ರಣಜಿ ಟ್ರೋಫಿ: ಕರ್ನಾಟಕಕ್ಕೆ ರೋಚಕ 14 ರನ್‌ಗಳ ಇನಿಂಗ್ಸ್ ಮುನ್ನಡೆ

ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಜಮ್ಮು&ಕಾಶ್ಮೀರ ಎದುರು ರಾಜ್ಯ ತಂಡ 14 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

Ranji Trophy Karnataka 14 runs FIL against Jammu and Kashmir

ಜಮ್ಮು(ಫೆ.23): ಬೌಲರ್‌ಗಳ ಚುರುಕಿನ ಬೌಲಿಂಗ್ ದಾಳಿಯ ನೆರವಿನಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಜಮ್ಮು& ಕಾಶ್ಮೀರ ತಂಡವನ್ನು ಕೇವಲ 192 ರನ್‌ಗಳಿಗೆ ಕಟ್ಟಿ ಹಾಕಿದೆ. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡವು 14 ರನ್‌ಗಳ ಮುನ್ನಡೆ ಗಳಿಸಿದೆ. ವೇಗಿ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಕಬಳಿಸಿ ಕರ್ನಾಟಕದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಮಳೆಯಾಟದ ನಡುವೆಯೂ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 206 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೂರನೇ ದಿನದಾಟದಂತ್ಯಕ್ಕೆ ಜುಮ್ಮು ತಂಡ 2 ವಿಕೆಟ್ ಕಳೆದುಕೊಂಡು 88 ರನ್ ಬಾರಿಸಿತ್ತು. ಇನ್ನು 4  ದಿನದಾಟದಲ್ಲಿ ಕರ್ನಾಟಕ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ಇನಿಂಗ್ಸ್ ಮುನ್ನಡೆಗೆ ಕಾರಣರಾದರು. 

ರಣಜಿ ಟ್ರೋಫಿ: ಕರ್ನಾಟಕ ಆಲೌಟ್ @206

ಜಮ್ಮು ಕಾಶ್ಮೀರ ಪರ ಶುಭಂ ಖಜೂರಿಯಾ(62) ಹಾಗೂ ಅಬ್ದುಲ್ ಸಮದ್(43) ಕರ್ನಾಟಕ ಬೌಲರ್‌ಗಳಿಗೆ ಅಲ್ಪ ಪ್ರತಿರೋಧ ತೋರಿದರು. ಆದರೆ ರೋನಿತ್ ಮೋರೆ ಹಾಗೂ ಸುಚಿತ್ ಕರ್ನಾಟಕ ಪಾಲಿಗೆ ಅಗತ್ಯ ಸಂದರ್ಭದಲ್ಲಿ ವಿಕೆಟ್ ಒದಗಿಸಿಕೊಟ್ಟರು. ಇನ್ನು ಪ್ರಸಿದ್ಧ್ ಮಾರಕ ದಾಳಿ ನಡೆಸುವ ಮೂಲಕ ಕರ್ನಾಟಕಕ್ಕೆ 14 ರನ್‌ಗಳ ಇನಿಂಗ್ಸ್ ಮುನ್ನಡೆ ಒದಗಿಸಿಕೊಡುವಲ್ಲಿ ಯಶಸ್ವಿಯಾದರು.

ಇನ್ನು ಸುಮಾರು ಒಂದುವರೆ ದಿನದಾಟ ಬಾಕಿ ಇದ್ದು, ಕರ್ನಾಟಕ ಎಚ್ಚರಿಕೆಯ ಆಟವಾಡಬೇಕಿದೆ. ಒಟ್ಟಿನಲ್ಲಿ ಮಳೆಯ ಹೊರತಾಗಿಯೂ ಕರ್ನಾಟಕ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. 

Latest Videos
Follow Us:
Download App:
  • android
  • ios