Asianet Suvarna News Asianet Suvarna News

ರಣಜಿ ಟ್ರೋಫಿ: ಜಮ್ಮು-ಕಾಶ್ಮೀರಕ್ಕೆ 331 ರನ್‌ಗಳ ಗುರಿ ನೀಡಿದ ಕರ್ನಾಟಕ

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು 330 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಕೊನೆಯ ದಿನ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಸವಾಲಿನ ಗುರಿ ನೀಡಿದೆ.

Ranji Trophy Karnataka set 331 runs target to Jammu and Kashmir
Author
Jammu, First Published Feb 24, 2020, 12:39 PM IST

ಜಮ್ಮು(ಫೆ.24): ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೃಷ್ಣಮೂರ್ತಿ ಸಿದ್ದಾರ್ಥ್(98) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ 316 ರನ್ ಬಾರಿಸಿ ಆಲೌಟ್ ಆಗಿದೆ. ಈ ಮೂಲಕ ಜಮ್ಮು & ಕಾಶ್ಮೀರ ತಂಡಕ್ಕೆ ಗೆಲ್ಲಲು 331 ರನ್‌ಗಳ ಗುರಿ ನೀಡಿದೆ.

ನಾಲ್ಕನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡವು 4 ವಿಕೆಟ್ ಕಳೆದುಕೊಂಡು 245 ರನ್ ಬಾರಿಸಿ ಒಟ್ಟಾರೆ 259 ರನ್‌ಗಳ ಮುನ್ನಡೆ ಸಾಧಿಸಿತ್ತು. ಇನ್ನು ನಾಲ್ಕನೇ ದಿನದಾಟದಲ್ಲೂ ಕರ್ನಾಟಕ ತನ್ನ ಖಾತೆಗೆ 30 ಸೇರಿಸಿತು. ಈ ವೇಳೆ ಶತಕದ ಹೊಸ್ತಿಲಲ್ಲಿ ಸಿದ್ಧಾರ್ಥ್(98) ಆಬೀದ್ ಮುಷ್ತಾಕ್‌ಗೆ ವಿಕೆಟ್ ಒಪ್ಪಿಸಿದರು. ಸಿದ್ಧಾರ್ಥ್ 177 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 98 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 275 ರನ್‌ಗಳಿಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ, ಸಿದ್ಧಾರ್ಥ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಕೇವಲ 41 ರನ್‌ಗಳ ಅಂತರದಲ್ಲಿ ಕರ್ನಾಟಕ ತಂಡವು 6 ವಿಕೆಟ್ ಕಳೆದುಕೊಂಡಿತು. 

ರಣಜಿ ಟ್ರೋಫಿ: ಕರ್ನಾಟಕಕ್ಕೆ ರೋಚಕ 14 ರನ್‌ಗಳ ಇನಿಂಗ್ಸ್ ಮುನ್ನಡೆ

ಜಮ್ಮು&ಕಾಶ್ಮೀರ ಪರ ಆಬೀದ್ ಮುಷ್ತಾಕ್‌ 6 ವಿಕೆಟ್ ಪಡೆದರೆ, ನಾಯಕ ಫರ್ವೇಜ್ ರಸೂಲ್ 3 ಹಾಗೂ ಮುಜ್ತಾಬ್ ಯೂಸುಫ್ ಒಂದು ವಿಕೆಟ್ ಪಡೆದರು. ಜಮ್ಮು&ಕಾಶ್ಮೀರ ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಇನ್ನುಳಿದ 65 ಓವರ್‌ಗಳಲ್ಲಿ 330 ರನ್ ಬಾರಿಸಬೇಕಿದೆ. 

ಕರ್ನಾಟಕ ತಂಡವು ಈಗಾಗಲೇ ಮೊದಲ ಇನಿಂಗ್ಸ್‌ನಲ್ಲಿ 14 ರನ್‌ಗಳ ಮುನ್ನಡೆ ಪಡೆದಿದೆ. ಒಂದು ವೇಳೆ ಪಂದ್ಯ ಡ್ರಾ ಆದರೂ ಕರ್ನಾಟಕ ತಂಡವೇ ಸೆಮಿಫೈನಲ್ ಪ್ರವೇಶಿಸಲಿದೆ. 

Follow Us:
Download App:
  • android
  • ios