ಡೆಲ್ಲಿ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 263 ರನ್‌ಗಳಿಗೆ ಆಲೌಟ್ಶಮಿಗೆ 4, ಅಶ್ವಿನ್‌ ಹಾಗೂ ಜಡೇಜಾಗೆ ತಲಾ 3 ವಿಕೆಟ್‌ಆಕರ್ಷಕ ಅರ್ಧಶತಕ ಸಿಡಿಸಿದ ಉಸ್ಮಾನ್ ಖವಾಜ, ಪೀಟರ್‌ ಹ್ಯಾಂಡ್ಸ್‌ಕಂಬ್

ಡೆಲ್ಲಿ(ಫೆ.17): ಟೀಂ ಇಂಡಿಯಾ ಮಾರಕ ವೇಗಿ ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ಡೆಲ್ಲಿ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 263 ರನ್‌ಗಳಿಗೆ ಸರ್ವಪತನ ಕಂಡಿದೆ. ಉಸ್ಮಾನ್ ಖವಾಜ ಹಾಗೂ ಪೀಟರ್‌ ಹ್ಯಾಂಡ್ಸ್‌ಕಂಬ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಮೊದಲ ದಿನವೇ ಕಾಂಗರೂ ಪಡೆ ಆಲೌಟ್ ಮುಖಭಂಗ ಅನುಭವಿಸಿದೆ.

ಇಲ್ಲಿನ ಅರುಣ್‌ ಜೇಟ್ಲಿ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಎಚ್ಚರಿಯ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜ ಜೋಡಿ 50 ರನ್‌ಗಳ ಜತೆಯಾಟವಾಡಿತು. ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದ ಡೇವಿಡ್ ವಾರ್ನರ್ ಅವರನ್ನು ಬಲಿ ಪಡೆಯುವಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಯಶಸ್ವಿಯಾದರು. ವಾರ್ನರ್ 15 ರನ್‌ ಬಾರಿಸಿ ಕೆ ಎಸ್‌ ಭರತ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಎರಡನೇ ವಿಕೆಟ್‌ಗೆ ಉಸ್ಮಾನ್ ಖವಾಜ ಹಾಗೂ ಮಾರ್ನಸ್‌ ಲಬುಶೇನ್ ಜೋಡಿಯು 41 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು. ಲಬುಶೇನ್‌ 18 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ಸ್ಟೀವ್‌ ಸ್ಮಿತ್‌ಗೂ(00) ಕೂಡಾ ಅಶ್ವಿನ್‌ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಮ್ಯಾಟ್ ರೆನ್‌ಶೋ ಬದಲಿಗೆ ತಂಡ ಕೂಡಿಕೊಂಡ ಟ್ರಾವಿಸ್ ಹೆಡ್‌ ಬ್ಯಾಟಿಂಗ್ ಕೇವಲ 12 ರನ್‌ಗಳಿಗೆ ಸೀಮಿತವಾಯಿತು. 

Scroll to load tweet…

ಖವಾಜ-ಹ್ಯಾಂಡ್ಸ್‌ಕಂಬ್‌ ಆಕರ್ಷಕ ಅರ್ಧಶತಕ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ, ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಉಸ್ಮಾನ್ ಖವಾಜ 125 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 81 ರನ್‌ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಖವಾಜ ವಿಕೆಟ್ ಪತನದ ಬಳಿಕ ಪೀಟರ್ ಹ್ಯಾಂಡ್ಸ್‌ಕಂಬ್ ಹಾಗೂ ಪ್ಯಾಟ್ ಕಮಿನ್ಸ್‌ ಜೋಡಿ 7ನೇ ವಿಕೆಟ್‌ಗೆ 59 ರನ್‌ಗಳ ಜತೆಯಾಟವಾಡಿತು. ನಾಯಕ ಪ್ಯಾಟ್ ಕಮಿನ್ಸ್‌ 59 ಎಸೆತಗಳಲ್ಲಿ 33 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪೀಟರ್ ಹ್ಯಾಂಡ್ಸ್‌ಕಂಬ್‌ 72 ರನ್ ಬಾರಿಸಿ ಅಜೇಯರಾಗುಳಿದರು.