Asianet Suvarna News Asianet Suvarna News

WPL Auction: ಬಾಬರ್‌ ಅಜಮ್‌ಗಿಂತ ಹೆಚ್ಚಿನ ಸ್ಯಾಲರಿ ಪಡೆಯಲಿದ್ದಾರೆ ಸ್ಮೃತಿ ಮಂದನಾ!

ಐಪಿಎಲ್‌ ಮಾದರಿಯಲ್ಲಿ ನಡೆಯಲಿರುವ ಬಿಸಿಸಿಐನ ವುಮೆನ್ಸ್ ಪ್ರೀಮಿಯರ್‌ ಲೀಗ್‌ಗೆ ಈಗಾಗಲೇ ವೇದಿಕೆ ಸಜ್ಜಾಗಿದೆ. ಮೊದಲ ಆವೃತ್ತಿಯಿಂದಲೇ ಈ ಲೀಗ್‌ ವಿಶ್ವದ 2ನೇ ಅತೀದೊಡ್ಡ ಮಹಿಳಾ ಕ್ರಿಕೆಟ್‌ ಲೀಗ್‌ ಎನಿಸಿಕೊಳ್ಳಲಿದೆ. ಅದಲ್ಲದೆ, ಪಿಎಸ್‌ಎಲ್‌ನಲ್ಲಿ ಪಾಕಿಸ್ತಾನದ ಬಾಬರ್‌ ಅಜಮ್‌ ಪಡೆಯೋದಕ್ಕಿಂತ ಹೆಚ್ಚಿನ ವೇತನವನ್ನು ಸ್ಮೃತಿ ಮಂದನಾ ಡಬ್ಲ್ಯುಪಿಎಲ್‌ನಲ್ಲಿ ಪಡೆದುಕೊಳ್ಳಲಿದ್ದಾರೆ.
 

Babar Azam In Salary WIPL Players Smriti Mandhana will take more Salary than pakistan Captain san
Author
First Published Jan 26, 2023, 4:59 PM IST

ಮುಂಬೈ (ಜ.26): ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಗಾಗಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಡಬ್ಲ್ಯುಪಿಎಲ್‌ನಲ್ಲಿ ಭಾಗವಹಿಸಲಿರುವ ಆರು ತಂಡಗಳ ಬಿಡ್ಡಿಂಗ್‌ ಬುಧವಾರ ಮುಕ್ತಾಯಗೊಂಡಿದ್ದು, ಈ ಆರೂ ತಂಡಗಳು ದೊಡ್ಡ ಮೊತ್ತಕ್ಕೆ ಖರೀದಿಯಾಗಿವೆ. ಕೆಲ ದಿನಗಳ ಹಿಂದೆ ಬಿಸಿಸಿಐ ಕೂಡ ಈ ಟೂರ್ನಿಯ 5 ವರ್ಷಗಳ ಮಾಧ್ಯಮ ಹಕ್ಕುಗಳನ್ನು ಹರಾಜು ಹಾಕಿತ್ತು. ಇವೆರಡರಿಂದ ಬಿಸಿಸಿಐ ಸುಮಾರು 5.5 ಸಾವಿರ ಕೋಟಿ ರೂಪಾಯಿ ಆದಾಯ ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಸೀಸನ್‌ನಿಂದ ವಿಶ್ವದ ಅತಿದೊಡ್ಡ ಮಹಿಳಾ ಕ್ರಿಕೆಟ್ ಲೀಗ್ ಎನಿಸಿಕೊಂಡಿದೆ. ಪುರುಷರು ಹಾಗೂ ಮಹಿಳೆಯರ ಲೀಗ್‌ಗಳನ್ನು ಲೆಕ್ಕ ಹಾಕಿ ನೋಡೋದಾದರೆ, ಇದು ವಿಶ್ವದ 2ನೇ ಅತೀದೊಡ್ಡ ಕ್ರಿಕೆಟ್‌ ಲೀಗ್‌ ಎನಿಸಿಕೊಳ್ಳಲಿದೆ. ಮೊದಲ ಸ್ಥಾನದಲ್ಲಿ ಐಪಿಎಲ್‌ ಇದೆ. ಬಿಸಿಸಿಐ ಪ್ರಸ್ತುತ ಫೆಬ್ರವರಿ 2ನೇ ವಾರದಲ್ಲಿ ಡಬ್ಲ್ಯುಪಿಎಲ್‌ ಆಟಗಾರ್ತಿಯರನ್ನು ಹರಾಜು ಹಾಕುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸಿದ್ಧತೆ ಆರಂಭವಾಗಿರುವ ನಡುವೆ, ಎಲ್ಲರ ಮನಸ್ಸಲ್ಲಿರುವ ಏಕೈಕ ಪ್ರಶ್ನೆ ಎಂದರೆ, ಈ ಬಾರಿಯ ಅತ್ಯಂತ ದುಬಾರಿ ಆಟಗಾರ್ತಿ ಯಾರಾಗಬಹುದು ಎನ್ನುವುದು.

