13 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ರಣಜಿ ಕ್ರಿಕೆಟ್‌ಗೆ ಮರಳಿದ್ದಾರೆ. ರೈಲ್ವೆ ವಿರುದ್ಧದ ಪಂದ್ಯ ವೀಕ್ಷಿಸಲು ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ಜನಸಾಗರ. ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರವೇಶ. ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವ್ಯವಸ್ಥೆ. ದೆಹಲಿ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ಆಡುವ ನಿರೀಕ್ಷೆ.

ನವದೆಹಲಿ: ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ 13 ವರ್ಷಗಳ ನಂತರ ವಿರಾಟ್ ಕೊಹ್ಲಿ ಆಡ್ತಿದ್ದಾರೆ. 2012ರಲ್ಲಿ ಕೊಹ್ಲಿ ಕೊನೆಯದಾಗಿ ರಣಜಿ ಟ್ರೋಫಿ ಆಡಿದ್ದು. ವಿರೇಂದ್ರ ಸೆಹ್ವಾಗ್ ಕ್ಯಾಪ್ಟನ್ ಆಗಿದ್ದ ಉತ್ತರ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಕೊನೆಯ ಬಾರಿಗೆ ರಣಜಿ ಪಂದ್ಯವನ್ನಾಡಿದ್ದರು. ಇದೀಗ ಗುರುವಾರ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ರೈಲ್ವೆ ವಿರುದ್ಧ ಆಡ್ತಿರೋದು ಆ ಹಳೇ ಕೊಹ್ಲಿ ಅಲ್ಲ. ಈಗ ಅವರು ಇಂಡಿಯನ್ ಕ್ರಿಕೆಟ್‌ನ ಕಿಂಗ್.

ಫಾರ್ಮ್‌ನಲ್ಲಿ ಇಲ್ಲ ಅಂದ್ರೂ ವಿರಾಟ್ ಕೊಹ್ಲಿ ಆಟ ನೋಡೋಕೆ ಜನ ಬರ್ತಾರೆ ಅನ್ನೋದು ಗ್ಯಾರಂಟಿ. ಫಾರ್ಮ್ ಹಿಡಿಯೋಕೆ, ಬಿಸಿಸಿಐ ಹೇಳಿದ ಹಾಗೆ ಎಲ್ಲ ಆಟಗಾರರೂ ದೇಶೀ ಕ್ರಿಕೆಟ್ ಆಡ್ಬೇಕು ಅಂತ ಕೊಹ್ಲಿ ರಣಜಿ ಟ್ರೋಫಿ ಆಡ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಕೊಹ್ಲಿ ಕ್ರಮಾಂಕದಲ್ಲಿ ಆಡ್ತಾರೆ ಅಂತ ದಿಲ್ಲಿ ಕ್ಯಾಪ್ಟನ್ ಆಯುಷ್ ಬದೋನಿ ಹೇಳಿದ್ದಾರೆ. ಕೊಹ್ಲಿ ಆಡೋದ್ರಿಂದ ಸ್ಟೇಡಿಯಂ ಫುಲ್ ಆಗಿದೆ. ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಇದೆ.

12 ಅಂಕೆಯ ಆಧಾರ್ ಕಾರ್ಡ್ ಕುರಿತ ಸಂಪೂರ್ಣ ಮಾಹಿತಿ

Scroll to load tweet…

ಹರಾಜಿನಲ್ಲಿ ಮಹಾ ಎಡವಟ್ಟು ಮಾಡಿಕೊಳ್ತಾ ಆರ್‌ಸಿಬಿ? ಈತನ ಆಟ ನೋಡಿದ್ರೆ ಈ ಸಲನೂ ಕಪ್ ಗೆಲ್ಲೋದು ಡೌಟ್!

