Asianet Suvarna News Asianet Suvarna News

Ranji Trophy: ಮಯಾಂಕ್‌ ಅಗರ್‌ವಾಲ್ ಶತಕ, ಬೃಹತ್ ಮೊತ್ತದತ್ತ ಕರ್ನಾಟಕ

* ರಣಜಿ ಟ್ರೋಫಿ ಟೂರ್ನಿಯಲ್ಲಿ ಛತ್ತೀಸ್‌ಗಢ ಎದುರು ಕರ್ನಾಟಕ ತಿರುಗೇಟು
* ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದ ನಾಯಕ ಮಯಾಂಕ್‌ ಅಗರ್‌ವಾಲ್
* ಕೇವಲ ಒಂದು ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿದ ಕರ್ನಾಟಕ ತಂಡ

Ranji Trophy Mayank Agarwal Century helps Karnataka Fightback against Chhattisgarh in Bengaluru kvn
Author
First Published Jan 5, 2023, 9:55 AM IST

ಬೆಂಗಳೂರು(ಜ.05): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಛತ್ತೀಸ್‌ಗಢಕ್ಕೆ ಆತಿಥೇಯ ಕರ್ನಾಟಕ ದಿಟ್ಟಉತ್ತರ ನೀಡಿದ್ದು, ಬೃಹತ್‌ ಮೊತ್ತದತ್ತ ದಾಪುಗಾಲಿಟ್ಟಿದೆ. 2ನೇ ದಿನದಂತ್ಯಕ್ಕೆ ರಾಜ್ಯ ತಂಡ ಮಯಾಂಕ್‌ ಅಗರ್‌ವಾಲ್‌ ಶತಕದ ನೆರವಿನಿಂದ 1 ವಿಕೆಟ್‌ ಕಳೆದುಕೊಂಡು 202 ರನ್‌ ಕಲೆ ಹಾಕಿದ್ದು, 109 ರನ್‌ ಹಿನ್ನಡೆಯಲ್ಲಿದೆ.

ಛತ್ತೀಸ್‌ಗಢದ 311 ರನ್‌ಗೆ ಉತ್ತರವಾಗಿ ಇನ್ನಿಂಗ್‌್ಸ ಆರಂಭಿಸಿದ ಕರ್ನಾಟಕಕ್ಕೆ ನಾಯಕ ಮಯಾಂಕ್‌ ಅಗರ್‌ವಾಲ್‌ ಹಾಗೂ ಆರ್‌.ಸಮಥ್‌ರ್‍ ಭರ್ಜರಿ ಜೊತೆಯಾಟದ ಮೂಲಕ ನೆರವಾದರು. ಛತ್ತೀಸ್‌ಗಢ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 163 ರನ್‌ ಸೇರಿಸಿತು. 81 ರನ್‌ ಗಳಿಸಿ ಈ ಆವೃತ್ತಿಯ ಸತತ 4ನೇ ಶತಕದತ್ತ ಮುನ್ನುಗ್ಗುತ್ತಿದ್ದ ಆರ್‌.ಸಮರ್ಥ್ ಅಜಯ್‌ ಮಂಡಲ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ 191 ಎಸೆತಗಳಲ್ಲಿ 102 ರನ್‌ ಸಿಡಿಸಿರುವ ಮಯಾಂಕ್‌ ಹಾಗೂ ವಿಶಾಲ್‌(15) ಕ್ರೀಸ್‌ನಲ್ಲಿದ್ದಾರೆ.

ಕಾವೇರಪ್ಪ ಮಾರಕ ದಾಳಿ

ಇದಕ್ಕೂ ಮೊದಲು ಮೊದಲ ದಿನ 5 ವಿಕೆಟ್‌ಗೆ 267 ರನ್‌ ಗಳಿಸಿದ್ದ ಛತ್ತೀಸ್‌ಗಢ ಬುಧವಾರ 311ಕ್ಕೆ ಆಲೌಟ್‌ ಆಯಿತು. 118 ರನ್‌ ಸಿಡಿಸಿ ಕ್ರೀಸ್‌ನಲ್ಲಿದ್ದ ಆಶುತೋಷ್‌ 135ಕ್ಕೆ ಕೌಶಿಕ್‌ಗೆ ವಿಕೆಟ್‌ ಒಪ್ಪಿಸಿದರು. ರಾಜ್ಯದ ಪರ ವಿದ್ವತ್‌ ಕಾವೇರಪ್ಪ 5 ವಿಕೆಟ್‌ ಗೊಂಚಲು ಪಡೆದರೆ, ಕೌಶಿಕ್‌ 4 ವಿಕೆಟ್‌ ಕಬಳಿಸಿದರು.

ಸ್ಕೋರ್‌: ಛತ್ತೀಸ್‌ಗಢ 311/10 (ಆಶುತೋಷ್‌ 135, ಕಾವೇರಪ್ಪ 5-67), ಕರ್ನಾಟಕ 202/1 (ಮಯಾಂಕ್‌ 102*, ಸಮಥ್‌ರ್‍ 81, ಅಜಯ್‌ 1-61)

ವೈಡ್‌ ನೀಡದಕ್ಕೆ ಅಂಪೈರ್‌ಗೆ ನಿಂದಿಸಿದ ದೀಪಕ್‌ ಹೂಡಾ?

