ಶಿವಮೊಗ್ಗ(ಫೆ.06): 2019-20ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತನ್ನ ಗರಿಷ್ಠ ಮೊತ್ತ ದಾಖಲಿಸಿದೆ. ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಮಧ್ಯಪ್ರದೇಶ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ ಕಲೆಹಾಕಿ, ಕರ್ನಾಟಕ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಮಧ್ಯಪ್ರದೇಶ 2ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸಿದ್ದು, ಇನ್ನೂ 366 ರನ್‌ ಹಿನ್ನಡೆಯಲ್ಲಿದೆ.

ಇದನ್ನೂ ಓದಿ:ರಣಜಿ ಟ್ರೋಫಿ: ಕರ್ನಾಟಕಕ್ಕೆ ಸಮರ್ಥ್ ಶತಕದಾಸರೆ 

ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 233 ರನ್‌ ಗಳಿಸಿದ್ದ ಕರ್ನಾಟಕ, ಬುಧವಾರ ಆರಂಭದಲ್ಲೇ ಕೆ.ವಿ.ಸಿದ್ಧಾಥ್‌ರ್‍ (62) ವಿಕೆಟ್‌ ಕಳೆದುಕೊಂಡಿತು. 300 ಎಸೆತಗಳನ್ನು ಎದುರಿಸಿ 108 ರನ್‌ ಗಳಿಸಿದ ಆರ್‌.ಸಮಥ್‌ರ್‍ ಇನ್ನಿಂಗ್ಸ್‌ಗೆ ರವಿ ಯಾದವ್‌ ತೆರೆ ಎಳೆದರು. ಶರತ್‌ ಶ್ರೀನಿವಾಸ್‌ (15) ಸಹ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. 282 ರನ್‌ಗೆ 6 ವಿಕೆಟ್‌ ಕಳೆದುಕೊಂಡ ಕರ್ನಾಟಕ 300 ರನ್‌ ತಲುಪುವುದು ಅನುಮಾನವೆನಿಸಿತು. ಆದರೆ 7ನೇ ವಿಕೆಟ್‌ಗೆ ಜತೆಯಾದ ಶ್ರೇಯಸ್‌ ಗೋಪಾಲ್‌ (50) ಹಾಗೂ ಕೆ.ಗೌತಮ್‌ ತಂಡದ ಮೊತ್ತವನ್ನು 400 ರನ್‌ ದಾಟಿಸಿದರು. 68 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ನೊಂದಿಗೆ 82 ರನ್‌ ಸಿಡಿಸಿದ ಗೌತಮ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. 132 ಓವರ್‌ ಬ್ಯಾಟ್‌ ಮಾಡಿ ಕರ್ನಾಟಕ ತನ್ನ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು.

ಇದನ್ನೂ ಓದಿ: ರಣಜಿ ಟ್ರೋಫಿ: ಕರ್ನಾಟಕಕ್ಕೆ ಬೋನಸ್‌ ಗೆಲುವು!

ಬ್ಯಾಟಿಂಗ್‌ ಆರಂಭಿಸಿದ ಮಧ್ಯಪ್ರದೇಶ 2ನೇ ಓವರಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ರಜತ್‌ ಶೂನ್ಯಕ್ಕೆ ಔಟಾದರು. ರಮೀಜ್‌ ಖಾನ್‌ ಹಾಗೂ ಯಶ್‌ ದುಬೆ 49 ರನ್‌ ಜೊತೆಯಾಟವಾಡಿದರೂ, ಕರ್ನಾಟಕದ ಬಿರುಸಿನ ದಾಳಿ ಎದುರು ತಿಣುಕಾಡಿದರು. 22 ರನ್‌ ಗಳಿಸಿದ್ದ ರಮೀಜ್‌ರನ್ನು ಮಿಥುನ್‌ ಪೆವಿಲಿಯನ್‌ಗಟ್ಟಿದರು. 17 ರನ್‌ ಗಳಿಸಿರುವ ಯಶ್‌, 6 ರನ್‌ ಗಳಿಸಿರುವ ನಾಯಕ ಶುಭಂ ಶರ್ಮಾ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಗುರುವಾರದ ಆಟ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆ ಇದೆ.

ಸ್ಕೋರ್‌: ಕರ್ನಾಟಕ 426 (ಸಮಥ್‌ರ್‍ 108, ಗೌತಮ್‌ 82, ಶ್ರೇಯಸ್‌ 50, ರವಿ 3-61), ಮಧ್ಯಪ್ರದೇಶ 60/2 (ರಮೀಜ್‌ 22, ಮಿಥುನ್‌ 1-10, ಪ್ರತೀಕ್‌ 1-12)