2022ರಲ್ಲಿ ಮಹಿಳಾ ಟೀಂ ಇಂಡಿಯಾದ ಟಿ20 ನಿರ್ವಹಣೆಯನ್ನು ನೋಡಿ ಹೇಳುವುದಾದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಹಾಗೂ ಹರ್ಮಾನ್‌ಪ್ರೀತ್‌ ಕೌರ್‌, ಡಬ್ಲ್ಯುಪಿಎಲ್‌ನ ಅತ್ಯಂತ ದುಬಾರಿ ಆಟಗಾರ್ತಿಯರಾಗುವ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಟಿ20 ಮಾದರಿಯಲ್ಲಿ 2022ರಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇವರಿಬ್ಬರೂ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ.

ಈ ಆಟಗಾರರ ವೇತನವು ಅವರ ಲೀಗ್‌ನಲ್ಲಿ ಅತ್ಯಧಿಕವಾಗಿರುವುದು ಮಾತ್ರವಲ್ಲದೆ ಐಪಿಎಲ್ ಹೊರತುಪಡಿಸಿ ವಿಶ್ವದ ಯಾವುದೇ ಪುರುಷರ ಲೀಗ್‌ನ ಅಗ್ರ ಆಟಗಾರರಿಗಿಂತ ಹೆಚ್ಚಾಗಿರುವ ಸಾಧ್ಯತೆ ದಟ್ಟವಾಗಿದೆ. ಸದ್ಯದ ಅಂದಾಜಿನ ಪ್ರಕಾರ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಪಾಕ್‌ ತಂಡದ ಸೂಪರ್‌ಸ್ಟಾರ್‌ ಪ್ಲೇಯರ್‌ ಬಾಬರ್‌ ಅಜಮ್‌ ಅವರಿಗಿಂತ ಹೆಚ್ಚಿನ ಸ್ಯಾಲರಿಯನ್ನು ಸ್ಮೃತಿ ಮಂದನಾ ಹಾಗೂ ಹರ್ಮಾನ್‌ಪ್ರೀತ್‌ ಕೌರ್‌ ಪಡೆಯುವ ಸಾಧ್ಯತೆ ಇದೆ.

ಪ್ರಸ್ತುತ ವಿಶ್ವದ ಅಗ್ರ ಮೂರು ಕ್ರಿಕೆಟ್‌ ಲೀಗ್‌ಗಳ ಬಹುಮಾನ ಮೊತ್ತವನ್ನು ನೋಡುವುದಾದರೆ, ಐಪಿಎಲ್‌ನ ಬಹುಮಾನ ಮೊತ್ತ 20 ಕೋಟಿ ಆಗಿದ್ದರೆ, ಡಬ್ಯುಪಿಎಲ್‌ನಲ್ಲಿ 6 ಕೋಟಿ ಬಹುಮಾನ ಮೊತ್ತವಿದೆ. ಪಾಕಿಸ್ತಾನ ಸೂಪರ್‌ ಲೀಗ್‌ನ ಬಹುಮಾನ ಮೊತ್ತ 3.4 ಕೋಟಿ ರೂಪಾಯಿ ಆಗಿದೆ. ಇನ್ನು ಮಹಿಳಾ ಕ್ರಿಕೆಟ್‌ ಲೀಗ್‌ಗೆ ಹೋಲಿಸಿದರೆ, ಡಬ್ಲ್ಯುಪಿಎಲ್‌ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಡಬ್ಯುದಹಂಡ್ರೆಡ್‌ ಕ್ರಿಕೆಟ್‌ ಟೂರ್ನಿಯಲ್ಲಿ 1.50 ಕೋಟಿ ಬಹುಮಾನ ಮೊತ್ತವಿದೆ.

ಆಟಗಾರ್ತಿಯರ ಮೂಲ ಬೆಲೆ ಎಷ್ಟು: ಅಂದಾಜಿನ ಪ್ರಕಾರ ಆಟಗಾರ್ತಿಯರ ಮೂಲ ಬೆಲೆ 10 ರಿಂದ 50 ಲಕ್ಷದ ಒಳಗಿನ ಆಸುಪಾಸು ಇರುವ ಸಾಧ್ಯತೆ ಇದೆ. ರಾಷ್ಟ್ರೀಯ ತಂಡಕ್ಕೆ ಆಡಿರುವ ಆಟಗಾರ್ತಿಯ ಮೂಲ ಬೆಲೆ 30 ರಿಂದ 50 ಲಕ್ಷ ರೂಪಾಯಿ ನಿಗದಿ ಮಾಡುವ ಸಾಧ್ಯದೆ ಇದೆ. ರಾಷ್ಟ್ರೀಯ ತಂಡದ ಪರವಾಗಿ ಆಡದ ಆಟಗಾರ್ತಿಯ ಬೆಲೆ 10 ರಿಂದ 20 ಲಕ್ಷದ ಒಳಗೆ ಇರಬಹುದು. ಒಟ್ಟು 5 ವಿಭಾಗಗಳಲ್ಲಿ ಆಟಗಾರ್ತಿಯರ ಹರಾಜು ನಡೆಯಲಿದೆ.

