ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಭರ್ಜರಿ ಪ್ರದರ್ಶನ ಜಾರ್ಖಂಡ್ ಎದುರು 9 ವಿಕೆಟ್ ಜಯ ದಾಖಲಿಸಿದ ಮಯಾಂಕ್‌ ಅಗರ್‌ವಾಲ್ ಪಡೆ'ಸಿ' ಗುಂಪಿನಿಂದ ಅಗ್ರಸ್ಥಾನಿಯಾಗಿಯೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

ಜಮ್ಶೆಡ್‌ಪುರ(ಜ.27): ರಣಜಿ ಟ್ರೋಫಿ ಗುಂಪು ಹಂತದ ಕೊನೆ ಪಂದ್ಯದಲ್ಲಿ ಜಾರ್ಖಂಡ್‌ ವಿರುದ್ಧ 9 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ, ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಗೆಲುವಿಗೆ 66 ರನ್‌ ಗುರಿ ಪಡೆದಿದ್ದ ರಾಜ್ಯ ತಂಡ 1 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಇದರೊಂದಿಗೆ ಈ ಋುತುವಿನಲ್ಲಿ 4ನೇ ಗೆಲುವು ದಾಖಲಿಸಿ ಒಟ್ಟು 35 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಜಾರ್ಖಂಡ್‌ 23 ಅಂಕಗಳೊಂದಿಗೆ ಸದ್ಯ 2ನೇ ಸ್ಥಾನದಲ್ಲಿದ್ದು, ಕೇರಳ, ರಾಜಸ್ಥಾನ ಹಾಗೂ ಗೋವಾ ತಂಡಗಳು ಸೋತರೆ ಮಾತ್ರ ಕ್ವಾರ್ಟರ್‌ ಅವಕಾಶ ಸಿಗಲಿದೆ.

136 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ರಾಜ್ಯ ತಂಡ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 85 ರನ್‌ ಗಳಿಸಿತ್ತು. ಕೊನೆ ದಿನವಾದ ಗುರುವಾರ ದೊಡ್ಡ ಮೊತ್ತ ಗಳಿಸುವ ನಿರೀಕ್ಷೆಯಲ್ಲಿದ್ದರೂ ಅದಕ್ಕೆ ರಾಜ್ಯದ ಬೌಲರ್‌ಗಳು ಅವಕಾಶ ನೀಡಲಿಲ್ಲ. ತಂಡ 201 ರನ್‌ಗೆ ಆಲೌಟಾಯಿತು. ಸುಪ್ರಿಯೋ ಚಕ್ರವರ್ತಿ(48), ಅಂಕುಲ್‌ ರಾಯ್‌(36), ಕುಶಾಗ್ರ ಕುಮಾರ್‌(36) ಹಾಗೂ ಸೂರಜ್‌ ಕುಮಾರ್‌(34) ಕೆಲ ಕಾಲ ಕ್ರೀಸ್‌ನಲ್ಲಿ ನಿಂತು ತಂಡದ ಮೊತ್ತ 200ರ ಗಡಿ ದಾಟಿಸಿದರು. 7ನೇ ವಿಕೆಟ್‌ಗೆ ಸುಪ್ರಯೊ-ಅಂಕುಲ್‌ರ 86 ರನ್‌ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ಮೊದಲ ಇನ್ನಿಂಗ್‌್ಸನಲ್ಲಿ 4 ವಿಕೆಟ್‌ ಕಬಳಿಸಿದ್ದ ಸ್ಪಿನ್ನರ್‌ ಕೆ.ಗೌತಮ್‌ ರಣಜಿಯಲ್ಲಿ 10ನೇ ಬಾರಿ 5 ವಿಕೆಟ್‌ ಗೊಂಚಲು ಪಡೆದರು. ಕೌಶಿಕ್‌ 3, ಶ್ರೇಯಸ್‌ ಗೋಪಾಲ್‌ 2 ವಿಕೆಟ್‌ ಪಡೆದರು.

WPL Auction: ಬಾಬರ್‌ ಅಜಮ್‌ಗಿಂತ ಹೆಚ್ಚಿನ ಸ್ಯಾಲರಿ ಪಡೆಯಲಿದ್ದಾರೆ ಸ್ಮೃತಿ ಮಂದನಾ!

ಸುಲಭ ಗುರಿ ಬೆನ್ನತ್ತಿದ ರಾಜ್ಯ ದೇವದತ್‌ ಪಡಿಕ್ಕಲ್‌ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ನಿಕಿನ್‌ ಜೋಸ್‌(42), ಆರ್‌.ಸಮರ್ಥ್‌(24) ತಂಡವನ್ನು ಗೆಲುವಿನ ದಡ ತಲುಪಿಸಿದರು.

