IPL ಆರಂಭಕ್ಕೂ ಮುನ್ನ ಧೋನಿ ಮನೆ ಮುಂದೆ ಜಡೇಜಾ ಹಾಜರ್..! ಲೆಜೆಂಡ್ ಮನೆ ಮುಂದೆ ಫ್ಯಾನ್ ಫೋಸ್ ಎಂದ ಜಡ್ಡು
ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ತವರಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಆಯೋಜನೆಗೊಂಡಿತ್ತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಟೆಸ್ಟ್ ಪಂದ್ಯವು ನಾಲ್ಕೇ ದಿನದಲ್ಲಿ ಮುಕ್ತಾಯವಾಯಿತು. ಈ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 5 ವಿಕೆಟ್‌ಗಳಿಂದ ಜಯಿಸಿತ್ತು.
ರಾಂಚಿ(ಫೆ.28): ಒಂದು ಕಡೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೇ, ಮತ್ತೊಂದೆಡೆ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಭರದ ಸಿದ್ದತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಇದೀಗ ರಾಂಚಿ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಕ್ರಿಕೆಟ್ ದಂತಕಥೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮನೆಗೆ ಭೇಟಿಕೊಟ್ಟು ಗಮನ ಸೆಳೆದಿದ್ದಾರೆ.
ಹೌದು, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ತವರಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಆಯೋಜನೆಗೊಂಡಿತ್ತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಟೆಸ್ಟ್ ಪಂದ್ಯವು ನಾಲ್ಕೇ ದಿನದಲ್ಲಿ ಮುಕ್ತಾಯವಾಯಿತು. ಈ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 5 ವಿಕೆಟ್‌ಗಳಿಂದ ಜಯಿಸಿತ್ತು. ಈ ಮೂಲಕ ಇನ್ನೂ ಒಂದು ಟೆಸ್ಟ್ ಪಂದ್ಯ ಬಾಕಿ ಇರುವಂತೆಯೇ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಜಯಿಸಿತು. ಈ ಮೂಲಕ ತವರಿನಲ್ಲಿ ಸತತ 17ನೇ ಟೆಸ್ಟ್ ಸರಣಿಯನ್ನು ಜಯಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು.
ಇಂಗ್ಲೆಂಡ್ ಎದುರಿನ ಧರ್ಮಶಾಲಾ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಎರಡು ಮೇಜರ್ ಚೇಂಜ್..?
4ನೇ ಟೆಸ್ಟ್ ಪಂದ್ಯವು ನಾಲ್ಕೇ ದಿನಕ್ಕೆ ಮುಕ್ತಾಯವಾದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಆಟಗಾರ ರವೀಂದ್ರ ಜಡೇಜಾ, ಧೋನಿಯ ವಾಸ ಮಾಡುವ ಫಾರ್ಮ್ ಹೌಸ್‌ಗೆ ಭೇಟಿ ನೀಡಿ ಮನೆಯ ಮುಂದಿನ ಗೇಟ್ ಬಳಿ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಇದಷ್ಟೇ ಅಲ್ಲದೇ, 'ದಿಗ್ಗಜ ಎಂಎಸ್‌ಡಿ ಮನೆಯ ಮುಂದೆ ಅವರ ಅಭಿಮಾನಿಯಾಗಿ ಒಂದು ಫ್ಯಾನ್ ಫೋಸ್" ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತಕ್ಕೆ 2ನೇ ಸ್ಥಾನ ಭದ್ರ
ದುಬೈ: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್‌ನಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್‍ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಭಾರತದ ವಿರುದ್ಧ ಸತತ ಸೋಲು ಕಂಡಿರುವ ಇಂಗ್ಲೆಂಡ್ 19.44 ಜಯದ ಪ್ರತಿ ಶತದೊಂದಿಗೆ 8 ಸ್ಥಾನದಲ್ಲಿದೆ.
'ನಾನು ಈ ದುಬಾರಿ ಕಾರು ಕೊಳ್ಳುತ್ತೇನೆ ನೋಡ್ತಾ ಇರಿ..': ರೋಹಿತ್ ಶರ್ಮಾ ಪ್ರತಿಜ್ಞೆ ಸ್ಮರಿಸಿಕೊಂಡ ಬಾಲ್ಯದ ಕೋಚ್
2023-25ರ ಡಬ್ಲ್ಯುಟಿಸಿ ಅವಧಿಯಲ್ಲಿ ಇದುವರೆಗೂ 8 ಟೆಸ್ಟ್ ಆಡಿರುವ ಭಾರತ 5ರಲ್ಲಿ ಜಯ, 2ರಲ್ಲಿ ಸೋಲು ಮತ್ತು ಒಂದರಲ್ಲೂ ಡ್ರಾ ಸಾಧಿಸಿದ್ದು, 4ನೇ ಟೆಸ್ಟ್‌ನಡ ಗೆಲುವಿನೊಂದಿಗೆ ಜಯದ ಪ್ರತಿಶತ 64.58ಕ್ಕೆ ಏರಿಕೆಯಾಗಿದೆ. 75.0 ಜಯದ ಪ್ರತಿಶತ ಹೊಂದಿರುವ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ 3ನೇ, ಬಾಂಗ್ಲಾದೇಶ 4ನೇ, ಪಾಕಿಸ್ತಾನ 5, ವೆಸ್ಟ್ ಇಂಡೀಸ್ 6, ದಕ್ಷಿಣ ಆಫ್ರಿಕಾ 7ನೇ ಸ್ಥಾನದಲ್ಲಿದೆ.
ತವರಿನಲ್ಲಿ ಸತತ 17ನೇ ಸರಣಿ ಗೆಲುವು!
ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಇಂಗ್ಲೆಂಡ್‌ಗೆ ಈ ಬಾರಿಯೂ ಸಾಧ್ಯವಾಗಲಿಲ್ಲ. 2013ರಿಂದ ಭಾರತ ತವರಿನಲ್ಲಿ ಆಡಿರುವ 17 ಟೆಸ್ಟ್ ಸರಣಿಯಲ್ಲೂ ಜಯಭೇರಿ ಬಾರಿಸಿದೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧವೇ ಸರಣಿ ಸೋತಿದ್ದ ಟೀಂ ಇಂಡಿಯಾ ಆ ಬಳಿಕ ಎಲ್ಲಾ ಸರಣಿಯಲ್ಲೂ ಪರಾಕ್ರಮ ಮೆರೆದು ಗೆದ್ದಿದೆ. ಭಾರತ ಹೊರತುಪಡಿಸಿ ಬೇರೆ ಯಾವ ತಂಡವೂ ತವರಿನಲ್ಲಿ ಸತತ 10ಕ್ಕಿಂತ ಹೆಚ್ಚು ಸರಣಿ ಗೆದ್ದ ಚರಿತ್ರೆಯಿಲ್ಲ.