ಸ್ಟೇಡಿಯಂಗೆ ಫ್ರೀ ಎಂಟ್ರಿ ಅಂತ ದಿಲ್ಲಿ ಕ್ರಿಕೆಟ್ ಅಸೋಸಿಯೇಷನ್ ಹೇಳಿದೆ. ಆಧಾರ್ ಕಾರ್ಡ್ ತೋರಿಸಿದ್ರೆ ಸಾಕು. ಗೌತಮ್ ಗಂಭೀರ್ ಸ್ಟ್ಯಾಂಡ್‌ನ 16, 17 ಗೇಟ್‌ಗಳಿಂದ ಎಂಟ್ರಿ ಅಂತ ಅಶೋಕ್ ಕುಮಾರ್ ಶರ್ಮಾ ಹೇಳಿದ್ದಾರೆ. ಹೀಗಾಗಿ ಡೆಲ್ಲಿಯಲ್ಲಿರುವ ಕ್ರಿಕೆಟ್ ಪ್ರೇಮಿಗಳು ತಮ್ಮ ಆಧಾರ್ ಕಾರ್ಡ್‌ ಅನ್ನು ಎಂಟ್ರಿ ಗೇಟ್‌ನಲ್ಲಿ ತೋರಿಸಿದ್ರೆ ಉಚಿತವಾಗಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯನ್ನು ಕಣ್ತುಂಬಿಕೊಳ್ಳಬಹುದು.

Scroll to load tweet…

ವಿರಾಟ್ ಕೊಹ್ಲಿ ಆಡೋದ್ರಿಂದ ಹೆಚ್ಚಿನ ಭದ್ರತೆ ಕೇಳಿದ್ದೀವಿ. ಇದು ಸಾಮಾನ್ಯ ರಣಜಿ ಪಂದ್ಯ ಅಲ್ಲ, ನಮ್ಮ ಚೀಕು ಆಡ್ತಿದ್ದಾರೆ ಅಂತ ಅಶೋಕ್ ಕುಮಾರ್ ಶರ್ಮಾ ಹೇಳಿದ್ದಾರೆ. ಇನ್ನು ಇದೇ ವೇಳೆ ಕೊಹ್ಲಿಗೆ ಸನ್ಮಾನ ಇಲ್ಲ ಅಂತಲೂ ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ಮೇಲೆ ರೋಹಿತ್ ಶರ್ಮಾ ಗರಂ; ಬಿಸಿಸಿಐಗೆ ಕಂಪ್ಲೆಂಟ್ ಕೊಟ್ರಾ ಹಿಟ್‌ಮ್ಯಾನ್?

ಕೊಹ್ಲಿ ರಣಜಿ ಪಂದ್ಯ; ಕಣ್ತುಂಬಿಕೊಳ್ಳಲು ಜನಸಾಗರ

13 ವರ್ಷಗಳ ನಂತರ ವಿರಾಟ್ ಕೊಹ್ಲಿ ರಣಜಿ ಟ್ರೋಫಿಗೆ ಮರಳಿರುವುದನ್ನು ನೋಡಲು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜನಸಾಗರ. ಪಂದ್ಯ 9.30ಕ್ಕೆ ಆರಂಭವಾದರೂ, ಗಂಟೆಗಳ ಮುಂಚೆಯೇ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದ ಮುಂದೆ ಜಮಾಯಿಸಿದ್ದರು. 'ಆರ್‌ಸಿಬಿ.. ಆರ್‌ಸಿಬಿ...' ಎಂದು ಜೈಕಾರ ಹಾಕಿದರು. ರೈಲ್ವೆ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಡುತ್ತಿದ್ದಾರೆ. ಮೊದಲ ದಿನವೇ ಕೊಹ್ಲಿ ಬ್ಯಾಟಿಂಗ್ ನೋಡಲು ಸಿಗುತ್ತದೆಯೇ ಎಂದು ಕಾದು ನೋಡಬೇಕು. ಟಾಸ್ ಗೆದ್ದ ದೆಹಲಿ ನಾಯಕ ಆಯುಷ್ ಬದೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಉಚಿತವಾಗಿ ನೋಡುವುದು ಹೇಗೆ?

ಮೊದಲು ದೆಹಲಿಯ ಪಂದ್ಯದ ನೇರಪ್ರಸಾರ ಇರಲಿಲ್ಲ. ಆದರೆ ಕೊಹ್ಲಿ ಆಡುವುದು ಖಚಿತವಾದ ನಂತರ ಬಿಸಿಸಿಐ ನೇರಪ್ರಸಾರದ ವ್ಯವಸ್ಥೆ ಮಾಡಿದೆ. ಜಿಯೋ ಸಿನಿಮಾ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೇರಪ್ರಸಾರ ನೋಡಬಹುದು.