ಸದ್ಯ ಕನ್ನಡಿಗ ಕೆ ಎಲ್ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಏಕದಿನ ಸರಣಿಯಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವು ಸೆಮೀಸ್‌ನಲ್ಲೇ ಮುಗ್ಗರಿಸುವ ಮೂಲಕ ಫೈನಲ್‌ಗೇರುವ ಅವಕಾಶ ಕೈಚೆಲ್ಲಿತ್ತು.

ಬೆಂಗಳೂರು(ಡಿ.18): 2023-24ರ ರಣಜಿ ಟ್ರೋಫಿಗೆ ಕರ್ನಾಟಕ ಸಂಭವನೀಯ ಆಟಗಾರರ ಪಟ್ಟಿ ಪ್ರಕಟಗೊಂಡಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ 32 ಆಟಗಾರರ ಪಟ್ಟಿಯಲ್ಲಿ ಕೆಲ ಹೊಸ ಮುಖಗಳಿಗೆ ಸ್ಥಾನ ಸಿಕ್ಕಿದೆ. ಜ.5ರಿಂದ ರಣಜಿ ಪಂದ್ಯಾವಳಿ ಆರಂಭಗೊಳ್ಳಲಿದೆ.

ಸದ್ಯ ಕನ್ನಡಿಗ ಕೆ ಎಲ್ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಏಕದಿನ ಸರಣಿಯಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವು ಸೆಮೀಸ್‌ನಲ್ಲೇ ಮುಗ್ಗರಿಸುವ ಮೂಲಕ ಫೈನಲ್‌ಗೇರುವ ಅವಕಾಶ ಕೈಚೆಲ್ಲಿತ್ತು.

ಸಂಭವನೀಯ ಆಟಗಾರರ ಪಟ್ಟಿ: ಕೆ ಎಲ್ ರಾಹುಲ್‌, ಮಯಾಂಕ್‌ ಅಗರ್‌ವಾಲ್, ಪ್ರಸಿದ್ಧ್‌ ಕೃಷ್ಣ, ದೇವದತ್ ಪಡಿಕ್ಕಲ್‌, ಮನೀಶ್‌ ಪಾಂಡೆ, ಕೆ.ಗೌತಮ್‌, ರವಿಕುಮಾರ್ ಸಮರ್ಥ್‌, ವಿದ್ವತ್‌ ಕಾವೇರಪ್ಪ, ನಿಕಿನ್‌ ಜೋಸ್, ವಾಸುಕಿ ಕೌಶಿಕ್‌, ವೈಶಾಖ್‌, ಶರತ್‌ ಶ್ರೀನಿವಾಸ್‌, ಜಗದೀಶ್ ಸುಚಿತ್‌, ಶುಭಾಂಗ್‌ ಹೆಗ್ಡೆ, ವೆಂಕಟೇಶ್‌, ಮನೋಜ್‌, ಶರತ್‌ ಬಿ.ಆರ್‌., ಹಾರ್ದಿಕ್‌ ರಾಜ್‌, ನಿಶ್ಚಲ್‌, ಕಿಶನ್‌, ವಿಶಾಲ್‌, ರೋಹಿತ್‌, ಯಶೋವರ್ಧನ್‌, ಕೃತಿಕ್‌, ಸ್ಮರಣ್‌, ಅಭಿಲಾಷ್‌, ಶಶಿಕುಮಾರ್‌, ಮೊಹ್ಸಿನ್‌, ಅನೀಶ್‌, ಅನೀಶ್ವರ್‌, ಅಭಿನವ್‌, ಸುಜಯ್‌.

