ದಿಢೀರ್ ನಿವೃತ್ತಿಯ ಬೆನ್ನಲ್ಲೇ ತಮ್ಮ ತಂದೆಯನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದಿದ್ದೇಕೆ ಅಶ್ವಿನ್?

ಭಾರತೀಯ ಕ್ರಿಕೆಟಿಗ ಆರ್. ಅಶ್ವಿನ್ ಅವರ ಹಠಾತ್ ನಿವೃತ್ತಿಗೆ ಅವರ ತಂದೆ ರವಿಚಂದ್ರನ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಶ್ವಿನ್ ಅವರನ್ನು ನಿರಂತರವಾಗಿ ಅವಮಾನಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

Ravichandran Ashwin Breaks Silence On Father Humiliation Was Going On Remark kvn

ಚೆನ್ನೈ: ‘ಅಶ್ವಿನ್ ಹಠಾತ್ ನಿವೃತ್ತಿ ನಮಗೆ ಆಘಾತ ತಂದಿದೆ. ಆತನನ್ನು ನಿರಂತರವಾಗಿ ಅವಮಾನಿಸಲಾಗುತ್ತಿತ್ತು. ಹಾಗಾಗಿಯೇ ನಿವೃತ್ತಿ ಬಗ್ಗೆ ಯೋಚನೆ ಮಾಡಿರಬಹುದು’ ಎಂದು ಭಾರತೀಯ ಕ್ರಿಕೆಟಿಗ ಆರ್‌.ಅಶ್ವಿನ್‌ರ ತಂದೆ ರವಿಚಂದ್ರನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

5 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅಶ್ವಿನ್‌, ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿದ್ದರು. ಈ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನನಗೂ ಕೂಡ ಕೊನೆ ಕ್ಷಣದಲ್ಲಿ ಈ ಬಗ್ಗೆ ಗೊತ್ತಾಯಿತು. ಅವರು ನಿವೃತ್ತಿ ನೀಡಿದ್ದಕ್ಕೆ ಹಲವು ಕಾರಣಗಳಿರಬಹುದು. ಅಶ್ವಿನ್‌ಗೆ ಮಾತ್ರ ಈ ಬಗ್ಗೆ ಗೊತ್ತಿದೆ. ಬಹುಶಃ ಅವಮಾನದಿಂದಾಗಿ ನಿವೃತ್ತಿ ಘೋಷಿಸಿರಬಹುದು. ಇದನ್ನು ನಿರೀಕ್ಷಿಸುತ್ತಿದ್ದೆವು. ಎಷ್ಟು ದಿನ ಅವರು ಇದನ್ನು ಸಹಿಸಿಕೊಂಡು ಹೋಗಲು ಸಾಧ್ಯ? ಬಹುಶಃ ಅವರು ಸ್ವಂತವಾಗಿಯೇ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ’ ಎಂದಿದ್ದಾರೆ.

ಅಲ್ಲದೇ ಮಗನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದಿರುವ ಅವರು, ‘ಇದು ಅವರ ಆಸೆ ಮತ್ತು ನಿರ್ಧಾರ. ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದಿದ್ದಾರೆ.

ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಗಡಿಯಲ್ಲಿ ಸ್ಟೇಡಿಯಂ ನಿರ್ಮಿಸಿ! ಪಾಕ್ ಮಾಜಿ ಕ್ರಿಕೆಟಿಗನ ವಿಚಿತ್ರ ಸಲಹೆ

ಅವರನ್ನು ಬಿಟ್ಟುಬಿಡಿ: ತಮ್ಮ ತಂದೆಯೆ ಹೇಳಿಕೆ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅಶ್ವಿನ್, ‘ನನ್ನ ತಂದೆಗೆ ಮಾಧ್ಯಮದ ಮುಂದೆ ಮಾತನಾಡಿ ಅಭ್ಯಾಸವಿಲ್ಲ. ಅವರನ್ನು ಕ್ಷಮಿಸಿ, ಅವರ ಪಾಡಿಗೇ ಬಿಟ್ಟುಬಿಡಿ’ ಎಂದು ಮಾಧ್ಯಮಗಳಿಗೆ ವಿನಂತಿಸಿದ್ದಾರೆ.

2010ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅಶ್ವಿನ್‌, 14 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಈ ವರೆಗೂ 116 ಏಕದಿನ ಪಂದ್ಯದಲ್ಲಿ 156 ವಿಕೆಟ್‌, 65 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 72 ಹಾಗೂ 106 ಟೆಸ್ಟ್‌ನಲ್ಲಿ 537 ವಿಕೆಟ್‌ ಕಬಳಿಸಿದ್ದಾರೆ. ಟೆಸ್ಟ್‌ನಲ್ಲಿ 6 ಶತಕಗಳೊಂದಿಗೆ 3503 ರನ್‌ ಕಲೆಹಾಕಿರುವ ಅವರು, ಏಕದಿನದಲ್ಲಿ 707, ಅಂ.ರಾ. ಟಿ20ಯಲ್ಲಿ 184 ರನ್‌ ಸಿಡಿಸಿದ್ದಾರೆ.