ಸ್ಕೋರ್‌: 
ಜಾರ್ಖಂಡ್‌ 164/10 ಮತ್ತು 201/10 (ಸುಪ್ರಿಯೊ 48, ಗೌತಮ್‌ 5-75, ಕೌಶಿಕ್‌ 3-21) 
ಕರ್ನಾಟಕ 300/10 ಮತ್ತು 66/1 (ನಿಕಿನ್‌ 42*, ಸಮಥ್‌ರ್‍ 24*)

8 ವಿಕೆಟ್‌ ಕಿತ್ತ ಜಡೇಜಾ

ಚೆನ್ನೈ: ಗಾಯದಿಂದ ಚೇತರಿಸಿ ಫಿಟ್ನೆಸ್‌ ಸಾಬೀತುಪಡಿಸಲು 4 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದ ರವೀಂದ್ರ ಜಡೇಜಾ ತಮಿಳುನಾಡು ವಿರುದ್ಧ ಗುರುವಾರ 7 ವಿಕೆಟ್‌ ಕಬಳಿಸಿದರು. ಮೊದಲ ಇನ್ನಿಂಗ್‌್ಸನಲ್ಲಿ 132 ರನ್‌ ಹಿನ್ನಡೆ ಅನುಭವಿಸಿದ್ದ ಸೌರಾಷ್ಟ್ರಕ್ಕೆ 3ನೇ ದಿನ ಜಡೇಜಾ ಆಪತ್ಭಾಂಧವರಾದರು. 17.1 ಓವರ್‌ ಎಸೆದ ಎಡಗೈ ಸ್ಪಿನ್ನರ್‌ 53 ರನ್‌ಗೆ ಪ್ರಮುಖ 7 ವಿಕೆಟ್‌ ಕಿತ್ತು, ತಮಿಳುನಾಡನ್ನು 133ಕ್ಕೆ ನಿಯಂತ್ರಿಸಿದರು. ಅವರು ಮೊದಲ ಇನ್ನಿಂಗ್‌್ಸನಲ್ಲಿ 1 ವಿಕೆಟ್‌ ಪಡೆದಿದ್ದರು.

ರಾಹುಲ್‌-ಅಥಿಯಾ ಜೋಡಿಗೆ ಉಡುಗೊರೆಗಳ ಸುರಿಮಳೆ

ಮುಂಬೈ: ಜ.23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಭಾರತೀಯ ಕ್ರಿಕೆಟಿಗ, ಕರ್ನಾಟಕದ ಕೆ.ಎಲ್‌.ರಾಹುಲ್‌ ಹಾಗೂ ಬಾಲಿವುಡ್‌ನ ಖ್ಯಾತ ನಟ ಸುನಿಲ್‌ ಶೆಟ್ಟಿಅವರ ಪುತ್ರಿ, ನಟಿ ಆಥಿಯಾ ಶೆಟ್ಟಿದಂಪತಿಗೆ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ ಸೇರಿದಂತೆ ಹಲವು ಗಣ್ಯರು ದುಬಾರಿ ಉಡುಗೊರೆಗಳನ್ನು ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಥಿಯಾ ತಂದೆ ಸುನಿಲ್‌, ಮುಂಬೈನಲ್ಲಿ 50 ಕೋಟಿ ರು. ಮೌಲ್ಯದ ಐಷಾರಾಮಿ ಅಪಾರ್ಚ್‌ಮೆಂಟ್‌ ನೀಡಿದ್ದು, ವಿರಾಟ್‌ ಕೊಹ್ಲಿ ಸುಮಾರು ಎರಡೂವರೆ ಕೋಟಿ ರು. ಮೌಲ್ಯದ ಕಾರು ನೀಡಿದ್ದಾಗಿ ಹೇಳಲಾಗುತ್ತಿದೆ. ಇದೇ ವೇಳೆ ಧೋನಿ 80 ಲಕ್ಷ ರು. ಬೆಲೆಬಾಳುವ ಕವಾಸಕಿ ನಿಂಜಾ ಬೈಕ್‌ ಉಡುಗೊರೆಯಾಗಿ ನೀಡಿದ್ದರೆ, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ 1.64 ಕೋಟಿ ರು.ನ ಆಡಿ ಕಾರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇತರೆ ನಟ, ನಟಿಯರು, ಗಣ್ಯರಿಂದ ಕೂಡಾ ನವ ದಂಪತಿಗೆ ವಾಚ್‌, ಚಿನ್ನಾಭರಣ ಉಡುಗೊರೆ ರೂಪದಲ್ಲಿ ದೊರೆತಿವೆ ಎಂದು ತಿಳಿದುಬಂದಿದೆ. ಇದೇ ವೇಳೆ ಉಡುಗೊರೆ ನೀಡಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ಸುನಿಲ್‌ ಶೆಟ್ಟಿಕುಟುಂಬದ ಮೂಲಗಳು ನಿರಾಕರಿಸಿದ್ದಾಗಿಯೂ ವರದಿಯಾಗಿದೆ.