ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಕ್ಲಬ್‌ಗೆ ಆಸ್ಟ್ರೇಲಿಯಾದ ನೇಥನ್‌ ಲಯನ್‌

ಶೇನ್ ವಾರ್ನ್‌ ಬಳಿಕ ಆಸ್ಟ್ರೇಲಿಯಾದ ಸ್ಪಿನ್ ಅಸ್ತ್ರವಾಗಿ ಬೆಳೆದುನಿಂತ ಲಯನ್, ಇದೀಗ ಆಸೀಸ್‌ ಪರ 500+ ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೊದಲು ಶೇನ್ ವಾರ್ನ್‌(708) ಹಾಗೂ ಗ್ಲೆನ್ ಮೆಗ್ರಾಥ್(563) ವಿಕೆಟ್ ಉರುಳಿಸಿದ್ದಾರೆ. 

Nathan Lyon Joins Legendary List With 500th Test Wicket kvn

ಪರ್ತ್(ಡಿ.18): ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಕಬಳಿಸಿದ ಬೌಲರ್‌ಗಳ ಸಾಲಿಗೆ ಆಸ್ಟ್ರೇಲಿಯಾದ ತಾರಾ ಸ್ಪಿನ್ನರ್‌ ನೇಥನ್‌ ಲಯನ್‌ ಸೇರ್ಪಡೆಗೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಫಹೀಂ ಅಶ್ರಫ್‌ರ ವಿಕೆಟ್‌ ಪಡೆದು ಲಯನ್‌ ಈ ಮೈಲಿಗಲ್ಲು ತಲುಪಿದರು. ಟೆಸ್ಟ್‌ನಲ್ಲಿ ಈ ಸಾಧನೆ ಒಟ್ಟಾರೆ 8ನೇ ಬೌಲರ್‌ ಎನ್ನುವ ಖ್ಯಾತಿಗೆ ಲಯನ್‌ ಪಾತ್ರರಾಗಿದ್ದಾರೆ.

ಶೇನ್ ವಾರ್ನ್‌ ಬಳಿಕ ಆಸ್ಟ್ರೇಲಿಯಾದ ಸ್ಪಿನ್ ಅಸ್ತ್ರವಾಗಿ ಬೆಳೆದುನಿಂತ ಲಯನ್, ಇದೀಗ ಆಸೀಸ್‌ ಪರ 500+ ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೊದಲು ಶೇನ್ ವಾರ್ನ್‌(708) ಹಾಗೂ ಗ್ಲೆನ್ ಮೆಗ್ರಾಥ್(563) ವಿಕೆಟ್ ಉರುಳಿಸಿದ್ದಾರೆ. 

ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳು ಇವರು :

ಮುತ್ತಯ್ಯ ಮುರಳೀಧರನ್‌ (ಶ್ರೀಲಂಕಾ । 133 ಪಂದ್ಯ, 800 ವಿಕೆಟ್‌)
ಶೇನ್‌ ವಾರ್ನ್‌ (ಆಸ್ಟ್ರೇಲಿಯಾ । 145 ಪಂದ್ಯ । 708 ವಿಕೆಟ್‌ )
ಜೇಮ್ಸ್‌ ಆ್ಯಂಡರ್‌ಸನ್‌ (ಇಂಗ್ಲೆಂಡ್‌ । 183 ಪಂದ್ಯ । 690* ವಿಕೆಟ್‌)
ಅನಿಲ್‌ ಕುಂಬ್ಳೆ (ಭಾರತ । 132 ಪಂದ್ಯ ।619 ವಿಕೆಟ್‌)
ಸ್ಟುವರ್ಟ್‌ ಬ್ರಾಡ್‌ (ಇಂಗ್ಲೆಂಡ್‌ । 167 ಪಂದ್ಯ । 604 ವಿಕೆಟ್‌)
ಗ್ಲೆನ್‌ ಮೆಗ್ರಾಥ್‌ (ಆಸ್ಟ್ರೇಲಿಯಾ । 124 ಪಂದ್ಯ । 563 ವಿಕೆಟ್‌)
ಕರ್ಟ್ನಿ ವಾಲ್ಶ್‌ (ವೆಸ್ಟ್‌ಇಂಡೀಸ್‌ । 132 ಪಂದ್ಯ । 519 ವಿಕೆಟ್‌)
ನೇಥನ್‌ ಲಯನ್‌ (ಆಸ್ಟ್ರೇಲಿಯಾ । 123 ಪಂದ್ಯ । 501 ವಿಕೆಟ್‌)

ಪಾಕ್‌ ವಿರುದ್ಧ ಆಸೀಸ್‌ಗೆ 360 ರನ್‌ಗಳ ಗೆಲುವು!

ಪರ್ತ್‌: ಹಾಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಪ್ರವಾಸಿ ಪಾಕಿಸ್ತಾನವನ್ನು ಮೊದಲ ಟೆಸ್ಟ್‌ನಲ್ಲಿ 360 ರನ್‌ಗಳಿಂದ ಹೊಸಕಿಹಾಕಿದೆ. ಗೆಲ್ಲಲು 450 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಪಾಕಿಸ್ತಾನ, 2ನೇ ಇನ್ನಿಂಗ್ಸಲ್ಲಿ ಕೇವಲ 89 ರನ್‌ಗೆ ಆಲೌಟ್‌ ಆಗಿ ಆಸೀಸ್‌ ನೆಲದಲ್ಲಿ ಸತತ 15ನೇ ಟೆಸ್ಟ್‌ ಸೋಲು ಅನುಭವಿಸಿತು.

