Asianet Suvarna News Asianet Suvarna News

Ranji Trophy ಛತ್ತೀಸ್‌ಗಢ ಎದುರು ಜಯದ ನಿರೀಕ್ಷೆಯಲ್ಲಿ ಕರ್ನಾಟಕ

ರಣಜಿ ಟ್ರೋಫಿ ಟೂರ್ನಿಯಲ್ಲಿ ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ
ಛತ್ತೀಸ್‌ಗಢ ಎದುರು ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ ರಾಜ್ಯ ತಂಡ
ಮೊದಲ ಇನ್ನಿಂಗ್ಸಲ್ಲಿ 55 ರನ್‌ ಮುನ್ನಡೆ ಪಡೆದ ಮಯಾಂಕ್‌ ಅಗರ್‌ವಾಲ್‌ ಪಡೆ
 

Ranji Trophy Karnataka take on First Innings lead against Chhattisgarh eyes on 2nd win in the tournament kvn
Author
First Published Jan 6, 2023, 9:50 AM IST

ಬೆಂಗಳೂರು(ಜ.06): 2022-23ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ 2ನೇ ಜಯಕ್ಕಾಗಿ ಕಾಯುತ್ತಿದ್ದು, ಛತ್ತೀಸ್‌ಗಢ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ 55 ರನ್‌ ಮುನ್ನಡೆ ಪಡೆದ ರಾಜ್ಯ ತಂಡ, 2ನೇ ಇನ್ನಿಂಗ್ಸಲ್ಲಿ ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ. ಆದರೆ ಪಂದ್ಯದಲ್ಲಿ ಕೇವಲ ಒಂದು ದಿನ ಬಾಕಿ ಇದ್ದು, ಅಸಾಧಾರಣ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2ನೇ ದಿನ 1 ವಿಕೆಟ್‌ಗೆ 202 ರನ್‌ ಕಲೆ ಹಾಕಿದ್ದ ಕರ್ನಾಟಕ ಗುರುವಾರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. 102 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ನಾಯಕ ಮಯಾಂಕ್‌ ಅಗರ್‌ವಾಲ್‌ ಆ ಮೊತ್ತಕ್ಕೆ ಕೇವಲ 15 ರನ್‌ ಸೇರಿಸಿದರು. ಮೊದಲ ಅವಧಿಯಲ್ಲೇ ಕೇವಲ 11 ರನ್‌ ಅಂತರದಲ್ಲಿ 3 ವಿಕೆಟ್‌ ಕಳೆದುಕೊಂಡ ರಾಜ್ಯ ತಂಡ 287ಕ್ಕೆ 6 ವಿಕೆಟ್‌ ಕಳೆದುಕೊಂಡು ಮುನ್ನಡೆ ಬಿಟ್ಟುಕೊಡುವ ಆತಂಕದಲ್ಲಿತ್ತು. ಆದರೆ ನಿಕಿನ್‌ ಜೋಸ್‌ ಆಕರ್ಷಕ 67 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. 7ನೇ ವಿಕೆಟ್‌ಗೆ ಕೆ.ಗೌತಮ್‌ (18) ಜೊತೆ 33 ರನ್‌ ಸೇರಿಸಿದ ನಿಕಿನ್‌ ತಂಡವನ್ನು ಛತ್ತೀಸ್‌ಗಢದ 311 ರನ್‌ಗಳ ಮೊತ್ತವನ್ನು ದಾಟಿಸಿದರು. ಬಳಿಕ ಕೊನೆ ವಿಕೆಟ್‌ಗೆ ವಿದ್ವತ್‌ ಕಾವೇರಪ್ಪ ಜೊತೆ 26 ರನ್‌ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ವಿದ್ವತ್‌ ಒಂದೂ ರನ್‌ ಗಳಿಸಲಿಲ್ಲ ಎನ್ನುವುದು ಗಮನಾರ್ಹ. 366 ರನ್‌ಗೆ ರಾಜ್ಯದ ಮೊದಲ ಇನ್ನಿಂಗ್‌್ಸ ಮುಕ್ತಾಯಗೊಂಡಿತು.

