ರವಿಚಂದ್ರನ್ ಅಶ್ವಿನ್ ಯಶಸ್ಸಿನಲ್ಲಿ ಧೋನಿಗೂ ಸಲ್ಲಬೇಕು ಕ್ರೆಡಿಟ್..! ಭಜ್ಜಿಗೆ ಸರಿಯಾಟಿ ಅಶ್ವಿನ್ ಬೆಳೆಸಿದ್ದು ಮಹಿ
* ಟೆಸ್ಟ್ ಕ್ರಿಕೆಟ್‌ನಲ್ಲಿ 700+ ವಿಕೆಟ್ ಸಾಧನೆ ಮಾಡಿದ ರವಿಚಂದ್ರನ್ ಅಶ್ವಿನ್
* ರವಿಚಂದ್ರನ್ ಅಶ್ವಿನ್ ಯಶಸ್ಸಿನ ಹಿಂದಿದೆ ಕ್ಯಾಪ್ಟನ್ ಕೂಲ್ ಧೋನಿ ಪಾತ್ರ
* ಹರ್ಭಜನ್ಗೆ ಸರಿಸಾಟಿಯಾಗಿ ಅಶ್ವಿನ್ನ ಬೆಳೆಸಿದ ಮಹಿ..!
ಬೆಂಗಳೂರು(ಜು.15) ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಫುಲ್ ಕಂಟ್ರೋಲ್ ಸಾಧಿಸಿದೆ. ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಪಡೆ ಇನಿಂಗ್ಸ್ ಹಾಗೂ 141 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ. ಇದಕ್ಕೆ ಕಾರಣ, ತಂಡದ ಬೌಲರ್ಸ್. ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ಬೌಲರ್ಸ್ ಅದ್ಭುತ ದಾಳಿ ನಡೆಸಿದ್ರು. ಆ ಮೂಲಕ ವಿಂಡಿಸ್ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ್ರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ತಂಡವನ್ನು ಕೇವಲ 130 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಅದರಲ್ಲೂ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಸ್ಪಿನ್ ದಾಳಿಗೆ ಕೆರಿಬಿಯನ್ ಪಡೆ ತತ್ತರಿಸಿ ಹೋಯ್ತು.
ಅಶ್ವಿನ್ ಬೌಲಿಂಗ್ನಲ್ಲಿ ಬ್ಯಾಟ್ ಬೀಸಲು ವಿಂಡೀಸ್ ಬ್ಯಾಟರ್ಸ್ ಪರದಾಡಿದ್ರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್, 33ನೇ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ರು. ಅಲ್ಲದೇ, ಅಲ್ಜಾರಿ ಜೋಸೆಫ್ನ ಔಟ್ ಮಾಡೋ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಬೇಟೆಯಾಡಿದ್ರು. ಇದರೊಂದಿಗೆ ಭಾರತದ ಪರ ಈ ಸಾಧನೆ ಮಾಡಿದ 3ನೇ ಬೌಲರ್ ಅನ್ನೋ ದಾಖಲೆ ಬರೆದ್ರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ಸ್ ಅಂದ್ರೆ ಸಾಮಾನ್ಯ ಅಲ್ಲ. ಆದ್ರೆ, ಇಂತಹ ಅದ್ಭುತ ಸಾಧನೆ ಮಾಡಿರೋ ಅಶ್ವಿನ್ನ ತಂಡಕ್ಕೆ ಆಯ್ಕೆ ಮಾಡಿದ್ದಕ್ಕೆ ಟೀಕೆಗಳು ಕೇಳಿ ಬಂದಿದ್ವು.
ಹರ್ಭಜನ್ಗೆ ಸರಿಸಾಟಿಯಾಗಿ ಅಶ್ವಿನ್ನ ಬೆಳೆಸಿದ ಮಹಿ..!