Women's IPL : ಅದಾನಿ ತೆಕ್ಕೆಗೆ ಅಹಮದಾಬಾದ್‌, ಬೆಂಗಳೂರು ತಂಡವನ್ನು ಖರೀದಿಸಿದ ಆರ್‌ಸಿಬಿ ಫ್ರಾಂಚೈಸಿ..!

ಆಟಗಾರ್ತಿಯರ ಖರೀದಿಗೆ 12 ಕೋಟಿ: ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು WPL ತಂಡವು 12 ಕೋಟಿ ರೂಪಾಯಿಗಳ ಪರ್ಸ್ ಅನ್ನು ಪಡೆಯುತ್ತದೆ. ಪ್ರತಿ ವರ್ಷ ಪರ್ಸ್‌ನಲ್ಲಿ 1.5 ಕೋಟಿ ರೂಪಾಯಿ ಹೆಚ್ಚಳವಾಗಲಿದೆ. ಪುರುಷರ ಐಪಿಎಲ್‌ನಲ್ಲಿ ತಂಡವೊಂದರ ಪರ್ಸ್ 95 ಕೋಟಿ ರೂ. ಅಂದರೆ, WPL ನಲ್ಲಿ ತಂಡಗಳ ಪರ್ಸ್ IPL ತಂಡಗಳಿಗಿಂತ ಸುಮಾರು 8 ಪಟ್ಟು ಕಡಿಮೆಯಾಗಿದೆ. ಇಂಗ್ಲೆಂಡ್‌ನ ಸ್ಯಾಮ್ ಕರನ್ ಐಪಿಎಲ್‌ನಲ್ಲಿ ಹರಾಜಿನ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎನಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಪ್ರತಿ ಕ್ರೀಡಾಋತುವಿಗೆ 18.5 ಕೋಟಿ ರೂಪಾಯಿಯನ್ನು ಇವರಿಗೆ ನೀಡಲಿದೆ. ಡಬ್ಲ್ಯುಪಿಎಲ್‌ನ ಅತ್ಯಧಿಕ ವೇತನವು ಇದಕ್ಕಿಂತ 8 ಪಟ್ಟು ಕಡಿಮೆಯಿದ್ದರೂ ಸಹ, ಅಗ್ರ ಆಟಗಾರ್ತಿ 2 ರಿಂದ 2.50 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯಬಹುದು.

ಮಹಿಳಾ ಐಪಿಎಲ್‌ನ 5 ತಂಡಗಳ ಹರಾಜು ಇಂದು; ರೇಸ್‌ನಲ್ಲಿವೆ 17 ಸಂಸ್ಥೆಗಳು..!

ಡಬ್ಲ್ಯುಪಿಎಲ್‌ನ ದುಬಾರಿ ಆಟಗಾರ್ತಿಯ ಸಂಭಾವನೆಯು 2 ಕೋಟಿ ರೂ.ಗಿಂತ ಹೆಚ್ಚಾದರೆ, ಈ ಲೀಗ್‌ನ ಅತಿ ದೊಡ್ಡ ಸಂಭಾವನೆಯು ಪಾಕಿಸ್ತಾನ್ ಸೂಪರ್ ಲೀಗ್, ಬಿಗ್ ಬ್ಯಾಷ್‌ನಂತಹ ವಿದೇಶಿ ಲೀಗ್‌ಗಳ ದುಬಾರಿ ಆಟಗಾರರಿಗಿಂತ ಹೆಚ್ಚಾಗಿರುತ್ತದೆ. ಪಾಕಿಸ್ತಾನ್ ಸೂಪರ್ ಲೀಗ್ ಅಂದರೆ ಪಿಎಸ್ ಎಲ್ ನಲ್ಲಿ ಸ್ಟಾರ್ ಆಟಗಾರ ಬಾಬರ್ ಅಜಮ್ 1.38 ಕೋಟಿ ಸಂಭಾವನೆ ಪಡೆಯುತ್ತಾರೆ. ಬಾಬರ್ ಹೊರತುಪಡಿಸಿ, ಇತರ ಕೆಲವು ಸ್ಟಾರ್‌ಗಳು ಸಹ ಅದೇ ಮೊತ್ತವನ್ನು ಪಡೆಯುತ್ತಾರೆ. ಬಿಗ್ ಬ್ಯಾಷ್ ಲೀಗ್‌ನ ದುಬಾರಿ ಆಟಗಾರ ಸುಮಾರು 1 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ.

Follow Us:
Download App:
  • android
  • ios