ಮುಂಬೈ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೈಡ್‌ ನೀಡದಕ್ಕೆ ಅಂಪೈರ್‌ಗೆ ಭಾರತದ ತಾರಾ ಬ್ಯಾಟರ್‌ ದೀಪಕ್‌ ಹೂಡಾ ನಿಂದಿಸಿದ್ದಾರೆ ಎಂದು ತಿಳಿದುಬಂದಿದ್ದು, ಇದರ ವಿಡಿಯೋಗಳು ವೈರಲ್‌ ಆಗಿದೆ. ಪಂದ್ಯದ 18ನೇ ಓವರ್‌ ವೇಳೆ ಕಾಸುನ್‌ ರಜಿತಾ ಎಸೆದ ಬಾಲನ್ನು ಕ್ರೀಸ್‌ನಲ್ಲಿದ್ದ ಹೂಡಾ ವೈಡ್‌ ಎಂದು ಭಾವಿಸಿ ಬಿಟ್ಟಿದ್ದರು. ಆದರೆ ಅಂಪೈರ್‌ ವೈಡ್‌ ನೀಡಿರಲಿಲ್ಲ. ಇದರಿಂದ ಕೆರಳಿದ ಹೂಡಾ ಅಂಪೈರ್‌ಗೆ ಕೆಟ್ಟಶಬ್ದಗಳಿಂದ ಬೈದಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿವೆ.

Ranji Trophy: ಕರ್ನಾಟಕ-ಛತ್ತೀಸ್‌ಗಢ ಮೊದಲ ದಿನ ಸಮಬಲದ ಹೋರಾಟ

ಆಸೀಸ್‌ ಉತ್ತಮ ಆರಂಭ

ಸಿಡ್ನಿ: ಮಳೆ ಹಾಗೂ ಮಂದ ಬೆಳಕಿನ ಕಾರಣದಿಂದ ಆಸ್ಪ್ರೇಲಿಯಾ ಹಾಗೂ ದ.ಆಫ್ರಿಕಾ ನಡುವಿನ 3ನೇ ಟೆಸ್ಟ್‌ ಪಂದ್ಯ ಮೊದಲ ದಿನ ಬೇಗನೇ ಮುಕ್ತಾಯಗೊಂಡಿದ್ದು, ಆಸೀಸ್‌ ಉತ್ತಮ ಆರಂಭ ಪಡೆದಿದೆ. ದಿನದಂತ್ಯಕ್ಕೆ ಆತಿಥೇಯ ಆಸೀಸ್‌ 2 ವಿಕೆಟ್‌ಗೆ 147 ರನ್‌ ಕಲೆ ಹಾಕಿದೆ. ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಆಸೀಸ್‌ ಆರಂಭಿಕ ಕುಸಿತದ ಹೊರತಾಗಿಯೂ ಉತ್ತಮ ಆಟವಾಡಿತು. ವಾರ್ನರ್‌ 10 ರನ್‌ಗೆ ಔಟಾದರೆ, ಮಾರ್ನಸ್‌ ಲ್ಯಾಬುಶೇನ್‌ 79 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. 

ಶಕೀಲ್‌ ಚೊಚ್ಚಲ ಶತಕ: ಕಿವೀಸ್‌ಗೆ ಪಾಕ್‌ ತಿರುಗೇಟು

ಕರಾಚಿ: ಸಾದ್‌ ಶಕೀಲ್‌ ಚೊಚ್ಚಲ ಶತಕದ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಿರುಗೇಟು ನೀಡಿದೆ. 3ನೇ ದಿನದಂತ್ಯಕ್ಕೆ ಪಾಕ್‌ 9 ವಿಕೆಟ್‌ಗೆ 407 ರನ್‌ ಗಳಿಸಿದ್ದು, 42 ರನ್‌ ಹಿನ್ನಡೆಯಲ್ಲಿದೆ. ಕಿವೀಸ್‌ನ 449 ರನ್‌ಗೆ ಉತ್ತರವಾಗಿ 2ನೇ ದಿನ 3 ವಿಕೆಟ್‌ಗೆ 154 ರನ್‌ ಗಳಿಸಿದ್ದ ಪಾಕ್‌ಗೆ ಬುಧವಾರ ಶಕೀಲ್‌-ಸರ್ಫರಾಜ್‌ ಅಹ್ಮದ್‌ ಆಸರೆಯಾದರು. ಈ ಜೋಡಿ 5ನೇ ವಿಕೆಟ್‌ಗೆ 150 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. ಸರ್ಫರಾಜ್‌ 78ಕ್ಕೆ ಔಟಾದ ಬಳಿಕ ಪಾಕ್‌ ಮತ್ತೆ ಕುಸಿತ ಕಂಡಿತು. ಸಲ್ಮಾನ್‌ 41 ರನ್‌ಗೆ ವಿಕೆಟ್‌ ಒಪ್ಪಿಸಿದರು. ಶಕೀಲ್‌ 124 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಇನ್ನಿಂಗ್‌್ಸ ಹಿನ್ನಡೆ ತಪ್ಪಿಸಲು ಹೋರಾಡುತ್ತಿದ್ದಾರೆ.

Follow Us:
Download App:
  • android
  • ios