ಎರಡೂ ಪಂದ್ಯಗಳಲ್ಲಿ ತಾರಾ ಆಟಗಾರರು ಕಣಕ್ಕಿಳಿಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ಪ್ರಮುಖವಾಗಿ ಮುಂಬೈ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ ಆಡಲಿದ್ದು, ಇತ್ತೀಚೆಗಷ್ಟೇ ಬಿಸಿಸಿಐ ಕೇಂದ್ರ ಗುತ್ತಿಗೆ ಕಳೆದುಕೊಂಡಿರುವ ಶ್ರೇಯಸ್‌ ತಮ್ಮ ಆಟದ ಮೂಲಕವೇ ಉತ್ತರಿಸಲು ಎದುರು ನೋಡುತ್ತಿದ್ದಾರೆ.

ಮುಂಬೈ/ನಾಗ್ಪುರ(ಫೆ.03): 2023-24ನೇ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯಗಳು ಶನಿವಾರದಿಂದ ಆರಂಭಗೊಂಡಿದ್ದು. 41 ಬಾರಿ ಚಾಂಪಿಯನ್‌ ಮುಂಬೈ ವಿರುದ್ದ ಟಾಸ್ ಗೆದ್ದ ತಮಿಳುನಾಡು ತಂಡವು ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಪಂದ್ಯಕ್ಕೆ ಮುಂಬೈ ಆತಿಥ್ಯ ವಹಿಸಿದೆ. ಮತ್ತೊಂದು ಸಮೆಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಟಾಸ್ ಗೆದ್ದ ವಿದರ್ಭ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಎರಡೂ ಪಂದ್ಯಗಳಲ್ಲಿ ತಾರಾ ಆಟಗಾರರು ಕಣಕ್ಕಿಳಿಯಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ಪ್ರಮುಖವಾಗಿ ಮುಂಬೈ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ ಆಡಲಿದ್ದು, ಇತ್ತೀಚೆಗಷ್ಟೇ ಬಿಸಿಸಿಐ ಕೇಂದ್ರ ಗುತ್ತಿಗೆ ಕಳೆದುಕೊಂಡಿರುವ ಶ್ರೇಯಸ್‌ ತಮ್ಮ ಆಟದ ಮೂಲಕವೇ ಉತ್ತರಿಸಲು ಎದುರು ನೋಡುತ್ತಿದ್ದಾರೆ. ಯುವ ಆಟಗಾರ ಮುಶೀರ್‌ ಖಾನ್‌ ಮೇಲೆ ಎಲ್ಲರ ಕಣ್ಣಿದೆ. ಇನ್ನು ಭಾರತ ತಂಡದಿಂದ ಹೊರಬಿದ್ದಿರುವ ವಾಷಿಂಗ್ಟನ್‌ ಸುಂದರ್‌ ತಮಿಳುನಾಡು ಪರ ಆಡಲಿದ್ದಾರೆ. ನಾಯಕ ಆರ್‌.ಸಾಯಿ ಕಿಶೋರ್‌ (47 ವಿಕೆಟ್‌) ಹಾಗೂ ಎಸ್‌.ಅಜಿತ್‌ ರಾಮ್‌ (41) ಮೇಲೆ ತಮಿಳುನಾಡು ದೊಡ್ಡ ನಿರೀಕ್ಷೆ ಇರಿಸಿದೆ.