55 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ಛತ್ತೀಸ್‌ಗಢ ಖಾತೆ ತೆರೆಯುವ ಮೊದಲೇ 2 ವಿಕೆಟ್‌ ಕಳೆದುಕೊಂಡಿತು. ದಿನದಂತ್ಯಕ್ಕೆ 2 ವಿಕೆಟ್‌ಗೆ 35 ರನ್‌ ಗಳಿಸಿ ಇನ್ನೂ 20 ರನ್‌ ಹಿನ್ನಡೆಯಲ್ಲಿದೆ.

Ranji Trophy: ಮಯಾಂಕ್‌ ಅಗರ್‌ವಾಲ್ ಶತಕ, ಬೃಹತ್ ಮೊತ್ತದತ್ತ ಕರ್ನಾಟಕ

ಸ್ಕೋರ್‌: ಛತ್ತೀಸ್‌ಗಢ 311/10 ಮತ್ತು 35/2 (ಅಮನ್‌ದೀಪ್‌ 23*, ಕೌಶಿಕ್‌ 1-7) 
ಕರ್ನಾಟಕ 366/10 (ಮಯಾಂಕ್‌ 117, ನಿಕಿನ್‌ 67, ಅಜಯ್‌ 4-93)

ರಣಜಿ: ಕೇದಾರ್‌ 283 ರನ್‌!

ಪುಣೆ: 3 ವರ್ಷಗಳ ಬಳಿಕ ಮೊದಲ ರಣಜಿ ಪಂದ್ಯವಾಡಿದ ಮಹಾರಾಷ್ಟ್ರದ ಹಿರಿಯ ಬ್ಯಾಟರ್‌ ಕೇದಾರ್‌ ಜಾಧವ್‌ ದ್ವಿಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಅಸ್ಸಾಂ ವಿರುದ್ಧದ ಪಂದ್ಯದಲ್ಲಿ 37 ವರ್ಷದ ಜಾಧವ್‌ 283 ಎಸೆತಗಳಲ್ಲಿ 21 ಬೌಂಡರಿ, 12 ಸಿಕ್ಸರ್‌ ಒಳಗೊಂಡ 283 ರನ್‌ ಸಿಡಿಸಿದರು. ಇದು 2018ರ ಬಳಿಕ ಜಾಧವ್‌ ಬಾರಿಸಿದ ಮೊದಲ ಶತಕ. ಮಹಾರಾಷ್ಟ್ರ 9 ವಿಕೆಟ್‌ಗೆ 594 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಅಸ್ಸಾಂ ಮೊದಲ ಇನ್ನಿಂಗ್ಸಲ್ಲಿ 274 ರನ್‌ ಗಳಿಸಿತ್ತು.

ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್‌ ಮರು ಆಯ್ಕೆ?

ನವದೆಹಲಿ: ಭಾರತ ಹಿರಿಯರ ತಂಡಕ್ಕೆ ನೂತನ ಆಯ್ಕೆ ಸಮಿತಿ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಬಿಸಿಸಿಐ ಯೂ ಟರ್ನ್‌ ಹೊಡೆದಿದ್ದು, ಚೇತನ್‌ ಶರ್ಮಾರನ್ನೇ ಮುಖ್ಯಸ್ಥರನ್ನಾಗಿ ಮರು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 

ಕಳೆದ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಸೋಲಿನ ಬಳಿಕ ಚೇತನ್‌ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಮಾಡಿತ್ತು. ಆದರೆ ಇತ್ತೀಚೆಗೆ ಶ್ರೀಲಂಕಾ ಸರಣಿಗೆ ತಂಡ ಆಯ್ಕೆ ಮಾಡಲು ಚೇತನ್‌ರ ಸಮಿತಿಯನ್ನೇ ಬಿಸಿಸಿಐ ಹಂಗಾಮಿಯಾಗಿ ನೇಮಿಸಿತ್ತು. ಈ ನಡುವೆ ಆಯ್ಕೆ ಸಮಿತಿಗೆ ಮತ್ತೊಮ್ಮೆ ಚೇತನ್‌ ಅರ್ಜಿ ಸಲ್ಲಿಸಿದ್ದು, ಅವರನ್ನು ಸಂದರ್ಶನ ಮಾಡಿದ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಮತ್ತೊಮ್ಮೆ ಮುಖ್ಯಸ್ಥರನ್ನಾಗಿ ನೇಮಿಸಲು ಸಲಹೆ ನೀಡಿದೆ ಎಂದು ಗೊತ್ತಾಗಿದೆ.
 

Follow Us:
Download App:
  • android
  • ios