ಆವೇಶ್-ಆರ್ಶದೀಪ್ ಬಿರುಗಾಳಿ, ಹರಿಣಗಳ ವಿಕೆಟ್ ಚೆಲ್ಲಾಪಿಲ್ಲಿ: ಮೊದಲ ಒನ್‌ಡೇ ಗೆಲ್ಲಲು ಭಾರತಕ್ಕೆ 117 ಗುರಿ

4ನೇ ದಿನದಾಟದ ಭೋಜನ ವಿರಾಮ ಮುಗಿದ ಬಳಿಕ 5ಕ್ಕೆ 233 ರನ್‌ ಗಳಿಸಿ 2ನೇ ಇನ್ನಿಂಗ್ಸನ್ನು ಆಸೀಸ್‌ ಡಿಕ್ಲೇರ್‌ ಮಾಡಿಕೊಂಡಿತು. ಆ ನಂತರ ಪಾಕಿಸ್ತಾನವನ್ನು ಆಲೌಟ್‌ ಮಾಡಲು ಆಸೀಸ್‌ ಕೇವಲ 30.2 ಓವರ್‌ ತೆಗೆದುಕೊಂಡಿತು. ಸ್ಟಾರ್ಕ್‌, ಹೇಜಲ್‌ವುಡ್‌ ತಲಾ 3 ವಿಕೆಟ್‌ ಕಿತ್ತರು. 3 ಪಂದ್ಯಗಳ ಸರಣಿಯಲ್ಲಿ ಆಸೀಸ್‌ 1-0 ಮುನ್ನಡೆ ಪಡೆದಿದೆ. 2ನೇ ಟೆಸ್ಟ್‌ ಡಿ.26ರಿಂದ ಆರಂಭಗೊಳ್ಳಲಿದೆ.

ಟಿ20: 223 ರನ್‌ ಗುರಿ ಬೆನ್ನತ್ತಿ ಗೆದ್ದ ಇಂಗ್ಲೆಂಡ್‌

ಸೇಂಟ್‌ ಜಾರ್ಜ್ಸ್‌(ಗ್ರೆನಾಡ): 223 ರನ್‌ಗಳ ಬೃಹತ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ವೆಸ್ಟ್‌ಇಂಡೀಸ್‌ ವಿರುದ್ಧ ಟಿ20 ಸರಣಿ ಗೆಲ್ಲುವ ಆಸೆಯನ್ನು ಇಂಗ್ಲೆಂಡ್‌ ಜೀವಂತವಾಗಿರಿಸಿಕೊಂಡಿದೆ. ಶನಿವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಫಿಲ್‌ ಸಾಲ್ಟ್‌ರ ಶತಕ, ಹ್ಯಾರಿ ಬ್ರೂಕ್‌ರ ವಿಸ್ಫೋಟಕ ಆಟದ ನೆರವಿನಿಂದ ಇಂಗ್ಲೆಂಡ್‌ 1 ಎಸೆತ ಬಾಕಿ ಇರುವಂತೆ 7 ವಿಕೆಟ್‌ ಜಯ ಸಾಧಿಸಿತು. 

ಸಾಯಿ-ಶ್ರೇಯಸ್ ಅರ್ಧಶತಕ, ಮೊದಲ ಏಕದಿನದಲ್ಲಿ ಸೌತ್ ಆಫ್ರಿಕಾ ಮಣಿಸಿ ದಾಖಲೆ ಬರೆದ ಭಾರತ!

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ಪೂರನ್‌ (82)ರ ಆಕರ್ಷಕದ ಪರಿಣಾಮ 6 ವಿಕೆಟ್‌ಗೆ 222 ರನ್‌ ಗಳಿಸಿತು. ಸಾಲ್ಟ್‌ 56 ಎಸೆತದಲ್ಲಿ 4 ಬೌಂಡರಿ, 9 ಸಿಕ್ಸರ್‌ನೊಂದಿಗೆ ಔಟಾಗದೆ 109 ರನ್‌ ಸಿಡಿಸಿದರೆ, ಕೊನೆಯ ಓವರಲ್ಲಿ ಗೆಲ್ಲಲು 21 ರನ್‌ ಬೇಕಿದ್ದಾಗ, ಆ್ಯಂಡ್ರೆ ರಸೆಲ್‌ರನ್ನು ಗುರಿಯಾಗಿಸಿ 24 ರನ್‌ ಸಿಡಿಸಿದ ಬ್ರೂಕ್‌, ಒಟ್ಟಾರೆ 7 ಎಸೆತದಲ್ಲಿ 31 ರನ್‌ ಚಚ್ಚಿ ತಂಡವನ್ನು ಗೆಲ್ಲಿಸಿದರು. 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ 2-1ರ ಮುನ್ನಡೆಯಲ್ಲಿದೆ.
 

Latest Videos
Follow Us:
Download App:
  • android
  • ios