ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವತ್ತ ಸೌರಾಷ್ಟ್ರ ದಿಟ್ಟ ಹೆಜ್ಜೆಬೆಂಗಾಲ್ ಎದುರು ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ ಸೌರಾಷ್ಟ್ರಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯ
ಕೋಲ್ಕತಾ(ಫೆ.18): 2022-23ರ ರಣಜಿ ಟ್ರೋಫಿ ಫೈನಲ್ನಲ್ಲಿ ಬಂಗಾಳ ವಿರುದ್ಧ ಸೌರಾಷ್ಟ್ರ ತಂಡ ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಬಂಗಾಳದ 174 ರನ್‌ಗೆ ಉತ್ತರವಾಗಿ ಇನ್ನಿಂಗ್‌್ಸ ಆರಂಭಿಸಿರುವ ಸೌರಾಷ್ಟ್ರ 2ನೇ ದಿನದಂತ್ಯಕ್ಕೆ 5 ವಿಕೆಟ್ಗೆ 317 ರನ್ ಕಲೆಹಾಕಿದ್ದು, 143 ರನ್ ಮುನ್ನಡೆ ಪಡೆದಿದೆ.
ಶನಿವಾರ ಮತ್ತಷ್ಟುರನ್ ಸೇರಿಸಿ ಬಂಗಾಳವನ್ನು ಬೇಗನೇ ಆಲೌಟ್ ಮಾಡಿ ಇನ್ನಿಂಗ್‌್ಸ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಮೊದಲ ದಿನ 2 ವಿಕೆಟ್ಗೆ 81 ರನ್ ಗಳಿಸಿದ್ದ ಸೌರಾಷ್ಟ್ರ ಶುಕ್ರವಾರ ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಸಾಧಿಸಿತು. ಆರಂಭಿಕ ಹಾರ್ವಿಕ್ ದೇಸಾಯಿ 50 ರನ್ ಗಳಿಸಿದರು. 109ಕ್ಕೆ 4 ವಿಕೆಟ್ ಕಳೆದುಕೊಂಡ ಬಳಿಕ ಅರ್ಪಿತ್ ವಸವಾಡ 5ನೇ ವಿಕೆಟ್ಗೆ ಶೆಲ್ಡಾನ್ ಜ್ಯಾಕ್ಸನ್(59) ಜೊತೆ 95, ಮುರಿಯದ 6ನೇ ವಿಕೆಟ್ಗೆ ಚಿರಾಗ್ ಜಾನಿ(57) ಜೊತೆ 113 ರನ್ ಜೊತೆಯಾಟವಾಡಿದರು. ವಸವಾಡ 81 ರನ್ ಸಿಡಿಸಿದ್ದು ಮತ್ತೊಂದು ಶತಕದತ್ತ ದಾಪುಗಾಲಿಟ್ಟಿದ್ದಾರೆ.
ಸ್ಕೋರ್:
ಬಂಗಾಳ 174/10
ಸೌರಾಷ್ಟ್ರ 317/5 (ವಸವಾಡ 81*, ಜ್ಯಾಕ್ಸನ್ 59, ಚಿರಾಗ್ 57*, ಇಶಾನ್ 2-72)
ಇಂಗ್ಲೆಂಡ್‌ಗೆ ಇನ್ನಿಂಗ್‌್ಸ ಲೀಡ್
ಮೌಂಟ್ ಮಾಂಗನ್ಯುಯಿ: ಟಾಮ್ ಬ್ಲಂಡೆಲ್ ಹೋರಾಟದ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧದ ಹಗಲು-ರಾತ್ರಿ ಮೊದಲ ಟೆಸ್ಟ್ನಲ್ಲಿ ಪ್ರವಾಸಿ ಇಂಗ್ಲೆಂಡ್ ಇನ್ನಿಂಗ್‌್ಸ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ನ 325 ರನ್‌ಗೆ ಉತ್ತರವಾಗಿ ಕಿವೀಸ್ ಶುಕ್ರವಾರ 306 ರನ್‌ಗೆ ಆಲೌಟಾಯಿತು. 83ಕ್ಕೆ 5 ವಿಕೆಟ್ ಕಳೆದುಕೊಂಡರೂ ಬ್ಲಂಡೆಲ್ 138 ರನ್ ಸಿಡಿಸಿ ತಂಡವನ್ನು ಮೇಲೆತ್ತಿದರು.
ಒಟ್ಟಾರೆ 19 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿ ಇಂಗ್ಲೆಂಡ್ 2ನೇ ದಿನದಂತ್ಯಕ್ಕೆ 2ಕ್ಕೆ 79 ರನ್ ಗಳಿಸಿದ್ದು, ಒಟ್ಟು 98 ರನ್ ಲೀಡ್ ಪಡೆದಿದೆ.
ರಹಸ್ಯ ಕಾರಾರಯಚರಣೆ ಎಫೆಕ್ಟ್: ಚೇತನ್ ಶರ್ಮಾ ರಾಜೀನಾಮೆ!
ನವದೆಹಲಿ: ರಾಷ್ಟ್ರೀಯ ಸುದ್ದಿ ವಾಹಿನಿ ‘ಝೀ ನ್ಯೂಸ್’ನ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿ, ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಚೇತನ್ ಶರ್ಮಾ ಶುಕ್ರವಾರ ಬಿಸಿಸಿಐ ಪ್ರಧಾನ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
Delhi Test: ಶಮಿ, ಅಶ್ವಿನ್, ಜಡ್ಡು ಮಾರಕ ದಾಳಿ, ಆಸ್ಟ್ರೇಲಿಯಾ 263ಕ್ಕೆ ಆಲೌಟ್
ಚೇತನ್ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದು, ಯಾರಿಂದಲೂ ಒತ್ತಡವಿರಲಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಚೇತನ್ ಇರಾನಿ ಕಪ್ ಆಟಗಾರರ ಆಯ್ಕೆಗಾಗಿ ಕೋಲ್ಕತಾದಲ್ಲಿ ರಣಜಿ ಫೈನಲ್ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದರು. ರಾಜೀನಾಮೆ ಬಳಿಕ ನೇರವಾಗಿ ದೆಹಲಿಗೆ ತೆರಳಿದ್ದಾರೆ. ಕಳೆದ ಟಿ20 ವಿಶ್ವಕಪ್ ಸೋಲಿನ ಬಳಿಕ ಚೇತನ್ ಶರ್ಮಾರನ್ನು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಜನವರಿಯಲ್ಲಿ ಅವರು ಮತ್ತೆ ಅದೇ ಹುದ್ದೆಗೇರಿದ್ದರು. ಚೇತನ್ ನಿರ್ಗಮನದಿಂದ ತೆರವಾಗಿರುವ ಸ್ಥಾನಕ್ಕೆ ಸಮಿತಿಯ ಸದಸ್ಯರಾಗಿರುವ ಶಿವಸುಂದರ್ ದಾಸ್ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ. ದಾಸ್ ಭಾರತ ಪರ 23 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
