ಅಲ್ಪಮೊತ್ತಕ್ಕೆ ಸೌತ್ ಆಫ್ರಿಕಾ ತಂಡವನ್ನು ಕಟ್ಟಿಹಾಕಿದ ಭಾರತ, ಸುಲಭವಾಗಿ ಟಾರ್ಗೆಟ್ ಚೇಸ್ ಮಾಡಿದೆ. ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ನೆರವಿನಿಂದ ಭಾರತ 8 ವಿಕೆಟ್ ಗೆಲುವು ದಾಖಲಿಸಿದೆ.

ಜೋಹಾನ್ಸ್‌ಬರ್ಗ್(ಡಿ.17) ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ 1-1 ಅಂತರದಲ್ಲಿ ಸಮಗೊಳಿಸಿದ ಭಾರತ, ಇದೀಗ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮಾರಕ ದಾಳಿ ಮೂಲಕ ಸೌತ್ ಆಫ್ರಿಕಾ ತಂಡವನ್ನು 116 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, 16.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. 8 ವಿಕೆಟ್ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಹಲವು ದಾಖಲೆ ಬರೆದಿದೆ.

ಬಾಲ್ ಉಳಿಸಿಕೊಂಡು ಭಾರತ ದಾಖಲಿಸಿದ 4ನೇ ಅತೀ ದೊಡ್ಡ ಗೆಲುವು ಅನ್ನೋ ಹೆಗ್ಗಳಿಕೆ ಈ ಪಂದ್ಯ ಪಾತ್ರವಾಗಿದೆ. ಭಾರತ 200ಕ್ಕೂ ಎಸತೆ ಬಾಕಿ ಇರುವಂತೆ ಗೆಲುವು ದಾಖಲಿಸಿದೆ. 

ಹಾರ್ದಿಕ್ ಪಾಂಡ್ಯ ಕೈಗೆ ಹೋಗುತ್ತಾ ಟಿ20 ವಿಶ್ವಕಪ್ ನಾಯಕತ್ವ..? ಪಾಂಡ್ಯ ನಾಯಕತ್ವದಡಿ ಆಡಲು ರೋಹಿತ್ ರೆಡಿ

ಭಾರತದ ಅತೀ ದೊಡ್ಡ ಗೆಲವು(ಬಾಲ್ ಉಳಿಸಿ ಗೆಲುವು)
 263 vs ಶ್ರೀಲಂಕಾ (2023) 
231 vs ಕೀನ್ಯಾ, (2001)
211 vs ವೆಸ್ಟ್ ಇಂಡೀಸ್, ತಿರುವನಂತಪುರಂ (2018)
200 vs ಸೌತ್ ಆಫ್ರಿಕಾ(2023)

ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಸಾಯಿ ಸುದರ್ಶನ ಭರವಸೆ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಪಾದರ್ಪಣೆ ಪಂದ್ಯದಲ್ಲಿ ಅಜೇಯ ಹಾಫ್ ಸೆಂಚುರಿ ಸಿಡಿಸಿ ಭಾರತಕ್ಕೆ ಗೆಲುವಿನ ಸಿಹಿ ನೀಡಿದ್ದಾರೆ. ಈ ಮೂಲಕ ಏಕದಿನ ಪದಾರ್ಪಣೆ ಪಂದ್ಯದಲ್ಲೇ 50+ ಸ್ಕೋರ್ ಮಾಡಿದ 4ನೇ ಭಾರತೀಯ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ.

ಏಕದಿನ ಪದಾರ್ಪಣೆ ಪಂದ್ಯದಲ್ಲಿ 50+ ಸ್ಕೋರ್(ಟೀಂ ಇಂಡಿಯಾ)
 86 ರನ್: ರಾಬಿನ್ ಉತ್ತಪ್ಪ (2006)
100* ರನ್ : ಕೆಎಲ್ ರಾಹುಲ್ (2016)
55* ರನ್: ಫೈಜ್ ಫೈಜಲ್ (2016)
55* ರನ್: ಸಾಯಿ ಸುದರ್ಶನ್ (2023)

ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯಿಂದ ಮೊಹಮ್ಮದ್ ಶಮಿ ಔಟ್..!

117 ರನ್ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ ಆರಂಭಿಕ ಹಂತದಲ್ಲಿ ರುತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ರುತುರಾಜ್ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ ಹೋರಾಟ ಟೀಂ ಇಂಡಿಯಾ ಗೆಲುವು ಖಚಿತಪಡಿಸಿತು. ಸಾಯಿ ಹಾಗೂ ಶ್ರೇಯಸ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಶ್ರೇಯಸ್ ಅಯ್ಯರ್ 45 ಎಸೆತದಲ್ಲಿ 52 ರನ್ ಸಿಡಿಸಿ ನಿರ್ಗಮಿಸಿದರು. ಸಾಯಿ ಸುದರ್ಶನ್ 43 ಎಸೆತದಲ್ಲಿ ಅಜೇಯ 55 ರನ್ ಸಿಡಿಸಿದರು. ಈ ಮೂಲಕ ಭಾರತ 16.4 ಓವರ್‌ಗಳಲ್ಲಿ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.