Asianet Suvarna News Asianet Suvarna News

IPL 2023 'ನೀವೇ ಸ್ಪೂರ್ತಿ': ವಿರಾಟ್ ಕೊಹ್ಲಿ ಗುಣಗಾನ ಮಾಡಿದ ಪಾಕ್ ಕ್ರಿಕೆಟಿಗನ ಟ್ವೀಟ್ ವೈರಲ್‌...!

ಗುಜರಾತ್ ಟೈಟಾನ್ಸ್ ಎದುರು ಆಕರ್ಷಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ ಪಾಕಿಸ್ತಾನದ ಮಾಜಿ ವೇಗಿ
ಕೊಹ್ಲಿ ಶತಕದ ಹೊರತಾಗಿಯೂ ಸೋಲುಂಡ ಆರ್‌ಸಿಬಿ

IPL 2023 Pakistan Star Mohammad Amir Tweet For Virat Kohli Takes Internet By Storm kvn
Author
First Published May 22, 2023, 4:45 PM IST

ಬೆಂಗಳೂರು(ಮೇ.22): ಬಹುನಿರೀಕ್ಷಿತ ಆರನೇ ಐಪಿಎಲ್ ಶತಕ ಸಿಡಿಸಿದ ಕೆಲವೇ ದಿನಗಳಲ್ಲಿ ವಿರಾಟ್‌ ಕೊಹ್ಲಿ ಮತ್ತೊಮ್ಮೆ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌ಸಿಬಿ ಕ್ರಿಕೆಟ್ ತಂಡದ ರನ್‌ ಮಷೀನ್ ವಿರಾಟ್ ಕೊಹ್ಲಿ, ಗುಜರಾತ್ ಟೈಟಾನ್ಸ್‌ ಎದುರು ಕೇವಲ 60 ಎಸೆತಗಳನ್ನು ಎದುರಿಸಿ ವೃತ್ತಿಜೀವನದ ಏಳನೇ ಐಪಿಎಲ್ ಶತಕ ಸಿಡಿಸಿ ಸಂಭ್ರಮಿಸಿದರು.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಪರ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಅಜೇಯ ಶತಕ(101) ಸಿಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್(06) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಜಗತ್ತಿನಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಆಮೀರ್ ಕೂಡಾ, ವಿರಾಟ್ ಕೊಹ್ಲಿಯನ್ನು ಕೊಂಡಾಡಿದ್ದಾರೆ.  

ವಿರಾಟ್ ಕೊಹ್ಲಿ ಶತಕ ಸಿಡಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮೊಹಮ್ಮದ್ ಆಮೀರ್, " ಗೆಲ್ಲಲೇಬೇಕಾದ ಪಂದ್ಯದಲ್ಲಿ ರಿಯಲ್ ಕಿಂಗ್‌ ವಿರಾಟ್ ಕೊಹ್ಲಿಯಿಂದ 82ನೇ ಶತಕವಿದು. ವಿರಾಟ್ ನಿಜವಾದ್ ಚಾಂಪಿಯನ್‌ ಹಾಗೂ ಹಲವರ ಪಾಲಿಗೆ ಸ್ಪೂರ್ತಿಯ ಚಿಲುಮೆ" ಎಂದು ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬಾರಿಸಿದ 7ನೇ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಶುಭ್‌ಮನ್ ಗಿಲ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಇನ್ನೂ 5 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. 

ಐಪಿಎಲ್‌ನಲ್ಲಿ ಕೊಹ್ಲಿ 7ನೇ ಶತಕ; ಹೊಸ ದಾಖಲೆ ನಿರ್ಮಾಣ

ಬೆಂಗಳೂರು: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 7ನೇ ಶತಕ ಪೂರ್ತಿಗೊಳಿಸಿದ್ದು, ಟೂರ್ನಿಯ ಇತಿಹಾಸದಲ್ಲೇ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಭಾನುವಾರ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 61 ಎಸೆತಗಳನ್ನು ಎದುರಿಸಿ ಅಜೇಯ 101 ರನ್ ಸಿಡಿಸಿದರು. 

RCB ಸೋಲಿನ ಬೆನ್ನಲ್ಲೇ ಬೆಂಕಿಗೆ ತುಪ್ಪ ಸುರಿದ ನವೀನ್‌ ಉಲ್‌-ಹಕ್..! ರೊಚ್ಚಿಗೆದ್ದ ಕೊಹ್ಲಿ ಫ್ಯಾನ್ಸ್

2016ರಲ್ಲಿ ವಿರಾಟ್ ಕೊಹ್ಲಿ ಒಂದೇ ಆವೃತ್ತಿಯಲ್ಲಿ 4 ಶತಕ ಸಿಡಿಸಿದ್ದರು. ಇದಾದ ಬಳಿಕ 2019ರಲ್ಲಿ ಮತ್ತೊಂದು ಶತಕ ಸಿಡಿಸಿದ್ದ ವಿರಾಟ್, ಈ ವರ್ಷ ಎರಡು ಐಪಿಎಲ್ ಶತಕ ಬಾರಿಸುವ ಮೂಲಕ ಕ್ರಿಸ್ ಗೇಲ್(6 ಶತಕ) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್(5 ಶತಕ), ಡೇವಿಡ್ ವಾರ್ನರ್, ಶೇನ್ ವಾಟ್ಸನ್‌ ಹಾಗೂ ಕೆ ಎಲ್ ರಾಹುಲ್ ತಲಾ 4 ಶತಕ ಬಾರಿಸಿದ್ದಾರೆ. 

Follow Us:
Download App:
  • android
  • ios