Asianet Suvarna News Asianet Suvarna News

ರಣಜಿ ಟ್ರೋಫಿ: ಸಮರ್ಥ ಹೋರಾಟಕ್ಕೆ ಒಲಿದ ಡ್ರಾ!

ಕರ್ನಾಟಕ-ಸೌರಾಷ್ಟ್ರ ನಡುವಿನ ರಣಜಿ ಪಂದ್ಯ ಡ್ರಾನೊಂದಿಗೆ ಅಂತ್ಯವಾಗಿದೆ. ರವಿಕುಮಾರ್ ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್ ಸಮಯೋಚಿತ ಅರ್ಧಶತಕದ ನೆರವಿನಿಂದ ಕರ್ನಾಟಕ ಸೋಲಿನಿಂದ ಪಾರಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Ranji Trophy  Karnataka vs Saurashtra match ends with Draw
Author
Rajkot, First Published Jan 15, 2020, 11:20 AM IST

ರಾಜ್‌ಕೋಟ್‌(ಜ.15): ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್‌ ಸೋಲಿನ ದವಡೆಯಿಂದ ಕರ್ನಾಟಕ ಪಾರಾಗಿದೆ. ಇದರೊಂದಿಗೆ 2019-20ರ ರಣಜಿ ಟ್ರೋಫಿಯಲ್ಲಿ ಅಜೇಯವಾಗಿ ಉಳಿದಿದೆ. ಆದರೆ, ತಂಡ ನಾಕೌಟ್‌ ಹಂತಕ್ಕೆ ಪ್ರವೇಶಿಸಬೇಕಿದ್ದರೆ, ಇನ್ನುಳಿದಿರುವ 3 ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 410 ರನ್‌ಗಳ ಹಿನ್ನಡೆ ಅನುಭವಿಸಿದ್ದ ಕರ್ನಾಟಕದ ಮೇಲೆ ಫಾಲೋ ಆನ್‌ ಹೇರಿದ ಸೌರಾಷ್ಟ್ರ, 2ನೇ ಇನ್ನಿಂಗ್ಸ್‌ನಲ್ಲಿ ಎದುರಾಳಿಯನ್ನು ಆಲೌಟ್‌ ಮಾಡಲು ಸಾಧ್ಯವಾಗಲಿಲ್ಲ. 3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 30 ರನ್‌ ಗಳಿಸಿದ್ದ ಕರ್ನಾಟಕ, 4ನೇ ದಿನ ಭರ್ಜರಿ ಹೋರಾಟ ನಡೆಸಿತು. 4 ವಿಕೆಟ್‌ಗೆ 220 ರನ್‌ ಗಳಿಸಿ, ಡ್ರಾ ಸಾಧಿಸಿತು.

ಈ ಋುತುವಿನಲ್ಲಿ ರಾಜ್ಯ ತಂಡಕ್ಕಿದು 3ನೇ ಡ್ರಾ ಆಗಿದ್ದು, 5 ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ 17 ಅಂಕ ಕಲೆಹಾಕಿದೆ. ಎಲೈಟ್‌ ‘ಎ’ ಹಾಗೂ ‘ಬಿ’ ತಂಡಗಳ ಅಂಕಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನಕ್ಕೆ ಕುಸಿದಿದೆ.

ರಣಜಿ ಟ್ರೋಫಿ: ಡ್ರಾ ಮಾಡಿಕೊಳ್ಳಲು ಕರ್ನಾಟಕ ಹೋರಾಟ

ಎಚ್ಚರಿಕೆಯ ಆರಂಭ: 4ನೇ ದಿನವಾದ ಮಂಗಳವಾರ, ಕರ್ನಾಟಕದ ಆರಂಭಿಕರಾದ ಆರ್‌.ಸಮಥ್‌ರ್‍ ಹಾಗೂ ರೋಹನ್‌ ಕದಂ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದರು. ಇವರಿಬ್ಬರು ಇನ್ನಿಂಗ್ಸ್‌ನ ಮೊದಲ 43 ಓವರ್‌ ಬ್ಯಾಟ್‌ ಮಾಡಿದರು. 132 ಎಸೆತಗಳಲ್ಲಿ 42 ರನ್‌ ಗಳಿಸಿ ಕದಂ ಔಟಾದರು.

ಉದರ ಬೇನೆಯಿಂದಾಗಿ ಇನ್ನಿಂಗ್ಸ್‌ ಆರಂಭಿಸಲು ಬರದ ದೇವದತ್‌ ಪಡಿಕ್ಕಲ್‌, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರು. ಸಮಥ್‌ರ್‍ ಜತೆ ತಂಡದ ಮೊತ್ತವನ್ನು 100 ರನ್‌ ಗಡಿ ದಾಟಿಸಿದ ದೇವದತ್‌, ಸೌರಾಷ್ಟ್ರ ಬೌಲಿಂಗ್‌ ದಾಳಿಗೆ ತಕ್ಕ ಉತ್ತರ ನೀಡಿದರು. 159 ಎಸೆತಗಳನ್ನು ಎದುರಿಸಿದ ಸಮಥ್‌ರ್‍, 74 ರನ್‌ ಗಳಿಸಿ ಔಟಾದರು. ಕೆ.ವಿ.ಸಿದ್ಧಾಥ್‌ರ್‍ (19), ಪವನ್‌ ದೇಶಪಾಂಡೆ (12) ಹೆಚ್ಚು ರನ್‌ ಕೊಡುಗೆ ನೀಡದಿದ್ದರೂ, ದೇವದತ್‌ಗೆ ಉತ್ತಮ ಬೆಂಬಲ ನೀಡಿದರು. 89 ಓವರ್‌ಗಳ ಆಟದ ಬಳಿಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಉಭಯ ನಾಯಕರು ನಿರ್ಧರಿಸಿದರು. 133 ಎಸೆತಗಳಲ್ಲಿ 53 ರನ್‌ ಗಳಿಸಿದ ದೇವದತ್‌ ಅಜೇಯರಾಗಿ ಉಳಿದರು.

5ನೇ ಸುತ್ತಿನಲ್ಲಿ ಕರ್ನಾಟಕಕ್ಕೆ ಪಂದ್ಯವಿಲ್ಲ. 6ನೇ ಸುತ್ತಿನ ಪಂದ್ಯವನ್ನು ಜ.27ರಿಂದ ರೈಲ್ವೇಸ್‌ ವಿರುದ್ಧ ನವದೆಹಲಿಯಲ್ಲಿ ಆಡಲಿರುವ ಕರ್ನಾಟಕ, ಆ ಬಳಿಕ ಮಧ್ಯಪ್ರದೇಶ ವಿರುದ್ಧ ಶಿವಮೊಗ್ಗ, ಬರೋಡಾ ವಿರುದ್ಧ ಬೆಂಗಳೂರಲ್ಲಿ ಆಡಲಿದೆ.

ಸ್ಕೋರ್‌: ಸೌರಾಷ್ಟ್ರ 581/7 ಡಿ.,

ಕರ್ನಾಟಕ 171 ಹಾಗೂ 220/4 (ಸಮರ್ಥ್ 74, ದೇವದರತ್‌ 53, ಜಡೇಜಾ 2-97)

Follow Us:
Download App:
  • android
  • ios