ಕೆಲವೇ ಹೊತ್ತಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಆದರೆ ಇದೇ ನಾಯಕರು ಇಬ್ಬರು 6 ತಿಂಗಳ ಹಿಂದೆ ಟಿ20 ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. ಈ ರೋಚಕ ಹೋರಾಟದಲ್ಲಿ ಗೆದ್ದಿದ್ದು ಯಾರು?

ಅಹಮ್ಮದಾಬಾದ್(ಜೂ.03) ಐಪಿಎಲ್ ಪೈನಲ್ ಹಬ್ಬದ ವಾತಾವರಣ ದೇಶಾದ್ಯಂತ ವ್ಯಕ್ತವಾಗುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಹೋರಾಟಕ್ಕೆ ಕಾತರರಗೊಂಡಿದ್ದಾರೆ. ಇತ್ತ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಹಾಗೂ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅತ್ಯಂತ ಮಹತ್ವದ ಫೈನಲ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶೇಷ ಅಂದರೆ ಇವರಿಬ್ಬರು ಈ ರೀತಿ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವದು ಇದೇ ಮೊದಲಲ್ಲ. 6 ತಿಂಗಳ ಹಿಂದೆ ಟಿ20 ಫೈನಲ್ ಪಂದ್ಯದಲ್ಲಿ ರಜತ್ ಪಾಟೀದಾರ್ ಹಾಗೂ ಶ್ರೇಯಸ್ ಅಯ್ಯರ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಏನಾಗಿತ್ತು?

ಸೈಯದ್ ಮುಷ್ತಾಕ್ ಆಲಿ ಫೈನಲ್ ಪಂದ್ಯದಲ್ಲಿ ಮುಖಾಮುಖಿ

ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಹಾಗೂ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ 6 ತಿಂಗಳ ಹಿಂದೆ ಅಂದರೆ 2024ರ ಡಿಸೆಂಬರ್ ತಿಂಗಳಲ್ಲಿ ಮುಖಾಮುಖಿಯಾಗಿದ್ದಾರೆ. ಸೈಯದ್ ಮುಷ್ತಾಕ್ ಆಲಿ ಟಿ20 ಫೈನಲ್ ಪಂದ್ಯದಲ್ಲಿ ಇದೇ ನಾಯಕರು ಮುಖಾಮುಖಿಯಾಗಿದ್ದರು. ರಜತ್ ಪಾಟಿದಾರ್ ಮಧ್ಯಪ್ರದೇಶದ ನಾಯಕನಾಗಿದ್ದರೆ, ಶ್ರೇಯಸ್ ಅಯ್ಯರ್ ಮುಂಬೈ ತಂಡದ ನಾಯಕನಾಗಿದ್ದುರು.

ಫೈನಲ್ ಫೈಟ್

ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಮಧ್ಯ ಪ್ರದೇಶ ಆರಂಭದಲ್ಲಿ ಆತಂಕ ಎದುರಿಸಿತ್ತು. 6 ರನ್‌ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. 42 ರನ್ ಸಿಡಿಸುವಾಗ 3ನೇ ವಿಕೆಟ್ ಪತನಗೊಂಡಿತ್ತು. 84 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಧ್ಯಪ್ರದೇಶ ತಂಡಕ್ಕೆ ಆಸರೆಯಾಗಿದ್ದು ನಾಯಕ ರಜತ್ ಪಾಟೀದಾರ್. ಸ್ಫೋಟಕ ಬ್ಯಾಟಿಂಗ್ ಮೂಲಕ ಮಧ್ಯಪ್ರದೇಶ ತಂಡಕ್ಕೆ ನೆರವಾದರು. ರಜತ್ ಪಾಟಿದಾರ್ 200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಈ ಮೂಲಕ 40 ಎಸೆತದಲ್ಲಿ 81 ರನ್ ಸಿಡಿಸಿದರು. ಇದರಿಂದ ಮಧ್ಯಪ್ರದೇಶ 174 ರನ್ ಸಿಡಿಸಿತ್ತು.

ಮುಂಬೈಗೆ 175 ರನ್ ಗುರಿ

ಮುಂಬೈ ತಂಡಕ್ಕೆ 175 ರನ್ ಟಾರ್ಗೆಟ್ ನೀಡಲಾಗಿತ್ತು. ಆದರೆ ಆರಂಭದಲ್ಲೇ ಪೃಥ್ವಿ ಶಾ 10 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ 37 ರನ್ ಸಿಡಿಸಿ ಔಟಾದರು. ಮುಂಬೈ 42 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೇವಲ 16 ರನ್ ಸಿಡಿಸಿ ಔಟಾಗಿದ್ದರು. ಸೂರ್ಯಕುಮಾರ್ ಯಾದವ್ ಹೋರಾಟ ಪಂದ್ಯದ ಗತಿ ಬದಲಿಸಿತ್ತು. ಸ್ಫೋಟಕ ಬ್ಯಾಟಿಂಗ್ ಮೂಲಕ ಸೂರ್ಯಕುಮಾರ್ ಯಾದವ್ 48 ರನ್ ಸಿಡಿಸಿದ್ದರು. ಶಿವಂ ದುಬೆ ಕೇವಲ 9 ರನ್ ಸಿಡಿಸಿ ಔಟಾಗಿದ್ದರು. ಸುರ್ಯಾಂಶ್ ಶೆಗ್ಡೆ ಅಥರ್ವ ಅಂಕೋಲೆಕರ್ ಹೋರಾಟದಿಂದ ಮುಂಬೈ ಗೆಲುವಿನತ್ತ ತಲುಪಿತ್ತು. ಸುರ್ಯಾಂಶ್ ಅಜೇಯ 36 ರನ್ ಸಿಡಿಸಿದರು. ಈ ಮೂಲಕ ಮುಂಬೈ 5 ವಿಕೆಟ್ ಗೆಲುವು ಕಂಡಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ತಂಡ ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಗೆದ್ದುಕೊಂಡಿತು.

ಇದು ಆರ್‌ಸಿಬಿ, ಇಲ್ಲಿ ಹೋರಾಟವೇ ಬೇರೆ

ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮುಂಬೈ ಗೆದ್ದುಕೊಂಡಿದೆ. ಆದರೆ ಐಪಿಎಲ್ ಪೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ಹೋರಾಟ. ಆರ್‌ಸಿಬಿ ಇಡೀ ತಂಡವಾಗಿ ಹೋರಾಡುತ್ತಿದೆ. ಒಬ್ಬರ ಮೇಲೆ ಅವಲಂಬಿತವಾಗಿಲ್ಲ. ಪ್ರತಿಯೊಬ್ಬರು ತಂಡದ ಗೆಲುವಿನಲ್ಲಿ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಈಬಾರಿ ರಜತ್ ಪಾಟೀದಾರ್ 6 ತಿಂಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.