ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಗಡಿಯಲ್ಲಿ ಸ್ಟೇಡಿಯಂ ನಿರ್ಮಿಸಿ! ಪಾಕ್ ಮಾಜಿ ಕ್ರಿಕೆಟಿಗನ ವಿಚಿತ್ರ ಸಲಹೆ

ಭಾರತ-ಪಾಕ್ ಗಡಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಅಹಮದ್ ಶಹಜಾದ್ ನೀಡಿರುವ ಹೇಳಿಕೆ ಭಾರಿ ಟ್ರೋಲ್‌ಗೆ ಒಳಗಾಗಿದೆ. ಒಂದು ಗೇಟ್ ಭಾರತದಲ್ಲಿ ಮತ್ತೊಂದು ಗೇಟ್ ಪಾಕಿಸ್ತಾನದಲ್ಲಿರಲಿ ಎಂಬ ಶಹಜಾದ್ ಹೇಳಿಕೆಗೆ ವ್ಯಂಗ್ಯವಾಗಿದೆ.

Ahmad Shahzad Presents Bizarre Yet Unique Solution For India vs Pakistan Matches kvn

ಲಾಹೋರ್: ಭಾರತ ಹಾಗೂ ಪಾಕಿಸ್ತಾನ ನಡುವೆ ಕಳೆದ 12 ವರ್ಷಗಳಿಂದ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಸಮಸ್ಯೆಗೆ ಪರಿಹಾರ ಎಂಬಂತೆ 2 ದೇಶಗಳ ಗಡಿಯಲ್ಲಿ ಕ್ರೀಡಾಂಗಣ ನಿರ್ಮಿಸಬೇಕು' ಎಂದು ಪಾಕ್ ಮಾಜಿ ಕ್ರಿಕೆಟಿಗ ಅಹಮದ್ ಶಹಜಾದ್ ನೀಡಿರುವ ಹೇಳಿಕೆ ಭಾರಿ ಟ್ರೋಲ್‌ಗೆ ಒಳಗಾಗಿದೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ 33 ವರ್ಷದ ಶಹಜಾದ್, 'ಗಡಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ನಾನು ಸಲಹೆ ನೀಡಿದ್ದೆ. ಕ್ರೀಡಾಂಗಣದ ಒಂದು ಗೇಟ್ ಭಾರತದಲ್ಲಿ ಮತ್ತೊಂದು ಗೇಟ್ ಪಾಕಿಸ್ತಾನದಲ್ಲಿರಲಿ. ಆಯಾಯ ದೇಶದ ಆಟಗಾರರು ಅವರದೇ ಗೇಟ್‌ನಲ್ಲಿ ಕ್ರೀಡಾಂಗಣ ಪ್ರವೇಶಿಸಬಹುದು' ಎಂದು ಹೇಳಿದ್ದಾರೆ.

'ಹೀಗೆ ಮಾಡಿದರೂ ಬಿಸಿಸಿಐ ಹಾಗೂ ಅಲ್ಲಿನ ಸರ್ಕಾರಕ್ಕೆ ಸಮಸ್ಯೆಯಾಗುತ್ತದೆ. ಕ್ರೀಡಾಂಗಣದ ನಮ್ಮ ಭಾಗಕ್ಕೆ ಅವರ ಆಟಗಾರರು ಬರಬೇಕಿದ್ದರೆ ವೀಸಾ ಬೇಕಾಗುತ್ತದೆ. ಅದನ್ನು ಅವರ ಸರ್ಕಾರ ಕೊಡಲ್ಲ' ಎಂದಿದ್ದಾರೆ. ಶಹಜಾದ್‌ ಈ ಹೇಳಿಕೆಗೆ ಹಲವರು ವ್ಯಂಗ್ಯವಾಡಿದ್ದು, ಪಾಕ್ ಆಟಗಾರರಿಂದ ಈ ರೀತಿ ಮೂರ್ಖತನದ ಹೇಳಿಕೆಗಳು ಆಗಾಗ ಬರುತ್ತಲೇ ಇರುತ್ತವೆ ಎಂದು ಟೀಕಿಸಿದ್ದಾರೆ. ಭಾರತ ಹಾಗೂ ಪಾಕ್ ತಂಡ ಸದ್ಯ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ.

ಭಾರತ-ಪಾಕ್ ಕ್ರಿಕೆಟ್‌ ಕಗ್ಗಂಟು ಇತ್ಯರ್ಥ: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ

ಚಾಂಪಿಯನ್ಸ್ ಟ್ರೋಫಿ ತಾತ್ಕಾಲಿಕ ವೇಳಾಪಟ್ಟಿ: ಫೆಬ್ರವರಿ 23ಕ್ಕೆ ಭಾರತ & ಪಾಕಿಸ್ತಾನ ಪಂದ್ಯ?

ದುಬೈ: 2025ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದ್ದು. ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೆ.23ರಂದು ಪರಸ್ಪರ ಸೆಣಸಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಟೂರ್ನಿ ಫೆ.19ರಿಂದ ಮಾ.9ರ ವರೆಗೆ ನಡೆಯಲಿದೆ. ಪಾಕಿಸ್ತಾನದ 3 ನಗರಗಳ ಜೊತೆ ಬೇರೊಂದು ದೇಶ ಟೂರ್ನಿಗೆ ಆತಿಥ್ಯ ವಹಿಸಲಿದೆ. ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇಯಲ್ಲಿ ನಡೆಯುವ ನಿರೀಕ್ಷೆಯಿದೆ. ಭಾರತ ತಂಡ 'ಎ' ಗುಂಪಿನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ ಎನ್ನಲಾಗಿದೆ. 

ರವಿಚಂದ್ರನ್ ಅಶ್ವಿನ್‌ಗೆ ಖೇಲ್‌ ರತ್ನ ನೀಡಿ: ಕೇಂದ್ರಕ್ಕೆ ಕಾಂಗ್ರೆಸ್ ಸಂಸದ ಮನವಿ!

ಫೆ.20ರಂದು ಬಾಂಗ್ಲಾ ವಿರುದ್ಧ ಮೊದಲ ಪಂದ್ಯ ಆಡಲಿರುವ ಭಾರತ, ಬಳಿಕ ಮಾ.2ರಂದು ನ್ಯೂಜಿಲೆಂಡ್ ವಿರುದ್ಧ ಗುಂಪು ಹಂತದ ಕೊನೆ ಪಂದ್ಯದಲ್ಲಿ ಕಣಕ್ಕಿಳಿಯಲಿದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಟೂರ್ನಿಯ ಅಂತಿಮ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

Latest Videos
Follow Us:
Download App:
  • android
  • ios