದ ಸ್ಪೋಟಕ ಅರ್ಧಶತಕ ಹಾಗೂ ಶುಭ್‌ಮನ್ ಗಿಲ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಕೇವಲ 19.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುವಲ್ಲಿ ಗುಜರಾತ್ ಟೈಟಾನ್ಸ್ ಯಶಸ್ವಿಯಾಯಿತು. ಈ ಸೋಲಿನೊಂದಿಗೆ ಆರ್‌ಸಿಬಿ ತಂಡವು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತು.
ಆರ್‌ಸಿಬಿ ತಂಡವು ಈ ಸೋಲು ಅನುಭವಿಸುತ್ತಿದ್ದಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಟ್ರೆಂಡಿಂಗ್ ಆಗಲಾರಂಭಿಸಿದೆ. ಹಲವು ಅಭಿಮಾನಿಗಳು ಆರ್‌ಸಿಬಿ ಪರ ಬ್ಯಾಟ್ ಬೀಸಿದ್ದಾರೆ.
IPL 2023 'ನೀವೇ ಸ್ಪೂರ್ತಿ': ವಿರಾಟ್ ಕೊಹ್ಲಿ ಗುಣಗಾನ ಮಾಡಿದ ಪಾಕ್ ಕ್ರಿಕೆಟಿಗನ ಟ್ವೀಟ್ ವೈರಲ್...!
ಆರ್‌ಸಿಬಿ ಕೊಟ್ಟಷ್ಟು ನೋವು ಅವಳು ಕೂಡ ಕೊಟ್ಟಿರಲಿಲ್ಲ, ಆದರೂ ಕೂಡ ಆರ್‌ಸಿಬಿ ಮೇಲಿರುವ ಪ್ರೀತಿ, ಅಭಿಮಾನ ಯಾವತ್ತೂ ಕಮ್ಮಿ ಆಗಲ್ಲ ಎಂದು ಪೋಸ್ಟ್ ಮಾಡುವ ಮೂಲಕ ಆರ್‌ಸಿಬಿ ತಂಡವನ್ನು ಬೆಂಬಲಿಸಿದ್ದಾರೆ.
ಆರ್‌ಸಿಬಿ ಕುರಿತಾದ ಟ್ರೆಂಡ್ ಆಗಿರುವ ಕೆಲವು ಪೋಸ್ಟ್‌ಗಳು ಇಲ್ಲಿವೆ ನೋಡಿ
