ರಣಜಿ ಟ್ರೋಫಿ ಸೆಮಿಫೈನಲ್‌ಗಳು ಸೋಮವಾರದಿಂದ ಆರಂಭ. ಹಾಲಿ ಚಾಂಪಿಯನ್ ಮುಂಬೈ, ವಿದರ್ಭ ಎದುರಿಸಲಿದೆ. ಕೇರಳ ಮತ್ತು ಗುಜರಾತ್ ಇನ್ನೊಂದು ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಗಾಯಾಳು ಜೈಸ್ವಾಲ್ ಮುಂಬೈ ತಂಡದಿಂದ ಹೊರಗುಳಿದಿದ್ದಾರೆ. ಕೇರಳ ತಂಡ ಮೊದಲ ಫೈನಲ್ ಪ್ರವೇಶದ ಕನಸು ಕಾಣುತ್ತಿದೆ.
ನಾಗುರ: ಈ ಬಾರಿ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಸೋಮವಾರ ಆರಂಭಗೊಳ್ಳಲಿವೆ. ಹಾಲಿ ಚಾಂಪಿಯನ್ ಮುಂಬೈ ತಂಡಕ್ಕೆ ವಿದರ್ಭ ಸವಾಲು ಎದುರಾಗಲಿದ್ದು, ಮತ್ತೊಂದು ಸೆಮಿಫೈನಲ್‌ನಲ್ಲಿ ಕೇರಳ ಹಾಗೂ ಗುಜರಾತ್ ಪರಸ್ಪರ ಸೆಣಸಾಡಲಿವೆ.
ಮುಂಬೈ ಹಾಗೂ ವಿದರ್ಭ ಕಳೆದ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಮುಂಬೈ ಚಾಂಪಿಯನ್ ಆಗಿತ್ತು. ಅಜಿಂಕ್ಯ ರಹಾನೆ ನಾಯಕತ್ವದ ಬಲಿಷ್ಠ ಮುಂಬೈ ಮತ್ತೊಂದು ಗೆಲುವಿನ ಮೂಲಕ ಫೈನಲ್ ಗೇರಲು ಕಾಯುತ್ತಿದೆ. ಅತ್ತ ವಿದರ್ಭ, ಕಳೆದ ಬಾರಿ ಫೈನಲ್ ಸೋಲಿಗೆ ಸೇಡು ತೀರಿಸಿ ಕೊಳ್ಳಲು ಕಾಯುತ್ತಿದೆ. ಮುಂಬೈ 49ನೇ, ವಿದರ್ಭ 4ನೇ ಫೈನಲ್ ನಿರೀಕ್ಷೆಯಲ್ಲಿವೆ.
ಮಿನಿ ವಿಶ್ವಕಪ್ ಸಮರ; ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ! ಏನಿದರ ವಿಶೇಷ?
ಮುಂಬೈ ತಂಡದಲ್ಲಿ ನಾಯಕ ಅಜಿಂಕ್ಯ ರಹಾನೆ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್ ಅವರಂತಹ ಪ್ರಬಲ ಆಟಗಾರರ ದಂಡಿನಿಂದ ಕೂಡಿದ್ದು ಮತ್ತೊಮ್ಮೆ ಫೈನಲ್‌ಗೇರುವ ಕನಸು ಕಾಣುತ್ತಿದೆ. ಇನ್ನೊಂದೆಡೆ ರೆಡ್ ಹಾಟ್ ಫಾರ್ಮ್‌ನಲ್ಲಿರುವ ವಿದರ್ಭ ತಂಡದಲ್ಲಿರುವ ಕರುಣ್ ನಾಯರ್ ಕಟ್ಟಿಹಾಕಬೇಕಾದ ಸವಾಲು ಮುಂಬೈ ಬೌಲರ್‌ಗಳ ಮುಂದಿದೆ.
ರಣಜಿ: ಗಾಯಾಳು ಜೈಸ್ವಾಲ್ ಮುಂಬೈ ತಂಡಕ್ಕಿಲ್ಲ
ಮುಂಬೈನ ಸೆಮೀಸ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಗಾಯಗೊಂಡಿದ್ದಾರೆ. ಅವರು ತಂಡದಿಂದ ಹೊರಬಿದ್ದಿದ್ದು, ಬೆಂಗಳೂರಿನ ಎನ್ ಸಿಎಗೆ ಆಗಮಿಸಿ ಪುನಶ್ವೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೊದಲ ಫೈನಲ್ ಕನಸು: ಅಹಮದಾಬಾದ್ ನಲ್ಲಿ ನಡೆಯಲಿರುವ ಮತ್ತೊಂದು ಸೆಮೀಸ್ ನಲ್ಲಿ ಗುಜರಾತ್‌ನ ಸೋಲಿಸಿ ಮೊದಲ ಬಾರಿ ಫೈನಲ್‌ಗೇರಲು ಕೇರಳ ಕಾಯುತ್ತಿದೆ. ಮತ್ತೊಂದೆಡೆ ಗುಜರಾತ್ 2016-17ರ ಬಳಿಕ ಮತ್ತೆ ಫೈನಲ್ ನಿರೀಕ್ಷೆಯಲ್ಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 8 ಸೈನ್ಯ ಸಜ್ಜು; ಟೀಂ ಇಂಡಿಯಾ ವೀಕ್ನೆಸ್ ಏನು?
ಕೇರಳ ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದೃಷ್ಟ ಕೈಹಿಡಿದಿದ್ದರಿಂದಾಗಿ ಪವಾಡ ಸದೃಶ ರೂಪದಲ್ಲಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿತ್ತು. ಜಮ್ಮು ಮತ್ತು ಕಾಶ್ಮೀರ ತಂಡದ ಎದುರು ಕ್ವಾರ್ಟರ್ ಫೈನಲ್‌ನಲ್ಲಿ ಕೇರಳ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 1 ರನ್ ಮುನ್ನಡೆ ಸಾಧಿಸಿತ್ತು. ಆ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಕಾರಣದಿಂದಾಗಿ ಕೇರಳ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಜಮ್ಮು 280 ರನ್ ಗಳಿಸಿದ್ದರೆ, ವೀರೋಚಿತ ಹೋರಾಟ ಪ್ರದರ್ಶಿಸಿದ ಕೇರಳ 281 ರನ್ ಗಳಿಸಿ 1 ರನ್ ಮುನ್ನಡೆ ಪಡೆದಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಜಮ್ಮು 9 ವಿಕೆಟ್‌ಗೆ 399 ರನ್ ಕಲೆಹಾಕಿ, ಕೇರಳಕ್ಕೆ 399 ರನ್ ಗುರಿ ನೀಡಿತು. 4ನೇ ದಿನದದಂತ್ಯಕ್ಕೆ 2 ವಿಕೆಟ್‌ಗೆ 100 ರನ್ ಗಳಿಸಿದ್ದ ಕೇರಳ, ಕೊನೆ ದಿನವಾದ ಬುಧವಾರ ಉತ್ತಮ ಹೋರಾಟ ನಡೆಸಿ 6 ವಿಕೆಟ್‌ಗೆ 295 ರನ್ ಗಳಿಸಿತು.