ಟೆಸ್ಟ್‌ ಸರಣಿಯಿಂದ ಹಿಂದೆ ಸರಿದ ಇಶಾನ್‌ ಕಿಶನ್‌

ನವದೆಹಲಿ: ವೈಯಕ್ತಿಕ ಕಾರಣಗಳಿಂದಾಗಿ ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್‌ ಪಂದ್ಯಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ. ಅವರ ಬದಲು ಬಿಸಿಸಿಐ ಆಯ್ಕೆ ಸಮಿತಿ ಕೆ.ಎಸ್‌.ಭರತ್‌ರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಭರತ್‌ ಸದ್ಯ ದ.ಆಫ್ರಿಕಾ ‘ಎ’ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ‘ಎ’ ತಂಡವನ್ನು ಮುನ್ನಡೆಸುತ್ತಿದ್ದಾರೆ. ಡಿ.26ರಿಂದ ಮೊದಲ ಟೆಸ್ಟ್‌ ಆರಂಭಗೊಳ್ಳಲಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಕ್ಲಬ್‌ಗೆ ಆಸ್ಟ್ರೇಲಿಯಾದ ನೇಥನ್‌ ಲಯನ್‌

ಭಾರತ ಪರ ಆಡಿದ 400ನೇ ಕ್ರಿಕೆಟಿಗ ಸಾಯಿ ಸುದರ್ಶನ್‌

ಜೋಹಾನ್ಸ್‌ಬರ್ಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ 400ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಸಾಯಿ ಸುದರ್ಶನ್‌ ಪಾತ್ರರಾದರು. ಭಾನುವಾರ ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಅವರು ಪಾದಾರ್ಪಣೆ ಮಾಡಿದರು. 1961ರಲ್ಲಿ ಬಾಲೂ ಗುಪ್ತೆ ಭಾರತ ಪರ ಆಡಿದ 100ನೇ ಆಟಗಾರ ಎನ್ನುವ ಖ್ಯಾತಿ ಪಡೆದರೆ, 1990ರಲ್ಲಿ ಗುರುಶರಣ್‌ ಸಿಂಗ್‌ 200ನೇ ಆಟಗಾರ ಎನ್ನುವ ಹಿರಿಮೆ ಗಳಿಸಿದ್ದರು. 2008ರಲ್ಲಿ ಮನ್‌ಪ್ರೀತ್‌ ಗೋನಿ ಭಾರತದ ಕ್ಯಾಪ್‌ ಪಡೆದ 300ನೇ ಆಟಗಾರ ಎನಿಸಿದ್ದರು.

ಸಾಯಿ-ಶ್ರೇಯಸ್ ಅರ್ಧಶತಕ, ಮೊದಲ ಏಕದಿನದಲ್ಲಿ ಸೌತ್ ಆಫ್ರಿಕಾ ಮಣಿಸಿ ದಾಖಲೆ ಬರೆದ ಭಾರತ!

ಐಪಿಎಲ್‌: ಮೊದಲ ಬಾರಿಗೆ ಮಹಿಳಾ ಹರಾಜುಗಾರ್ತಿ!

ದುಬೈ: ಐಪಿಎಲ್‌ 17ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯನ್ನು ಮಲ್ಲಿಕಾ ಸಾಗರ್‌ ನಡೆಸಿಕೊಡಲಿದ್ದಾರೆ. ಮಂಗಳವಾರ (ಡಿ.19) ಹರಾಜು ಪ್ರಕ್ರಿಯೆ ನಡೆಯಲಿದ್ದು, ಐಪಿಎಲ್‌ನಲ್ಲಿ ಮಹಿಳಾ ಹರಾಜುಗಾರ್ತಿ ಕಾಣಿಸಿಕೊಳ್ಳಲಿರುವುದು ಇದೇ ಮೊದಲು. ಮಲ್ಲಿಕಾ ಖ್ಯಾತ ಹರಾಜುಗಾರ್ತಿಯಾಗಿದ್ದು, ಎರಡು ಆವೃತ್ತಿಗಳ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಲೀಗ್‌ನ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಮೊದಲ 10 ಆವೃತ್ತಿಗಳ ಹರಾಜು ಪ್ರಕ್ರಿಯೆಯನ್ನು ರಿಚರ್ಡ್‌ ಮೆಡ್ಲೆ ಯಶಸ್ವಿಯಾಗಿ ನಡೆಸಿದ್ದರು. ಆ ಬಳಿಕ ಹ್ಯೂ ಎಡ್ಮೆಡೆಸ್‌ ಹರಾಜುಗಾರರಾಗಿ ಕಾಣಿಸಿಕೊಂಡಿದ್ದರು.