ರೋಹಿತ್ ಶರ್ಮಾ ಆಗಷ್ಟೇ ಮುಂಬೈ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದರು. ಆಗ ಅವರ ಮುಂದೆ ಐಶಾರಾಮಿ ಮರ್ಸಿಡೀಸ್ ಕಾರೊಂದು ಬಂದು ನಿಂತಿತು. ಆಗ ರೋಹಿತ್ ಶರ್ಮಾ ಮುಂದೊಂದು ದಿನ ತಾವೂ ಇದೇ ಕಾರನ್ನು ಖರೀದಿಸುತ್ತೇನೆ ಎಂದು ಹೇಳಿದ್ದನ್ನು ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಹೇಳಿದ್ದಾರೆ.

ಮುಂಬೈ: ತುಂಬಾ ಸಾಮಾನ್ಯ ಕುಟುಂಬ ಹಿನ್ನಲೆಯಿಂದ ಬೆಳೆದುಬಂದ ರೋಹಿತ್ ಶರ್ಮಾ ಇದೀಗ ಟೀಂ ಇಂಡಿಯಾ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್, ಹಿಟ್‌ಮ್ಯಾನ್ ಹದಿಹರೆಯದ ವಯಸ್ಸಿನ ಹುಡುಗನಿದ್ದಾಗ ತಮ್ಮ ಬಳಿ ತರಬೇತಿ ಪಡೆಯುತ್ತಿದ್ದಾಗ ಹಂಚಿಕೊಂಡ ಕನಸೊಂದನ್ನು ಇದೀಗ ಮೆಲುಕು ಹಾಕಿದ್ದಾರೆ.

ಹೌದು, ರೋಹಿತ್ ಶರ್ಮಾ ಆಗಷ್ಟೇ ಮುಂಬೈ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದರು. ಆಗ ಅವರ ಮುಂದೆ ಐಶಾರಾಮಿ ಮರ್ಸಿಡೀಸ್ ಕಾರೊಂದು ಬಂದು ನಿಂತಿತು. ಆಗ ರೋಹಿತ್ ಶರ್ಮಾ ಮುಂದೊಂದು ದಿನ ತಾವೂ ಇದೇ ಕಾರನ್ನು ಖರೀದಿಸುತ್ತೇನೆ ಎಂದು ಹೇಳಿದ್ದನ್ನು ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಹೇಳಿದ್ದಾರೆ.

ರಾಂಚಿ ಟೆಸ್ಟ್‌ಗೂ ಮುನ್ನ ರಾಹುಲ್ ದ್ರಾವಿಡ್ ಆಡಿದ ಸ್ಪೂರ್ತಿಯ ಮಾತು ಸ್ಮರಿಸಿಕೊಂಡ ಶುಭ್‌ಮನ್ ಗಿಲ್‌..!

"ಒಂದು ದಿನ ನಾನು ಹಾಗೂ ರೋಹಿತ್ ಶರ್ಮಾ ಜತೆಗಿದ್ದಾಗ ರಸ್ತೆಯಲ್ಲಿ ಮರ್ಸಿಡೀಸ್ ಕಾರೊಂದು ಬಂದಿತ. ಆಗ ರೋಹಿತ್ ಶರ್ಮಾ. ' ಸರ್, ನಾನು ಮುಂದೊಂದು ದಿನ ಈ ಕಾರನ್ನು ಖರೀದಿಸುತ್ತೇನೆ' ಎಂದರು. ನಾನು ರೋಹಿತ್‌ಗೆ ಆ ಕಾರು ಎಷ್ಟು ದುಬಾರಿ ಎನ್ನುವುದನ್ನು ಹೇಳಲು ಪ್ರಯತ್ನಿಸಿದೆ. 'ಸೀರಿಯಸ್ ಆಗಿ ಈ ಮಾತು ಹೇಳುತ್ತಿದ್ದೀಯಾ ಎಂದು ಕೇಳಿದೆ. ಯಾಕೆಂದರೆ ಈ ಕಾರು ಎಷ್ಟೊಂದು ದುಬಾರಿ ಗೊತ್ತ ಎಂದು ಹೇಳಿದೆ. ಆಗ ರೋಹಿತ್ ಶರ್ಮಾ, 'ನೀವು ನಾನು ಈ ಕಾರನ್ನು ಕೊಳ್ಳುವುದನ್ನು ನೋಡುತ್ತೀರ' ಎಂದು ಹೇಳಿದ್ದರು". ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Scroll to load tweet…

IPL 2024 ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರರಿವರು..!

ಟೀಂ ಇಂಡಿಯಾ ಕ್ರಿಕೆಟಿಗನಾಗು ಮುನ್ನ ಕಂಡ ಕನಸನ್ನು ರೋಹಿತ್ ಶರ್ಮಾ ಈಗಾಗಲೇ ನನಸು ಮಾಡಿಕೊಂಡಿದ್ದಾರೆ. ಸದ್ಯ ರೋಹಿತ್ ಶರ್ಮಾ ಬಳಿ ಮರ್ಸಿಡೀಸ್ ಮಾತ್ರವಲ್ಲದೇ ಹಲವು ಐಶಾರಾಮಿ ಕಾರುಗಳ ಕಲೆಕ್ಷನ್ ಇದೆ. 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಹಿಟ್‌ಮ್ಯಾನ್ ಮಧ್ಯಮ ಕ್ರಮಾಂಕದಲ್ಲಿ ಗಮನ ಸೆಳೆದಿದ್ದರು. ಹೀಗಿದ್ದೂ 2011ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ 2013ರ ಬಳಿಕ ಧೋನಿ ನಾಯಕತ್ವದಡಿ ಆರಂಭಿಕನಾಗಿ ಬಡ್ತಿಪಡೆದ ಹಿಟ್‌ಮ್ಯಾನ್ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ರೋಹಿತ್ ಶರ್ಮಾ ಅವರಿಗಿದೆ.