ಜಮ್ಮು(ಫೆ.22): ಕೃಷ್ಣಮೂರ್ತಿ ಸಿದ್ಧಾರ್ಥ್(76), ಮನೀಶ್ ಪಾಂಡೆ(37) ಸಮಯೋಚಿತ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 206 ರನ್‌ಗಳಿಗೆ ಸರ್ವಪತನ ಕಂಡಿದೆ. ರಣಜಿ ಟ್ರೋಫಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಜಮ್ಮು ಮತ್ತು ಕಾಶ್ಮೀರ ತಂಡವನ್ನು 200 ರನ್‌ಗಳೊಳಗಾಗಿ ನಿಯಂತ್ರಿಸ ಬೇಕಿದೆ.

ಇಲ್ಲಿನ ಗಾಂಧಿ ಮೆಮೋರಿಯಲ್ ಸೈನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಕರ್ನಾಟಕ-ಜಮ್ಮು ಮತ್ತು ಕಾಶ್ಮೀರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಮೊದಲ ದಿನ ಕೇವಲ 6 ಓವರ್ ಬೌಲಿಂಗ್ ಮಾಡಲಷ್ಟೇ ಸಾಧ್ಯವಾಗಿತ್ತು. ಮೊದಲ ದಿನ ಕರ್ನಾಟಕ 2 ವಿಕೆಟ್ ಕಳೆದುಕೊಂಡು 14 ರನ್ ಬಾರಿಸಿತ್ತು ಇನ್ನು ಎರಡನೇ ದಿನ ಒಂದೂ ಎಸೆತ ಕಾಣದೇ ಮುಕ್ತಾಯವಾಗಿತ್ತು. ಮೂರನೇ ದಿನದಲ್ಲಿ ಮನೀಶ್ ಪಾಂಡೆ(37), ಕೃಷ್ಣಮೂರ್ತಿ ಸಿದ್ಧಾರ್ಥ್(76) ಆಕರ್ಷಕ ಅರ್ಧಶತಕ ತಂಡಕ್ಕೆ ಆಸರೆಯಾಯಿತು. 

ರಣಜಿ ಟ್ರೋಫಿ: ಮೊನ್ನೆ ಸುರಿದ ಮಳೆಗೆ ನಿನ್ನೆ ಇಡೀ ದಿನದಾಟ ಬಲಿ!

ಜಮ್ಮು ಪರ ಆಕೀಬ್ ನಬೀ, ಯೂಸುಫ್ ಹಾಗೂ ಫರ್ವೇಜ್ ರಸೆಲ್ ತಲಾ 3 ವಿಕೆಟ್ ಪಡೆದರು. ಇನ್ನು ಆಬೀದ್ ಮುಷ್ತಾಕ್ ಒಂದು ವಿಕೆಟ್ ಪಡೆದರು.