Pro Kabaddi League ಪುಣೇರಿ ಪಲ್ಟಾನ್ ಮಡಿಲಿಗೆ ಚೊಚ್ಚಲ ಪ್ರೊ ಕಬಡ್ಡಿ ಕಿರೀಟ

ಮತ್ತೊಂದೆಡೆ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿದ ವಿದರ್ಭ ತನ್ನ ತಾರಾ ಆಟಗಾರರಾದ ಅಥರ್ವ ತೈಡೆ, ಆದಿತ್ಯ ಸರ್ವಟೆ, ಕರುಣ್‌ ನಾಯರ್‌ ಮೇಲೆ ವಿಶ್ವಾಸವಿರಿಸಿದರೆ, ಮಧ್ಯಪ್ರದೇಶ ವೆಂಕಟೇಶ್‌ ಅಯ್ಯರ್, ಹಿಮಾನ್ಶು ಮಂತ್ರಿ, ಆವೇಶ್‌ ಖಾನ್‌ರಂತಹ ಅನುಭವಿಗಳನ್ನು ನೆಚ್ಚಿಕೊಂಡಿದೆ.

6 ವರ್ಷ ಬಳಿಕ ಮಹಿಳಾ ಪ್ರಥಮ ದರ್ಜೆ ಟೂರ್ನಿ ಘೋಷಿಸಿದ ಬಿಸಿಸಿಐ

ನವದೆಹಲಿ: ಆರು ವರ್ಷಗಳ ಬಳಿಕ ದೇಶಿಯ ಮಹಿಳಾ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿ ಆಯೋಜಿಸುವುದಾಗಿ ಬಿಸಿಸಿಐ ಶುಕ್ರವಾರ ಘೋಷಿಸಿದೆ. ಮಾ.28ರಿಂದ ಪುಣೆಯಲ್ಲಿ ಹಿರಿಯರ ಅಂತರ್‌ ವಲಯ ಟೂರ್ನಿ ಆರಂಭವಾಗಲಿದ್ದು, ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಆತಿಥ್ಯ ವಹಿಸಲಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಹಾಗೂ ಈಶಾನ್ಯ ವಲಯ ಸೇರಿ ಒಟ್ಟು 6 ತಂಡಗಳು ಭಾಗಿಯಾಗಲಿವೆ.

ಪ್ರತಿ ತಂಡ 5 ಪಂದ್ಯಗಳನ್ನಾಡಲಿದ್ದು, ಈ ಬಾರಿ ಪಂದ್ಯ 3 ದಿನಗಳದ್ದಾಗಿರಲಿದೆ. 2018ರ ಅವೃತ್ತಿಯಲ್ಲಿ ಪಂದ್ಯ 2 ದಿನಕ್ಕೆ ಸೀಮಿತವಾಗಿತ್ತು. ಟೂರ್ನಿಯೂ 28ರಿಂದ ಪೂರ್ವ ವಲಯ ಮತ್ತು ಈಶಾನ್ಯ ವಲಯ, ಪಶ್ಚಿಮ ವಲಯ ಮತ್ತು ಮಧ್ಯ ವಲಯದ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯಗಳೊಂದಿಗೆ ಆರಂಭವಾಗಲಿದೆ. ಏ.3ರಂದು ಸೆಮಿಫೈನಲ್‌ ನಿಗದಿಯಾಗಿದೆ. ಫೈನಲ್ ಪಂದ್ಯ ಏ.9ರಿಂದ ಆರಂಭವಾಗಲಿದೆ.

ಅಯ್ಯರ್, ಕಿಶನ್ ಮಾತ್ರವಲ್ಲ; ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರಿವರು..!

ಬಿಸಿಸಿಐನ ಕ್ರಮ ಸ್ವಾಗತಾರ್ಹ. ರಾಷ್ಟ್ರೀಯ ತಂಡವು ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಮುಂದಿನ ಪೀಳಿಗೆ ಕ್ರಿಕೆಟಿಗರು ದೇಸೀಯ ಟೆಸ್ಟ್‌ ಕ್ರಿಕೆಟ್ ಆಡುವ ಅಗತ್ಯವಿದೆ ಎಂದು ಭಾರತ ಮಹಿಳಾ ತಂಡದ ಮಾಜಿ ವೇಗಿ ಅಮಿತಾ ಶರ್ಮಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವಲಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಜ್ಯ ಮಟ್ಟದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡಬೇಕು ಎಂದಿದ್ದಾರೆ.