Asianet Suvarna News Asianet Suvarna News

ರಣ​ಜಿ ಟೂರ್ನಿ: ‘ಬಿ’ ಗುಂಪಿ​ನಲ್ಲಿ ಕರ್ನಾ​ಟ​ಕಕ್ಕೆ ಸ್ಥಾನ

2019-20ನೇ ಸಾಲಿನ ರಣಜಿ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಕರ್ನಾಟಕ ’ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ತವರಿನಲ್ಲಿ 4 ಹಾಗೂ ತವರಿನಾಚೆ 4 ಪಂದ್ಯಗಳನ್ನಾಡಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Ranji Trophy Karntaka Team in B Group
Author
Bengaluru, First Published Oct 22, 2019, 4:32 PM IST

ಬೆಂಗ​ಳೂ​ರು[ಅ.22]: ವಿಜಯ್‌ ಹಜಾರೆ ಟೂರ್ನಿ ಅಂತಿಮ ಘಟ್ಟ ತಲು​ಪಿದ್ದು, ಈ ಪಂದ್ಯಾ​ವಳಿ ಮುಕ್ತಾ​ಯ​ಗೊ​ಳ್ಳು​ತ್ತಿ​ದ್ದಂತೆ 2019-20ರ ಸಾಲಿನ ರಣಜಿ ಟ್ರೋಫಿ ಆರಂಭ​ಗೊ​ಳ್ಳ​ಲಿದೆ.  ಸೋಮ​ವಾರ ಟೂರ್ನಿಯ ವೇಳಾ​ಪಟ್ಟಿ ಪ್ರಕ​ಟ​ಗೊಂಡಿತು. 

ವಿಜಯ್‌ ಹಜಾರೆ ಸೆಮೀ​ಸ್‌: ಕರ್ನಾ​ಟ​ಕ-ಛತ್ತೀಸ್‌ಗಢ ಫೈಟ್

ಕರ್ನಾ​ಟಕ ‘ಬಿ’ ಗುಂಪಿ​ನಲ್ಲಿ ಸ್ಥಾನ ಪಡೆ​ದಿದ್ದು, ತಂಡಕ್ಕೆ ಕಠಿಣ ಸವಾಲು ಎದು​ರಾ​ಗ​ಲಿದೆ. ಡಿ.9ರಿಂದ ತಮಿ​ಳು​ನಾಡು ವಿರುದ್ಧ ಕರ್ನಾ​ಟಕ ತನ್ನ ಮೊದಲ ಪಂದ್ಯ​ವನ್ನು ಆಡ​ಲಿದೆ. ಲೀಗ್‌ ಹಂತ​ದಲ್ಲಿ ತವ​ರಿ​ನಲ್ಲಿ 4, ತವ​ರಿ​ನಾಚೆ 4 ಪಂದ್ಯ​ಗ​ಳನ್ನು ಆಡ​ಲಿದೆ. ಕಳೆದ ಋುತು​ವಿ​ನಲ್ಲಿ ಕರ್ನಾ​ಟಕ, ಸೆಮಿ​ಫೈ​ನಲ್‌ನಲ್ಲಿ ಸೌರಾಷ್ಟ್ರ ವಿರುದ್ಧ ಸೋಲುಂಡಿತ್ತು. 

10 ಕೋಟಿ ಜೇಬಿಗಿಳಿಸಿ ಹಾಯಾಗಿ ನಿದ್ದೆ; ಮತ್ತೆ ಟ್ರೋಲ್ ಆದ ಕೋಚ್ ಶಾಸ್ತ್ರಿ!

ಕರ್ನಾಟಕ ತಂಡವು ತವರಿನಾಚೆ ತಮಿಳುನಾಡು, ಮುಂಬೈ, ರಾಜ್’ಕೋಟ್ ಹಾಗೂ ವಡೋದರದಲ್ಲಿ ನಾಲ್ಕು ಪಂದ್ಯಗಳನ್ನಾಡಿದರೆ, ತವರಿನಲ್ಲಿ ಉತ್ತರಪ್ರದೇಶ, ಹಿಮಾಚಲ ಪ್ರದೇಶ, ರೈಲ್ವೇಸ್ ಹಾಗೂ ಮಧ್ಯ ಪ್ರದೇಶ ವಿರುದ್ಧ ಸೆಣಸಲಿದೆ. 

ಕರ್ನಾ​ಟ​ಕದ ರಣಜಿ ವೇಳಾ​ಪ​ಟ್ಟಿ

ದಿನಾಂ​ಕ ​- ಎ​ದು​ರಾ​ಳಿ- ​ ಸ್ಥಳ

ಡಿ.9-12- ತಮಿ​ಳು​ನಾ​ಡು- ​ಚೆನ್ನೈ

ಡಿ.17-20- ಉತ್ತರ ಪ್ರದೇ​ಶ- ​ತ​ವ​ರಿನ ಪಂದ್ಯ

ಡಿ.25-28 ಹಿಮಾ​ಚಲ ಪ್ರದೇ​​ಶ- ​ತ​ವ​ರಿನ ಪಂದ್ಯ

ಜ.3-6- ಮುಂಬೈ- ಮುಂಬೈ

ಜ.11-14- ಸೌರಾಷ್ಟ್ರ- ರಾಜ್‌ಕೋಟ್‌

ಜ.27-30- ರೈಲ್ವೇ​ಸ್‌- ​ತ​ವ​ರಿನ ಪಂದ್ಯ

ಫೆ.4-7 ಮಧ್ಯ​ಪ್ರ​ದೇ​ಶ- ​ತ​ವ​ರಿನ ಪಂದ್ಯ

ಫೆ.12-15 ಬರೋ​ಡಾ​- ವ​ಡೋ​ದರ

Follow Us:
Download App:
  • android
  • ios