ಅಶ್ವಿನ್ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಾಗ ಮತ್ತೊಬ್ಬ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡದಲ್ಲಿದ್ರು. ಇದರಿಂದ ಬಜ್ಜಿಯನ್ನ ಸೈಡ್ಲೈನ್ ಮಾಡಲು ಅಶ್ವಿನ್ನ ಆಯ್ಕೆ ಮಾಡಲಾಗಿದೆ ಅಂತ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ರು. ಆದ್ರೆ, ಧೋನಿ ಮಾತ್ರ ಅಶ್ವಿನ್ನ ಬಿಟ್ಟುಕೊಡಲಿಲ್ಲ. IPLನಲ್ಲಿ ಸಿಎಸ್ಕೆ ಪರ ಅಶ್ವಿನ್ ಆಡ್ತಿದ್ದರಿಂದ ಧೋನಿಗೆ ಅಶ್ವಿನ್ ಟ್ಯಾಲೆಂಟ್ ಮತ್ತು ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಅರಿವಿತ್ತು. ಇದರಿಂದ ಧೋನಿ ಜಿದ್ದಿಗೆ ಬಿದ್ದು ಅಶ್ವಿನ್ರನ್ನ ತಂಡಕ್ಕೆ ಸೇರಿಸಿಕೊಂಡ್ರು.
Ind vs WI ಕೆರಿಬಿಯನ್ನರ ಬೇಟೆಯಾಡಿದ ಭಾರತದ ಹುಲಿಗಳು..! ಟೀಂ ಇಂಡಿಯಾಗೆ ಇನಿಂಗ್ಸ್ ಜಯಭೇರಿ..!
ಅವತ್ತು ಧೋನಿ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನ ಅಶ್ವಿನ್ ಇವತ್ತಿಗೂ ಉಳಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಬದಲಾಗಿದ್ದಾರೆ. ಆವತ್ತು ಯಾರು ಅಶ್ವಿನ್ ತಂಡ ಬೇಡ ಅಂದಿದ್ರೋ ಅವ್ರೇ ಈಗ ಅಶ್ವಿನ್ನ ಕೊಂಡಾಡ್ತಿದ್ದಾರೆ.
ಅಪ್ಪ-ಮಗನ ವಿಕೆಟ್ ಪಡೆದ ಅಶ್ವಿನ್
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ ವಿಶೇಷ ದಾಖಲೆ ಬರೆದಿದ್ದಾರೆ. 2011ರಲ್ಲಿ ಶಿವನಾರಾಯಣ್ ಚಂದ್ರಪಾಲ್ ವಿಕೆಟ್ ಪಡೆದುಕೊಂಡಿದ್ರು. ಇನ್ನು ಈಗ ಚಂದ್ರಪಾಲ್ ಮಗ ಟಾಗೆನರೈನ್ ಚಂದ್ರಪಾಲ್ರನ್ನ ಔಟ್ ಮಾಡೋ ಮೂಲಕ ಅಪ್ಪ- ಮಗ ಇಬ್ಬರನ್ನು ಔಟ್ ಮಾಡಿದ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Asian Games 2023: ಭಾರತ ಕ್ರಿಕೆಟ್ ತಂಡ ಪ್ರಕಟ, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಿಂಕು ಸಿಂಗ್‌ಗೆ ಜಾಕ್‌ಪಾಟ್
ಒಟ್ಟಿನಲ್ಲಿ ಇವತ್ತು ಅಶ್ವಿನ್ ಭಾರತದ ಸ್ಪಿನ್ ಲೆಜಂಡ್ ಆಗಿರೋದ್ರಲ್ಲಿ ಧೋನಿಯ ಪಾತ್ರವೂ ಇದೆ. ಅಂದು ಧೋನಿ ಅಶ್ವಿನ್ ಬೆನ್ನಿಗೆ ನಿಲ್ಲದೇ ಇದ್ರೆ, ಅಶ್ವಿನ್ ಟೀಂ ಇಂಡಿಯಾಗೆ ಎಂಟ್ರಿ ನೀಡ್ತಿರಲಿಲ್ಲ. 700 ವಿಕೆಟ್ ಬೇಟೆಯಾಡ್ತಿರಲಿಲ್ಲ.