ರಣಜಿ ಟ್ರೋಫಿ: ಇನ್ನಿಂಗ್ಸ್ ಮುನ್ನಡೆಗೆ ಕರ್ನಾಟಕ ಕಸರತ್ತು!
ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ, ಗೆಲುವಿನ ವಿಶ್ವಾಸದಲ್ಲಿದ್ದ ಕರುಣ್ ನಾಯರ್ ಪಡೆಗೆ ಪಂದ್ಯದ 3ನೇ ದಿನವಾದ ಗುರುವಾರ ಆಘಾತ ಎದುರಾಯಿತು. ಮಧ್ಯಪ್ರದೇಶ ತಂಡ ಇಡೀ ದಿನ ಕಳೆದುಕೊಂಡಿದ್ದು ಕೇವಲ 2 ವಿಕೆಟ್.
ಶಿವಮೊಗ್ಗ(ಫೆ.07): ಸುಲಭ ಗೆಲುವು ಸಾಧಿಸಿ 2019-20ರ ರಣಜಿ ಟ್ರೋಫಿ ನಾಕೌಟ್ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದ ಕರ್ನಾಟಕಕ್ಕೆ ಹಿನ್ನಡೆಯಾದಂತೆ ಕಾಣುತ್ತಿದೆ. ಮಧ್ಯಪ್ರದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ಪಂದ್ಯ ಬಹುತೇಕ ಡ್ರಾನತ್ತ ಸಾಗಿದೆ. ಅಲ್ಲದೆ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನಾದರೂ ಸಾಧಿಸಿ, 3 ಅಂಕ ಪಡೆಯಲು ಕರ್ನಾಟಕ ಕಸರತ್ತು ನಡೆಸಬೇಕಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ, ಗೆಲುವಿನ ವಿಶ್ವಾಸದಲ್ಲಿದ್ದ ಕರುಣ್ ನಾಯರ್ ಪಡೆಗೆ ಪಂದ್ಯದ 3ನೇ ದಿನವಾದ ಗುರುವಾರ ಆಘಾತ ಎದುರಾಯಿತು. ಮಧ್ಯಪ್ರದೇಶ ತಂಡ ಇಡೀ ದಿನ ಕಳೆದುಕೊಂಡಿದ್ದು ಕೇವಲ 2 ವಿಕೆಟ್. 2ನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದ್ದ ಮಧ್ಯಪ್ರದೇಶ, 3ನೇ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದ್ದು, ಇನ್ನು 115 ರನ್‌ಗಳ ಹಿನ್ನಡೆಯಲ್ಲಿದೆ.
ಶುಕ್ರವಾರ 4ನೇ ಹಾಗೂ ಅಂತಿಮ ದಿನವಾಗಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ. ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವ ತಂಡಕ್ಕೆ 3 ಅಂಕ ಸಿಗಲಿದ್ದು, ಮತ್ತೊಂದು ತಂಡಕ್ಕೆ 1 ಅಂಕ ಸಿಗಲಿದೆ.
ರಣಜಿ ಟ್ರೋಫಿ: ಮಧ್ಯ ಪ್ರದೇಶ ವಿರುದ್ಧ ಕರ್ನಾಟಕ ಬೃಹತ್ ಮೊತ್ತ!
ಮಧ್ಯಪ್ರದೇಶ ಈಗಾಗಲೇ ನಾಕೌಟ್ ರೇಸ್‌ನಿಂದ ಹೊರಬಿದ್ದಿರುವ ಕಾರಣ, ಫಲಿತಾಂಶದಿಂದ ತಂಡಕ್ಕೆ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಆದರೆ ನಾಕೌಟ್ ಹಂತಕ್ಕೇರುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿರುವ ಕರ್ನಾಟಕಕ್ಕೆ ಗೆಲುವಿನ ಅಗತ್ಯವಿದೆ. ಈ ಪಂದ್ಯ ಡ್ರಾಗೊಂಡರೆ ಬರೋಡಾ ವಿರುದ್ಧ ನಡೆಯಲಿರುವ ಅಂತಿಮ ಪಂದ್ಯವನ್ನು ಗೆಲ್ಲಬೇಕಾದ ಒತ್ತಡಕ್ಕೆ ಕರ್ನಾಟಕ ಸಿಲುಕಲಿದೆ.
ಆದಿತ್ಯ ಶತಕ: 3ನೇ ದಿನವಾದ ಬುಧವಾರ ಮಧ್ಯಪ್ರದೇಶ ಯಶ್ ದುಬೆ (45) ಹಾಗೂ ನಾಯಕ ಶುಭಮ್ ಶರ್ಮಾ (25) ವಿಕೆಟನ್ನು ಬೇಗನೆ ಕಳೆದುಕೊಂಡಿತು. 123 ರನ್‌ಗಳಿಗೆ ತಂಡ 4 ವಿಕೆಟ್ ಕಳೆದುಕೊಂಡಿತು. 5ನೇ ವಿಕೆಟ್‌ಗೆ ಜತೆಯಾದ ಆದಿತ್ಯ ಶ್ರೀವಾಸ್ತವ (109*) ಹಾಗೂ ವೆಂಕಟೇಶ್ ಅಯ್ಯರ್(80*) ಅಜೇಯ 188 ರನ್ ಜೊತೆಯಾಟವಾಡಿದ್ದು, ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸ್ಕೋರ್:
ಕರ್ನಾಟಕ 426,
ಮಧ್ಯಪ್ರದೇಶ 311/4
(ಆದಿತ್ಯ 109*, ವೆಂಕಟೇಶ್ 80*, ಗೌತಮ್ 1-61, ಶ್ರೇಯಸ್ 1-67)