ಜೈಪುರ(ನ.15): ಐಪಿಎಲ್ ಹರಾಜಿಗೆ ರೆಡಿಯಾಗಿರುವ ರಾಜಸ್ಥಾನ ರಾಯಲ್ಸ್ ಆಟಗಾರರನ್ನು ರಿಲೀಸ್ ಮಾಡಿ ಅಂತಿಮ ಪಟ್ಟಿ ಪ್ರಕಟಿಸಿದೆ. 2019ರ ಆವೃತ್ತಿಯಲ್ಲಿ ತಂಡದ ನಾಯಕ ಜವಾಬ್ದಾರಿ ವಹಿಸಿದ್ದ ಅಜಿಂಕ್ಯ ರಹಾನೆ ಟ್ರೇಡಿಂಗ್  ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. ಇದೀಗ ರಾಯಲ್ಸ್ ತಂಡಕ್ಕೆ ಸ್ಟೀವ್ ಸ್ಮಿತ್ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: IPL 2020: ಹನ್ನೊಂದು ಆಟಗಾರರನ್ನು ಕೈಬಿಟ್ಟ ರಾಜಸ್ಥಾನ ರಾಯಲ್ಸ್

ರಾಜಸ್ಥಾನ ರಾಯಲ್ಸ್ ತಂಡದ ನೂತನ ಕೋಚ್ ಆ್ಯಂಡ್ರೋ ಮೆಕ್‌ಡೋನಾಲ್ಡ್ ನಾಯಕತ್ವದ ಕುರಿತು ಸ್ಪಷ್ಟಪಡಿಸಿದ್ದಾರೆ. 2020ರ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ ಎಂದು ಡೋನಾಲ್ಡ್ ಹೇಳಿದ್ದಾರೆ. ಸ್ಟೀವ್ ಸ್ಮಿತ್ ನಾಯಕತ್ವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!.

ರಾಜಸ್ಥಾನ ತಂಡ 11 ಆಟಗಾರರನ್ನು ರಿಲೀಸ್ ಮಾಡಿದೆ. ಆರ್ಯಮನ್ ಬಿರ್ಲಾ, ಆಸ್ಟನ್ ಟರ್ನರ್ , ಇಶ್ ಸೋದಿ, ಜಯದೇವ್ ಉನಾದ್ಕತ್ , ಲಿಯಾಮ್ ಲಿವಿಂಗ್’ಸ್ಟೋನ್, ಓಶಾನೆ ಥಾಮಸ್,  ಪ್ರಶಾಂತ್ ಛೋಪ್ರಾ, ರಾಹುಲ್ ತ್ರಿಪಾಠಿ, ಶುಭಂ ರಂಜನೆ, ಸ್ಟುವರ್ಟ್ ಬಿನ್ನಿ ಹಾಗೂ ಸುದೇಶನ್ ಮಿದುನ್ ತಂಡದಿಂದ ಕೈಬಿಡಲಾಗಿದೆ.