10 ಕೋಟಿ ಜೇಬಿಗಿಳಿಸಿ ಹಾಯಾಗಿ ನಿದ್ದೆ; ಮತ್ತೆ ಟ್ರೋಲ್ ಆದ ಕೋಚ್ ಶಾಸ್ತ್ರಿ!
ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವಾರ್ಷಿಕ ಸ್ಯಾಲರಿ 10 ಕೋಟಿ ರೂಪಾಯಿ. ಆದರೆ ಶಾಸ್ತ್ರಿ ಕೆಲಸ ನಿದ್ದೆ ಮಾಡುವುದು. ಇದಕ್ಕಿಂತ ಇನ್ನೇನು ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಶಾಸ್ತ್ರಿ ಮತ್ತೆ ಟ್ರೋಲ್ ಆಗಲು ಕಾರಣ ಇಲ್ಲಿದೆ.
ರಾಂಚಿ(ಅ.22): ರಾಂಚಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ದ್ವಿಶತಕ, ಅಜಿಂಕ್ಯ ರಹಾನೆ ಶತಕ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನಕ್ಕೆ ಸೌತ್ ಆಫ್ರಿಕಾ ನಾಲ್ಕೇ ದಿನಕ್ಕೆ ಸೋಲೋಪ್ಪಿಕೊಂಡಿದೆ. ಇಷ್ಟೇ ಅಲ್ಲ ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಕೋಚ್ ರವಿ ಶಾಸ್ತ್ರಿ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ: ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಗಾದಿ; ಟ್ರೋಲ್ ಆದ ಕೋಚ್ ಶಾಸ್ತ್ರಿ!
ಪಂದ್ಯ ಗೆದ್ದರೂ, ಸೋತರೂ ಮೊದಲು ಟ್ರೋಲ್ ಆಗುವುದು ಶಾಸ್ತ್ರಿ. ಇದಕ್ಕೆ ರಾಂಚಿ ಟೆಸ್ಟ್ ಪಂದ್ಯ ಕೂಡ ಹೊರತಾಗಿರಲಿಲ್ಲ. ರಾಂಚಿ ಪಂದ್ಯದ ನಡುವೆ ರವಿ ಶಾಸ್ತ್ರಿ ಒಂದು ಕ್ಷಣ ನಿದ್ದೆಗೆ ಜಾರಿದ್ದಾರೆ. ನೇರ ಪ್ರಸಾದ ಕ್ಯಾಮರ ಶಾಸ್ತ್ರಿ ನಿದ್ದೆಯನ್ನೇ ಫೋಕಸ್ ಮಾಡಿದೆ. ಮರುಕ್ಷಣದಲ್ಲೇ ಶಾಸ್ತ್ರಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
"
ಇದನ್ನೂ ಓದಿ: ನವರಾತ್ರಿಗೆ ಕೋಚ್ ಶಾಸ್ತ್ರಿ ವಿಶ್; ಮತ್ತೆ ಕಾಲೆಳೆದ ಫ್ಯಾನ್ಸ್!
ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿತ್ತು. ಗೆಲುವಿಗೆ ಕೆಲವೇ ಹೆಜ್ಜೆಗಳು ಮಾತ್ರ ಬಾಕಿ ಇತ್ತು. ಹೀಗಾಗಿ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾ ರಿಲಾಕ್ಸ್ ಮೂಡ್‌ನಲ್ಲಿತ್ತು. ಇತ್ತ ಸ್ವಲ್ಪ ಹೆಚ್ಚೇ ರಿಲ್ಯಾಕ್ಸ್ ಆಗಿದ್ದ ಶಾಸ್ತ್ರಿ ನಿದ್ದೆಗೆ ಜಾರಿದ್ದರು. ಸರಣಿ ಗೆದ್ದ ಭಾರತದ ಸಂಭ್ರಮಾಚರಣೆ ಮುಗಿದರೂ, ಶಾಸ್ತ್ರಿ ಟ್ರೋಲ್ ನಿಲ್ಲುತ್ತಿಲ್ಲ.
ಅ.22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