ಅಶ್ವಿನ್‌ 2011ರ ಏಕದಿನ ವಿಶ್ವಕಪ್‌, 2013ರ ಚಾಂಪಿಯನ್ಸ್‌ ಟ್ರೋಫಿ ವಿಜೇತ ಭಾರತ ತಂಡದಲ್ಲಿದ್ದರು. 2022ರಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯದ ಮೂಲಕ ಭಾರತ ಪರ ಕೊನೆ ಟಿ20 ಆಡಿರುವ ಅವರು, ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆ ಬಾರಿ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ರವಿಚಂದ್ರನ್ ಅಶ್ವಿನ್‌ಗೆ ಖೇಲ್‌ ರತ್ನ ನೀಡಿ: ಕೇಂದ್ರಕ್ಕೆ ಕಾಂಗ್ರೆಸ್ ಸಂಸದ ಮನವಿ!

ನಿವೃತ್ತಿ ಬಗ್ಗೆ ನನ್ನಲ್ಲಿ ವಿಷಾದವಿಲ್ಲ: ಅಶ್ವಿನ್

ತವರಿಗೆ ಬಂದಿಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನ್‌, ನಿವೃತ್ತಿ ನಿರ್ಧಾರದ ಬಗ್ಗೆ ಯಾವುದೇ ವಿಷಾದವಿಲ್ಲ ಎಂದಿದ್ದಾರೆ. ‘ನಿವೃತ್ತಿ ನಿರ್ಧಾರ ಬಗ್ಗೆ ನನ್ನಲ್ಲಿ ತೃಪ್ತಿಯಿದೆ. ಕೆಲ ದಿನಗಳಿಂದಲೂ ಈ ಬಗ್ಗೆ ಯೋಚಿಸುತ್ತಿದ್ದೆ. ಪಂದ್ಯದ 4ನೇ ದಿನ ಅದನ್ನು ಪ್ರಕಟಿಸಿದ್ದೇನೆ. ನಾನು ಹೊಸ ದಾರಿಯೊಂದರತ್ತ ಸಾಗುತ್ತಿದ್ದೇನೆ. ಹೀಗಾಗಿ ನಿವೃತ್ತಿ ಎಂಬುದು ದೊಡ್ಡ ನಿರ್ಧಾರವೇನಲ್ಲ. ಈ ಬಗ್ಗೆ ಯಾವುದೇ ವಿಷಾದವೂ ನನ್ನಲ್ಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಅಶ್ವಿನ್ ಕ್ರಿಕೆಟ್ ಅಂಕಿ-ಅಂಶ:

765 ವಿಕೆಟ್‌: ಅಶ್ವಿನ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 765 ವಿಕೆಟ್‌. ಭಾರತೀಯರ ಪೈಕಿ 2ನೇ ಗರಿಷ್ಠ. ಅಗ್ರಸ್ಥಾನದಲ್ಲಿ ಅನಿಲ್‌ ಕುಂಬ್ಳೆ(956 ವಿಕೆಟ್‌). ಒಟ್ಟಾರೆ ವಿಶ್ವದ 11ನೇ ಗರಿಷ್ಠ ವಿಕೆಟ್‌ ಸಾಧಕ.

537 ವಿಕೆಟ್‌: ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 537 ವಿಕೆಟ್‌ ಪಡೆದಿದ್ದಾರೆ. ಇದು ಭಾರತೀಯ ಬೌಲರ್‌ನ 2ನೇ ಶ್ರೇಷ್ಠ ಸಾಧನೆ. ಅನಿಲ್‌ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವದಲ್ಲೇ ಗರಿಷ್ಠ ಟೆಸ್ಟ್‌ ವಿಕೆಟ್‌ ಪಟ್ಟಿಯಲ್ಲಿ ಅಶ್ವಿನ್‌ಗೆ 7ನೇ ಸ್ಥಾನ.

383 ವಿಕೆಟ್‌: ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಅಶ್ವಿನ್‌ಗೆ ಅಗ್ರಸ್ಥಾನ. ಅವರು 65 ಪಂದ್ಯಗಳಲ್ಲಿ 383 ವಿಕೆಟ್‌ ಕಬಳಿಸಿದ್ದಾರೆ.

156 ವಿಕೆಟ್‌: ಆರ್‌.ಅಶ್ವಿನ್‌ ಏಕದಿನ ಕ್ರಿಕೆಟ್‌ನಲ್ಲಿ 156 ವಿಕೆಟ್‌ ಪಡೆದಿದ್ದಾರೆ. ಭಾರತೀಯ ಸ್ಪಿನ್ನರ್‌ಗಳ ಪೈಕಿ 4ನೇ ಗರಿಷ್ಠ.

11 ಸರಣಿಶ್ರೇಷ್ಠ: ಅಶ್ವಿನ್‌ ಟೆಸ್ಟ್‌ನಲ್ಲಿ 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ವಿಶ್ವದ ಯಾವುದೇ ಆಟಗಾರನ ಪೈಕಿ ಗರಿಷ್ಠ.

37 ಬಾರಿ: ಅಶ್ವಿನ್‌ ಟೆಸ್ಟ್‌ನಲ್ಲಿ 37 ಬಾರಿ 5+ ವಿಕೆಟ್‌ ಕಿತ್ತಿದ್ದಾರೆ. ಇದು 2ನೇ ಶ್ರೇಷ್ಠ. ಶ್ರೀಲಂಕಾದ ಮುರಳೀಧರನ್‌ 67 ಬಾರಿ ಸಾಧನೆ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios