Asianet Suvarna News Asianet Suvarna News

ರಣಜಿ ಟ್ರೋಫಿ : ಸರ್ವೀಸಸ್ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

ರಣಜಿ ಟ್ರೋಫಿ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಪ್ರತಿ ಪಂದ್ಯಗಳು ಕರ್ನಾಟಕದ ಪಾಲಿಗೆ ಪ್ರಮುಖವಾಗುತ್ತಿದೆ. ೇ ಸರ್ವೀಸಸ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಆಯ್ಕೆಯಾದ ಆಟಗಾರರ ವಿವರ ಇಲ್ಲಿದೆ. 

Ranji trophy Ksca announces Karnataka squad for services match
Author
Bengaluru, First Published Jan 23, 2020, 10:16 AM IST
  • Facebook
  • Twitter
  • Whatsapp

ಬೆಂಗಳೂರು(ಜ.23): ಜ.27ರಿಂದ ದೆಹಲಿಯಲ್ಲಿ ನಡೆಯಲಿರುವ ಸರ್ವೀಸಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಬುಧವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಯಿತು. ಮದುವೆ ಕಾರಣದಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕರುಣ್ ನಾಯರ್ ಇದೀಗ ಮತ್ತೆ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಸರ್ವೀಸಸ್ ವಿರುದ್ದದ ಪಂದ್ಯದಲ್ಲಿ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. 

ಇದನ್ನೂ ಓದಿ: ರಣಜಿ ಟ್ರೋಫಿ: ಸಮರ್ಥ ಹೋರಾಟಕ್ಕೆ ಒಲಿದ ಡ್ರಾ!...

ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಆಲ್ರೌಂಡರ್‌ ಕೆ.ಗೌತಮ್‌ ಪಂದ್ಯದ ವೇಳೆಗೆ ಫಿಟ್‌ ಆದರೆ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇಲ್ಲವಾದಲ್ಲಿ ಜೆ.ಸುಚಿತ್‌ ತಂಡದೊಂದಿಗೆ ತೆರಳಲಿದ್ದಾರೆ ಎಂದು ಕೆಎಸ್‌ಸಿಎ ತಿಳಿಸಿದೆ. ಕರ್ನಾಟಕ ತಂಡ ಈ ಕೆಳಗಿನಂತಿದೆ.

ಕರ್ನಾಟಕ ತಂಡ: 
ಕರುಣ್‌ ನಾಯರ್‌ (ನಾಯಕ), ಶ್ರೇಯಸ್‌ ಗೋಪಾಲ್‌, ದೇವದತ್‌ ಪಡಿಕ್ಕಲ್‌, ಪವನ್‌ ದೇಶಪಾಂಡೆ, ರೋಹನ್‌ ಕದಂ, ಕೆ.ವಿ.ಸಿದ್ಧಾಥ್‌ರ್‍, ಆರ್‌.ಸಮಥ್‌ರ್‍, ಅಭಿಮನ್ಯು ಮಿಥುನ್‌, ಶರತ್‌ ಬಿ.ಆರ್‌, ಶರತ್‌ ಶ್ರೀನಿವಾಸ್‌, ಪ್ರವೀಣ್‌ ದುಬೆ, ಪ್ರತೀಕ್‌ ಜೈನ್‌, ವಿ.ಕೌಶಿಕ್‌, ರೋನಿತ್‌ ಮೋರೆ.

Follow Us:
Download App:
  • android
  • ios