Asianet Suvarna News Asianet Suvarna News

Ranji Trophy: ಸಿಡಿಲಬ್ಬರದ ತ್ರಿಶತಕ ಚಚ್ಚಿದ ಪೃಥ್ವಿ ಶಾ..! ಅಸ್ಸಾಂ ಮೇಲೆ ಮುಂಬೈ ಸವಾರಿ..!

ರಣಜಿ ಟ್ರೋಫಿ ಟೂರ್ನಿಯಲ್ಲಿ ತ್ರಿಶತಕ ಚಚ್ಚಿದ ಪೃಥ್ವಿ ಶಾ
ಅಸ್ಸಾಂ ಎದುರು ಸ್ಪೋಟಕ 379 ರನ್ ಬಾರಿಸಿದ ಮುಂಬೈ ಆರಂಭಿಕ ಬ್ಯಾಟರ್
ಕೇವಲ 21 ರನ್ ಅಂತರದಲ್ಲಿ 400 ರನ್ ಬಾರಿಸುವ ಅವಕಾಶ ಕೈಚೆಲ್ಲಿದ ಪೃಥ್ವಿ

Ranji Trophy 2023 Prithvi Shaw continues resurgence with 379 misses out on a well deserved 400 kvn
Author
First Published Jan 11, 2023, 4:12 PM IST

ಗುವಾಹಟಿ(ಜ.11): ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಕ್ರಿಕೆಟರ್ ಪೃಥ್ವಿ ಶಾ ಬ್ಯಾಟಿಂಗ್ ವೈಭವ ಮುಂದುವರೆದಿದೆ. ಮುಂಬೈ ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ, ಅಸ್ಸಾಂ ಎದುರಿನ ಪಂದ್ಯದಲ್ಲಿ ಆಕರ್ಷಕ 379 ರನ್ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಕೇವಲ 21 ರನ್ ಅಂತರದಲ್ಲಿ 400 ರನ್ ಬಾರಿಸಿ ಬಾರಿಸಿದ ಆಟಗಾರ ಎನಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿದ್ದಾರೆ.

ಸ್ಪೋಟಕ ಆರಂಭಿಕ ಬ್ಯಾಟರ್ ಪೃಥ್ವಿ ಶಾ, ಅಸ್ಸಾಂ ಎದುರಿನ ಮೊದಲ ದಿನದಾಟದಲ್ಲೇ 283 ಎಸೆತಗಳಲ್ಲಿ 240 ರನ್ ಸಿಡಿಸುವ ಮೂಲಕ ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ದರು. 23 ವರ್ಷದ ಪ್ರತಿಭಾನ್ವಿತ ಬ್ಯಾಟರ್‌ ಪೃಥ್ವಿ ಶಾ, ಎರಡನೇ ದಿನವು ತನ್ನ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಅಸ್ಸಾಂ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪೃಥ್ವಿ ಶಾ ಕೇವಲ 326 ಎಸೆತಗಳನ್ನು ಎದುರಿಸಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಮೊದಲ ತ್ರಿಶತಕ ಸಿಡಿಸಿ ಮಿಂಚಿದರು. ಪೃಥ್ವಿ ಶಾ, ತ್ರಿಶತಕ ಬಾರಿಸಿದ ಬಳಿಕ ಮತ್ತಷ್ಟು ಬ್ಯಾಟಿಂಗ್ ಮೊರೆ ಹೋದರು.

ಪೃಥ್ವಿ ಶಾ, ಸರಿಸುಮಾರು ತಮ್ಮ ಇನಿಂಗ್ಸ್‌ನುದ್ದಕ್ಕೂ ನೂರರ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸುತ್ತಾ ಸಾಗಿದರು. ಬೌಂಡರಿಯ ನಾನಾ ಮೂಲೆಗಳಿಗೆ ಚೆಂಡನ್ನು ಅಟ್ಟುವ ಮೂಲಕ ಅಸ್ಸಾಂ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅಂತಿಮವಾಗಿ ಪೃಥ್ವಿ ಶಾ 379 ರನ್‌ ಬಾರಿಸಿ, ಕೇವಲ 21 ರನ್‌ ಅಂತರದಲ್ಲಿ 400 ರನ್ ಬಾರಿಸುವ ಅವಕಾಶವನ್ನು ಕೈಚೆಲ್ಲಿದರು.

ಈ ತ್ರಿಶತಕದೊಂದಿಗೆ ಪೃಥ್ವಿ ಶಾ, ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್(340), ಚೇತೇಶ್ವರ್ ಪೂಜಾರ(352) ಹಾಗೂ ವಿವಿಎಸ್ ಲಕ್ಷ್ಮಣ್(353) ಅವರ ಹೆಸರಿನಲ್ಲಿದ್ದ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲೆಯನ್ನು ಸರಿಗಟ್ಟಿದರು. ಇನ್ನು ಇದಷ್ಟೇ ಅಲ್ಲದೇ ಸಂಜಯ್ ಮಂಜೇಕರ್(377)ರನ್‌ಗಳ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾದರು. 32 ವರ್ಷಗಳ ಹಿಂದೆ ಸಂಜಯ್ ಮಂಜ್ರೇಕರ್, ಮುಂಬೈ ತಂಡದ ಪರ ರಣಜಿ ಕ್ರಿಕೆಟ್‌ನಲ್ಲಿ(377) ಪರ ವೈಯುಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ್ದರು. ಆದರೆ ಇದೀಗ ಆ ದಾಖಲೆ ಪೃಥ್ವಿ ಶಾ ಪಾಲಾಗಿದೆ. 

98 ರನ್ ಗಳಿಸಿದ್ದಾಗ ಶಾನಕ ಮಂಕಡ್ ರನೌಟ್‌ ಮಾಡಲೆತ್ನಿಸಿದ ಶಮಿ..! ಮತ್ತೆ ಹೃದಯ ಗೆದ್ದ ಕ್ಯಾಪ್ಟನ್‌ ರೋಹಿತ್ ಶರ್ಮಾ

ಅಂತಿಮವಾಗಿ ಪೃಥ್ವಿ ಶಾ ವಿಕೆಟ್ ಕಬಳಿಸುವಲ್ಲಿ ಅಸ್ಸಾಂ ತಂಡದ ರಿಯಾನ್‌ ಪರಾಗ್ ಯಶಸ್ವಿಯಾದರು. ಪೃಥ್ವಿ ಶಾ ವಿಕೆಟ್ ಒಪ್ಪಿಸುವ ಮುನ್ನ 383 ಎಸೆತಗಳನ್ನು ಎದುರಿಸಿ 49 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 379 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ಸದ್ಯ ಮುಂಬೈ ತಂಡವು 4 ವಿಕೆಟ್ ಕಳೆದುಕೊಂಡು 687 ರನ್‌ ಬಾರಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ. ಇದಾದ ಬಳಿಕ ಇನಿಂಗ್ಸ್‌ ಆರಂಭಿಸಿರುವ ಅಸ್ಸಾಂ ತಂಡವು ಎಚ್ಚರಿಕೆಯ ಆರಂಭವನ್ನು ಪಡೆದಿದೆ. ಅಸ್ಸಾಂ ತಂಡವು ಮೊದಲ 28 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 100 ರನ್ ಬಾರಿಸಿದ್ದು, ಇನ್ನೂ 587 ರನ್‌ಗಳ ಹಿನ್ನಡೆಯಲ್ಲಿದೆ.

Follow Us:
Download App:
  • android
  • ios